2026 ರ ಫೆಬ್ರವರಿ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು
2026 ರ ಫೆಬ್ರವರಿ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು
"ಕ್ರಿಸ್ತನಲ್ಲಿ ನೆಲೆಗೊಂಡಿರುವುದು"
The Month of "Settled"
ದೇವರು ಈ ತಿಂಗಳು ಆತ್ಮ ಮಂಡಲದಲ್ಲಿ ನೆಲೆಗೊಂಡಿರುವ ವಾಗ್ದಾನವನ್ನು ನಿಮ್ಮ ಜೀವನದಲ್ಲಿ, ನಿಮ್ಮ ಶರೀರದಲ್ಲಿ ಹೇಗೆ ನೆರವೇರುತ್ತದೆ? ಹೇಗೆ ಪ್ರಕಟವಾಗುತ್ತದೆ? ಅದು ಪ್ರಕಟವಾಗುವುದಕ್ಕೆ ನಿಮ್ಮ ಪ್ರಯತ್ನ ಅಲ್ಲ, ನಿಮ್ಮ ಬಲ ಅಲ್ಲ, ನಿಮ್ಮ ಸಾಮರ್ಥ್ಯ ಅಲ್ಲ, ನೀವು ಆತನಲ್ಲಿ ಇರುವಾಗ ಆತನ ಕಾರ್ಯಗಳು ನಿಮ್ಮಲ್ಲಿ ಕಾರ್ಯ ಪ್ರಕಟವಾಗುತ್ತವೆ ಎನ್ನುವುದಕ್ಕೆ ಸಾಕ್ಷಿಯಾಗಿರುತ್ತೀರಿ.
ಪ್ರವಾದನೆಯ ವಾಗ್ದಾನದ ವಾಕ್ಯ :
ಕೀರ್ತನೆಗಳು 119:89
ಯೆಹೋವನೇ, ನಿನ್ನ ವಾಕ್ಯವು ಪರಲೋಕದಲ್ಲಿ ಶಾಶ್ವತವಾಗಿ ಸ್ಥಾಪಿಸಲ್ಪಟ್ಟದೆ.
ಒಂದೊಂದು ಭಾಷಾಂತರದಲ್ಲಿ ಒಂದೊಂದು ತರ ಇದೆ. ನಾನು ರೆಫರ್ ಮಾಡಿದ ಭಾಷಾಂತರದಲ್ಲಿ, "ಓ ಕರ್ತನೇ ಎಂದೆಂದಿಗೂ ನಿನ್ನ ವಾಕ್ಯವು ಪರ ಲೋಕದಲ್ಲಿ ಸ್ಥಿರವಾಗಿದೆ".
Settled: ಕನ್ನಡದಲ್ಲಿ ಮೂರು ಪದಗಳಿವೆ, ಸ್ಥಾಪಿತವಾಗಿದೆ, ನೆಲೆಗೊಂಡಿದೆ ಮತ್ತು ಸ್ಥಿರವಾಗಿದೆ.
Settled ಸಾಮಾನ್ಯವಾಗಿ ಇದರ ಅರ್ಥ ಏನೆಂದರೆ - ಒಂದು ಕಾರ್ಯ ನೆರವೇರಿದೆ, ಅದು ಫಿಕ್ಸ್ ಆಗಿದೆ, ಅದನ್ನು ಅಲುಗಾಡಿಸಲು ಆಗುವುದಿಲ್ಲ, ಅದೇ ತೀರ್ಪು, ಅದರ ಮೇಲೆ ಒಂದು ಬದಲಾವಣೆ ಇಲ್ಲ ಮತ್ತು ಅದನ್ನು ನಾವು ಬದಲಾಯಿಸಲು ಸಾಧ್ಯವಿಲ್ಲ ಎಂದು ಅರ್ಥ.
ಸೆಟಲ್ಡ್ ಎನ್ನುವ ಪದ ಸ್ಥಾಪಿತವಾಗಿದೆ, ನೆಲೆಗೊಂಡಿದೆ ಸ್ಥಿರವಾಗಿದೆ ಅದೇ ಕೊನೆ ಅದನ್ನು ಬದಲಾಯಿಸಲು ಆಗುವುದಿಲ್ಲ,
ದೇವರ ವಾಕ್ಯ ಅದರಂತೆಯೇ ಲೋಕದಲ್ಲಿ ಸ್ಥಾಪಿತವಾಗಿದೆ.
ವಾಕ್ಯ ಪರಲೋಕದಲ್ಲಿ ಸ್ಥಾಪಿತವಾದರೆ ನಮ್ಮ ಜೀವನದಲ್ಲಿ ಹೇಗೆ ಅನುಭವಿಸುವುದು,?
Ex: ಭಾರತವನ್ನು ಆಳ್ವಿಕೆ ಮಾಡುವುದು ಕೇಂದ್ರ ಸರ್ಕಾರ, ಒಂದೊಂದು ರಾಜ್ಯಕ್ಕೆ ಒಂದೊಂದು ಸರ್ಕಾರ ಇದೆ, ಈ ಎಲ್ಲಾ ಸರ್ಕಾರದ ಮೇಲೆ ಒಂದು ಸರ್ಕಾರ ಇದೆ, ಅದೇ ಕೇಂದ್ರ ಸರ್ಕಾರ. ಕೇಂದ್ರ ಸರ್ಕಾರದಿಂದಲೇ ಇಡೀ ದೇಶವನ್ನು ಆಳ್ವಿಕೆ ಮಾಡುವುದು.
ಅದರಂತೆಯೇ ದೇವರ ವಾಗ್ದಾನವು ಎಲ್ಲವೂ ಪರಲೋಕದಲ್ಲಿ ಸ್ಥಾಪಿತವಾಗಿದೆ ಸ್ಥಿರವಾಗಿದೆ ಮತ್ತು ನೆಲೆಗೊಂಡಿದೆ. ಪರಲೋಕದಿಂದಲೇ ಭೂಮಿ ಆಳ್ವಿಕೆ ಮಾಡಲ್ಪಡುವುದು. ಅದೇ ನಮ್ಮ ಸರ್ಕಾರ 🎉🎉🎉.
ದೇವರ ಸಿಂಹಾಸನದಲ್ಲಿ ದೇವರ ಸರ್ಕಾರ, ದೇವರ ಅಧಿಕಾರ, ದೇವರ ಕಮಾಂಡ್ ಸೆಂಟರ್ ಪರಲೋಕ. ಅಲ್ಲಿಂದ ಒಂದು ಆಜ್ಞೆ ಬಿಡುಗಡೆ ಆದರೇನೆ ಈ ಭೂಮಿಯಲ್ಲಿ ಕಾರ್ಯ ನೆರವೇರುವುದು. ದೇವರು ಬೆಳಕು ಉಂಟಾಗಲಿ ಎಂದು ಹೇಳಿದ ಕೂಡಲೇ ಬೆಳಕು ಉಂಟಾಯಿತು. ಮರಗಿಡಗಳು ಉಂಟಾಗಲಿ, ರಾತ್ರಿ ಹಗಲನ್ನು ಎರಡಾಗಿ ಮಾಡಲಿ, ಆದಿಕಾಂಡ ಮೊದಲನೇ ಅಧ್ಯಾಯದಲ್ಲಿ ಹತ್ತು ಸಲ ದೇವರು ಹೇಳಿದರು, ಇಲ್ಲವೇ ದೇವರು ಮಾತಾಡಿದರು. ಅವರು ಮಾತಾಡಿದಂತೆಯೇ ಆಯಿತು, ಅದನ್ನು ಒಳ್ಳೆಯದೆಂದು ಕಂಡರು. ಇದು ಆ ಕಮಾಂಡ್ ಸೆಂಟರ್ ನಿಂದ ದೇವರು ಹೇಳಿದ ಮಾತುಗಳು ಈ ಭೂಮಿಯಲ್ಲಿ ಹಾಗೆ ಪ್ರಕಟವಾದವು.
ಈ ಫೆಬ್ರುವರಿ ತಿಂಗಳಿಗೆ ದೇವರು ಕೊಡುತ್ತಿರುವ ವಾಗ್ದಾನ "ಸೆಟಲ್ಡ್".
ನಾನು ಯಾವ ವಾಕ್ಯದ ಪ್ರಕಟಣೆಯನ್ನು ಹೇಳಿದರೂ ನೀವು ಎಂಬ ಶರೀರದ ಮನುಷ್ಯನಿಗೆ ಹೇಳುತ್ತಿಲ್ಲ, ನೀವು ಎಂಬುವ ಆತ್ಮದ ವ್ಯಕ್ತಿಗೆ ಮಾತಾಡುತ್ತೇನೆ. ದೇವರ ಸಂಬಂಧ, ದೇವರ ಅನ್ಯೋನ್ಯತೆಯು ಕೂಡ ಶರೀರದ ವ್ಯಕ್ತಿಯ ಜೊತೆ ಅಲ್ಲ, "ನೀವು" ಎಂಬ "ಆತ್ಮದ ವ್ಯಕ್ತಿ"ಯ ಜೊತೆ ಇರುತ್ತದೆ.
ದೇವರು ನಿಮ್ಮನ್ನು ಆತನ ಹೋಲಿಕೆಯಲ್ಲಿ ಆತನ ಸ್ವರೂಪದಲ್ಲಿ ಸೃಷ್ಟಿಸಿದ್ದಾರೆ ಎಂದು ಹೇಳುವಾಗ, ದೇವರು ಆತ್ಮವಾಗಿದ್ದಾರೆ, ಅವರ ಹಾಗೆಯೇ ನಾವು ಕೂಡ ಆತ್ಮವಾಗಿದ್ದೇವೆ. ನೀವು ಎಂಬ ಆತ್ಮದ ವ್ಯಕ್ತಿಗೆ ಒಂದು ಶರೀರ ಕೊಡಲ್ಪಟ್ಟಿದೆ. ನೀವು ಎಂಬ ಆತ್ಮದ ವ್ಯಕ್ತಿ ಪರಲೋಕದಲ್ಲಿ ಸ್ಥಾಪಿತವಾಗಿರುವ ಆ ವಾಗ್ದಾನಗಳನ್ನು, ನೀವು ಎಂಬುವ ಆತ್ಮದ ವ್ಯಕ್ತಿ ಹೊಂದಿಕೊಂಡು ಆತ್ಮದ ಮಂಡಲದಲ್ಲಿರುವುದೆಲ್ಲಾ ಕಾಣದ ರೂಪದಲ್ಲಿದೆ. ನಮ್ಮ ಪ್ರಾಣ ನಮ್ಮ ಮನಸ್ಸು ನಮ್ಮ ಹೃದಯ ಅದನ್ನು ಸ್ವೀಕರಿಸಿಕೊಂಡು, ಈ ಶರೀರದಲ್ಲಿ ಕಾಣುವ ರೂಪದಲ್ಲಿ ಪ್ರಕಟಿಸುವುದೇ ದೇವರ ಮಹಿಮೆ ಎಂದು ಕರೆಯುವುದು.
ಈ ಲೋಕ ಪಾಪದ ನಿಮಿತ್ತವಾಗಿ ಬಿದ್ದು ಹೋಗಿರುವ ಲೋಕವಾಗಿದೆ. ಈ ಲೋಕದಲ್ಲಿ ಚೆನ್ನಾಗಿ ಆಶೀರ್ವಾದದಲ್ಲಿರುವವರ ಸಂಖ್ಯೆಗಿಂತ ಸಮಸ್ಯೆಯಲ್ಲಿ ನರಳಾಡಿ, ನೋವಿನಲ್ಲಿ ಇರುವವರ ಸಂಖ್ಯೆ ಹೆಚ್ಚಾಗಿದೆ.
ಯಾರಾದರೂ ಒಬ್ಬರು ನಾನು ಪರಿಪೂರ್ಣನಾಗಿದ್ದೇನೆ, ನನಗೆ ಸಮಸ್ಯೆಯೇ ಇಲ್ಲ, ಎಲ್ಲದರಲ್ಲಿಯೂ ನಾನು ತೃಪ್ತಿಯಾಗಿದ್ದೇನೆ ಎಂದು ಹೇಳುವವರು ಒಬ್ಬರೂ ಕೂಡ ಇಲ್ಲ. ಇದು ಪಾಪದ ನಿಮಿತ್ತವಾಗಿ ಬಿದ್ದು ಹೋಗಿರುವ ಲೋಕ. ಆದರೆ ದೇವರು ನಮಗೆ ಪ್ರವಾದನಾತ್ಮಕವಾಗಿ ಘೋಷಿಸುತ್ತಿದ್ದಾರೆ, "ಇಂಥ ಬಿದ್ದು ಹೋದ ಲೋಕದಲ್ಲಿ ನಿನ್ನನ್ನು ಸ್ಥಾಪಿಸಿದ್ದೇನೆ. ಬಿದ್ದು ಹೋಗಿರುವ ಲೋಕದಲ್ಲಿ, ಬಿದ್ದು ಹೋಗಿರುವ ಸ್ವಭಾವವನ್ನು ಹೊಂದಿಕೊಂಡು, ಬಿದ್ದುಹೋಗಿರುವ ಕಾರ್ಯಗಳನ್ನೇ ನೋಡಿ, ಬಿದ್ದು ಹೋಗಿರುವ ಕಾರ್ಯಗಳನ್ನೇ ಅನುಭವಿಸುವ ಒಂದು ಲೋಕದಲ್ಲಿ ನಿಮ್ಮನ್ನು ಪ್ರತ್ಯೇಕವಾಗಿ ಯೇಸು ಕ್ರಿಸ್ತನಲ್ಲಿ ಆರಿಸಿಕೊಂಡು ಆತನ ಜೀವ, ಆತನ ಸಾಮರ್ಥ್ಯ, ಆತನ ಬಲವನ್ನು ಇಟ್ಟು,- "ನನ್ನಲ್ಲಿ ನೀನು ನೆಲೆಗೊಂಡಿದ್ದೀಯಾ" ಎಂದು ದೇವರು ಹೇಳುತ್ತಿದ್ದಾರೆ.
ನನ್ನಲ್ಲಿ ನೀನು ಸ್ಥಾಪಿತವಾಗಿದ್ದೀಯಾ, ನನ್ನಲ್ಲಿ ನೀನು ಸ್ಥಿರವಾಗಿದ್ದೀಯಾ ಎಂದು ದೇವರು ವಾಗ್ದಾನ ಮಾಡುತ್ತಿದ್ದಾರೆ.
ದೇವರು ಈ ಭೂಮಿಯಲ್ಲಿ ಏನಾದರೂ ಒಂದು ಕಾರ್ಯ ಪ್ರಕಟಿಸಬೇಕು, ವ್ಯಕ್ತಪಡಿಸಬೇಕು, ಪ್ರದರ್ಶಿಸಬೇಕು ಅಂದರೆ ಆ ಕಾರ್ಯ ಮೊದಲು ಪರಲೋಕದಲ್ಲಿ ಸ್ಥಾಪನೆ ಆಗಿರಬೇಕು. ಅದಕ್ಕಾಗಿಯೇ ದೇವರ ವಾಗ್ದಾನ ಎಲ್ಲವೂ ಪರಲೋಕದಲ್ಲಿ ಸ್ಥಿರವಾಗಿದೆ, ಅದು ಸ್ಥಾಪಿತವಾಗಿದೆ, ಅದು ನೆಲೆಗೊಂಡಿದೆ.
ಇವತ್ತು ಸಭೆಗೆ ಹೋಗಿ ನನಗೆ ಸಮಾಧಾನ ಉಂಟಾಗಲಿ, ನನ್ನ ಸಮಸ್ಯೆ ಪರಿಹಾರವಾಗಲಿ, ನನ್ನ ಕಾಯಿಲೆ ಗುಣವಾಗಲಿ, ನನ್ನ ಸಾಲ ತೀರಲಿ ಎನ್ನುವ ಭಾವನೆಯಿಂದ ಬಂದಿದ್ದರೆ, ನೀವು ಬಂದಿರುವುದು ಸರಿಯಾಗಿದೆ.
ಈ ಸತ್ಯವನ್ನು ಕೇಳಿದ ಮೇಲೆ ಈ ಸಮಸ್ಯೆ ಹೇಗೆ ಪರಿಹಾರ ಆಗುತ್ತದೆ, ಎನ್ನುವ ರಹಸ್ಯ ವನ್ನು ತಿಳಿದುಕೊಂಡು ಬಿಟ್ಟರೆ, ನೀವು ಸಮಸ್ಯೆಯನ್ನು ಪರಿಹರಿಸುವುದಕ್ಕೆ ಕಷ್ಟಪಡುವುದಿಲ್ಲ ಹೋರಾಡುವುದಿಲ್ಲ, ನಮ್ಮ ದೇವರು ಒಂದು ಸಮಸ್ಯೆಯಲ್ಲಿ ಸಿಕ್ಕಿಹಾಕಿಕೊಂಡ ಮೇಲೆ ಅದನ್ನು ರಿಪೇರಿ ಮಾಡುವವರಲ್ಲ, ನೀನು ನನ್ನಲ್ಲಿದ್ದರೆ ನಿನ್ನ ಸಮಸ್ಯೆ ಮಾಯವಾಗಬೇಕು, ನಿನಗೆ ಸಮಸ್ಯೆಯೇ ಬಂದಿಲ್ಲ ಎನ್ನುವ ರೀತಿ, ನಿನಗೆ ಅನಾರೋಗ್ಯ ಬಂದ ಹಾಗೆ ಇರಬಾರದು.
ಪ್ರವಾದನೆಯ ಅರಿಕೆ : ನೀವು ನಿಮ್ಮ ಬಲದಿಂದ ,ನಿಮ್ಮ ಜ್ಞಾನದಿಂದ ಜೀವಿಸುವವರಲ್ಲ, ದೇವರ ವಾಕ್ಯವೇ ನಿಮ್ಮನ್ನು ನಡೆಸುವುದರಿಂದ, ದೇವರ ಉದ್ದೇಶದ ಪ್ರಕಾರ ನಿಮ್ಮ ಜೀವಿತದಲ್ಲಿ ಆತನ ವಾಕ್ಯ ಸ್ಥಾಪನೆಯಾಗಿರುವುದರಿಂದ, ಎಲ್ಲವೂ ಕ್ರಮವಾಗಿ, ಸರಿಯಾಗಿ, ಆಶೀರ್ವಾದವಾಗಿ, ಜಯವಾಗಿಯೇ ನಡೆಯುವುದೆಂದು ಯೇಸುವಿನ ನಾಮದಲ್ಲಿ ಅರಿಕೆ ಮಾಡುತ್ತೇನೆ.
ಒಂದು ಸತ್ಯ ಏನೆಂದರೆ ದೇವರ ವಾಕ್ಯವು ನಿಮ್ಮ ಪರಿಸ್ಥಿತಿಯನ್ನು ನೋಡಿ, ಅದರಂತೆ ವಾಕ್ಯ ಕೆಲಸ ಮಾಡುವುದಿಲ್ಲ, ಆದರೆ ಪರಿಸ್ಥಿತಿಗಳು ದೇವರ ವಾಕ್ಯವನ್ನು ನೋಡಿ ಪ್ರತಿಕ್ರಿಯಿಸುತ್ತದೆ. ಈ ಸತ್ಯ ಮಾಹಿತಿಯಾಗಿರದೇ, ಪ್ರಕಟಣೆಯಾಗಿ ಬರಬೇಕು. ದೇವರ ವಾಕ್ಯ ಇರುವುದು ನಿಮ್ಮ ಪರಿಸ್ಥಿತಿಗಳನ್ನು ಬದಲಾಯಿಸಲು ಅಲ್ಲ, ದೇವರ ವಾಕ್ಯ ಜಗದುತ್ಪತ್ತಿಗೆ ಮುಂಚೆಯೇ, ಯೇಸುಕ್ರಿಸ್ತನಲ್ಲಿ ಸ್ಥಾಪನೆಯಾಗಿರುವ ಕಾರ್ಯಗಳಿಗೆ, ಪರಿಸ್ಥಿತಿ ಬದಲಾವಣೆಯಾಗಿ ವಾಕ್ಯಕ್ಕೆ ವಿಧೇಯವಾಗುವ ಹಾಗೆ ಮಾಡುವ ಕಾರ್ಯವಾಗಿದೆ. ಯಾರ್ಯಾರು ನನಗೆ ಈ ಅನಾರೋಗ್ಯದಿಂದ ಬಿಡುಗಡೆಯಾಗಲಿ, ನನ್ನ ಸಾಲ ತೀರಲಿ ಎಂದು ಬಂದಿದ್ದರೆ, ದೇವರು ನಿಮ್ಮ ಪರಿಸ್ಥಿತಿ ಸಮಸ್ಯೆಗಳನ್ನು ಪರಿಹರಿಸುತ್ತಿಲ್ಲ, ದೇವರ ವಾಕ್ಯ ನಿಮ್ಮನ್ನೇ ಬದಲಾಯಿಸುತ್ತಿದೆ, ನೀವು ನೋಡುವ ರೀತಿಯನ್ನು ಬದಲಾಯಿಸುತ್ತಿದೆ, ನಿಮ್ಮ ನಂಬಿಕೆಯನ್ನು ಬದಲಾಯಿಸುತ್ತಿದೆ, ನಿಮ್ಮ ಮನಸ್ಥಿತಿಯನ್ನು ಬದಲಾಯಿಸುತ್ತಿದೆ ನಿಮ್ಮ ಭಾವನೆ ಗಳನ್ನು ಬದಲಾಯಿಸುತ್ತಿದೆ.
ಅದು ಹೇಗೆ?
ನಿಮ್ಮಲ್ಲಿ ಬದಲಾವಣೆಯಾಗುವಾಗ ಅಲ್ಲಿಯವರೆಗೆ ಬರೀ ಸಮಸ್ಯೆಗಳನ್ನು ನೋಡುತ್ತಿದ್ದ ನಿಮ್ಮ ಶರೀರದ ಕಣ್ಣುಗಳು ಮುಚ್ಚಿ, ಈಗ ನಿಮ್ಮ ಆತ್ಮದ ಕಣ್ಣುಗಳು ತೆರೆದು, ಪರಲೋಕದಲ್ಲಿ ನಿಮಗೋಸ್ಕರ ಏರ್ಪಡಿಸಿರುವ ಆಶೀರ್ವಾದಗಳು ಪರಲೋಕ ಮಂಡಲದಲ್ಲಿ ಅದು ಸ್ಥಾಪನೆಯಾಗಿದೆ. ನೆಲೆಗೊಂಡಿದೆ ಸ್ಥಿರವಾಗಿದೆ.
ಅದಕ್ಕೆ ಮತ್ತಾಯ 6:10 ರಲ್ಲಿ ವಾಕ್ಯ ಹೇಳುವ ಪ್ರಕಾರ, ಪರಲೋಕದಲ್ಲಿ ನೆರವೇರುವಂತೆ ನಿನ್ನ ಚಿತ್ತ ಭೂಲೋಕದಲ್ಲಿಯೂ ನೆರವೇರಲಿ ಎಂದು. ಪರಲೋಕದಲ್ಲಿ ಯಾವ ರೀತಿ ಎಲ್ಲವೂ ಸ್ಥಿರವಾಗಿ, ನೆಲೆಗೊಂಡಿದೆಯೋ, ಸ್ಥಾಪನೆಯಾಗಿದೆಯೋ ಹಾಗೆ ಈ ಭೂಮಿಯಲ್ಲಿ ನಡೆಯಲಿ. ಯೇಸುವಿನ ಪ್ರಾರ್ಥನೆ ಇದು.
ಒಂದು ಸತ್ಯ ಏನೆಂದರೆ, ಈ ಭೂಮಿಯಲ್ಲಿ ಎಲ್ಲಾ ಕಾರ್ಯಗಳು ದೇವರ ಉದ್ದೇಶದ ಪ್ರಕಾರ ವಾಗಬೇಕು ಎಂದು ಹೇಳಿದರೆ ಅದು ಪರಲೋಕದಲ್ಲಿ ನೆಲೆಗೊಂಡಿರಬೇಕು. ಪರಲೋಕದಲ್ಲಿ ದೇವರ ಕಾರ್ಯಗಳು ಇಲ್ಲದೆ ಇರುವುದು, ಭೂಮಿಯಲ್ಲಿ ಪ್ರಕಟವಾಗುವುದಿಲ್ಲ, ಅಲ್ಲಿ ಇಲ್ಲದೇ ಇರುವುದು ಇಲ್ಲಿ ಪ್ರಕಟವಾಗುತ್ತಿದೆ ಅಂದರೆ ಅದು ದೇವರ ಉದ್ದೇಶದ ಪ್ರಕಾರ ಇಲ್ಲ. ದೇವರ ಚಿತ್ತ ದೇವರ ಉದ್ದೇಶಕ್ಕೆ ನಿಮ್ಮನ್ನು ಒಪ್ಪಿಸಿಕೊಡದೆ, ನಿಮ್ಮ ಆಸೆಗೆ, ನಿಮ್ಮ ಇಚ್ಛೆಗೆ, ನಿಮ್ಮ ಜವಾಬ್ದಾರಿಗಳಿಗೆ ದೇವರು ಒಂದು ಕಾರ್ಯವನ್ನು ಮಾಡಬೇಕು ಎಂದು ಒತ್ತಾಯ ಮಾಡುವಾಗ, ಒಂದು ವೇಳೆ ಆ ಕಾರ್ಯ ನೆರವೇರಬಹುದು. ಆದರೆ ದೇವರ ಉದ್ದೇಶದ ಪ್ರಕಾರ ಇಲ್ಲದೇ ಇರುವುದರಿಂದ, ಅದು ಸಮಾಧಾನವಾಗಿರುವುದಿಲ್ಲ ಆಶೀರ್ವಾದವಾಗಿರುವುದಿಲ್ಲ.
ಉದಾಹರಣೆ: 1. ನನಗೆ ಈ ಮನೆ ಬೇಕು ಎಂದು ಏನೇನು ಒತ್ತಡ ಹಾಕಿ ತೆಗೆದುಕೊಂಡಿರುತ್ತಾರೆ. ಆದರೆ ಆ ಮನೆಯಲ್ಲಿ ಸಮಾಧಾನವಾಗಿ ಜೀವಿಸಲು ಆಗುವುದಿಲ್ಲ, 2. ನನಗೆ ಈ ಹುಡುಗಿಯೇ ಬೇಕು ಎಂದು ಏನಾದರೂ ಮಾಡಿ ಮದುವೆ ಆಗುತ್ತಾರೆ, ಮದುವೆಯಲ್ಲಿ ಸಮಾಧಾನ ಇಲ್ಲ.
3. ಇಂಥ ವ್ಯವಹಾರವನ್ನೇ ನಾನು ಮಾಡಬೇಕು ಎಂದು ಶುರು ಮಾಡುತ್ತಾರೆ, ಆದರೆ ವ್ಯಾಪಾರ ಆಶೀರ್ವಾದವಾಗಿ ನಡೆಯುತ್ತಿಲ್ಲ.
ಯಾಕೆ ಗೊತ್ತಾ?
ದೇವರು ನಮ್ಮನ್ನು ನಮ್ಮ ಸ್ವಂತ ಜ್ಞಾನ, ಬಲ, ಸಾಮರ್ಥ್ಯದಿಂದ ಏನೇನು ಮಾಡುವಂತೆ ಡಿಸೈನ್ ಮಾಡಿಲ್ಲ, ದೇವರ ವಾಕ್ಯವನ್ನು ಪ್ರಕಟಣೆಯಾಗಿ ಹೊಂದಿಕೊಳ್ಳುವ ತನಕ ಆ ವಾಕ್ಯದ ಪ್ರಕಾರ ನಾವು ಮಾಡಲು ಸಾಧ್ಯವಿಲ್ಲ, ಅದರ ಫಲವನ್ನು ಅನುಭವಿಸಲು ಸಾಧ್ಯವಿಲ್ಲ. ದೇವರ ವಾಕ್ಯವು ಆತ್ಮದ ಮಂಡಲದಲ್ಲಿ ಪರಲೋಕದಲ್ಲಿ ಸ್ಥಾಪಿತವಾಗಿರುವುದನ್ನು ಒಬ್ಬರು ಬಂದು ನಿಮ್ಮಲ್ಲಿ ಪ್ರಕಟಿಸಬೇಕು. ನಿಮ್ಮಲ್ಲಿ ಪ್ರಕಟಿಸುವವರು ಪವಿತ್ರಾತ್ಮನು.
ಪವಿತ್ರಾತ್ಮನು ನಿಮ್ಮ ಶರೀರದಲ್ಲಿ ಕಾಣುವ ರೂಪದಲ್ಲಿ ಪ್ರಕಟಿಸಬೇಕು ಅಂದರೆ ಆತನ ಶಬ್ದವನ್ನು ಕೇಳಬೇಕು, ಅಂಥವರು ಯಾರ ಶಬ್ದವನ್ನು ಕೇಳುತ್ತಾರೆಂದರೆ ಯೇಸು ಕ್ರಿಸ್ತನ ಶಬ್ದವನ್ನು ಮಾತ್ರವೇ ಕೇಳುತ್ತಾರೆ, ಎಲ್ಲವೂ ಯೇಸು ಕ್ರಿಸ್ತನಲ್ಲಿ ನೆರವೇರಿರುವದು, ಅದಕ್ಕೆ ಎಫೆಸದವರಿಗೆ ಬರೆದ ಪತ್ರಿಕೆ 1: 4 ರಲ್ಲಿ ಹೇಳುತ್ತಿದೆ, ದೇವರ ಮುಂದೆ ನಿಂತುಕೊಳ್ಳುವುದಕ್ಕಾಗಿ ನಿನ್ನ ಸ್ವಂತ ಬಲ, ಜ್ಞಾನ, ಸಾಮರ್ಥ್ಯದಿಂದ ನಿಲ್ಲಿಸಿದರೆ, ನೀನು ಯಾವತ್ತಿದ್ದರೂ ಬಿದ್ದು ಹೋಗಿ ಬಿಡುತ್ತೀಯಾ, ಅದರಿಂದ ನೀನು ಒಬ್ಬಂಟಿಯಾಗಿ ಹೋರಾಡುವ ಅವಶ್ಯಕತೆ ಇಲ್ಲ, ನಿನ್ನನ್ನು ಹಾಗೆಯೇ ಯೇಸು ಕ್ರಿಸ್ತನಲ್ಲಿಟ್ಟು, ನಿನಗೆ ಬೇಕಾಗಿರುವ ಕಾರ್ಯಗಳನ್ನೆಲ್ಲ ಯೇಸು ಕ್ರಿಸ್ತನಲ್ಲಿ ನೆರವೇರಿಸಿದ್ದೇನೆ.
ಆದ್ದರಿಂದ ಯೇಸು ಕ್ರಿಸ್ತನಲ್ಲಿ ನೆರವೇರಿಸಿರುವ ಕಾರ್ಯಗಳನ್ನೆಲ್ಲ ಕಾಣುವ ರೂಪದಲ್ಲಿ ಪ್ರಕಟಿಸುವಂತೆ ಪವಿತ್ರಾತ್ಮನನ್ನು ನಿರಂತರವಾಗಿ ನಮ್ಮಲ್ಲಿ ಮುದ್ರೆ ಹಾಕಿದ್ದಾರೆ. ಯಾರಾದರೂ ತುಂಬಾ ಭಕ್ತಿ ಮಾಡಿ, ತುಂಬಾ ಉಪವಾಸ ಮಾಡಿ, ತುಂಬಾ ಪ್ರಯತ್ನ ಪಟ್ಟು ಇದಕ್ಕಿಂತ ಇನ್ನೇನು ಭಕ್ತಿ ಮಾಡುವುದು, ಎಂದು ಯಾರಾದರೂ ನೋಡುತ್ತಿದ್ದರೆ ಇವತ್ತು ಈ ಸತ್ಯ ನನ್ನನ್ನು ಬಿಡುಗಡೆ ಮಾಡಿದೆ, ಎಂಬ ನಿಶ್ಚಯ ಒಂದು ನಂಬಿಕೆ ನಿಮಗೆ ಉಂಟಾಗಲಿ.
ಈಗ ದೇವರು ಈ ಶರೀರದ ಮೂಲಕ ಆತನ ಮಾತಿಗೆ ಶಬ್ದ ಕೊಡುತ್ತಿರುವಾಗ ಈ ವಾಕ್ಯ ನಿಮ್ಮಲ್ಲಿ ಮಾಹಿತಿಯಾಗಿ ಇರುವುದಿಲ್ಲ, ಈ ವಾಕ್ಯ ಅಭಿಷೇಕ ಮಾಡಲ್ಪಟ್ಟು, ಆತ್ಮವಾಗಿಯೂ ಜೀವ ವಾಗಿಯೂ ಈ ಸತ್ಯ ನಿಮ್ಮನ್ನು ಬಿಡುಗಡೆ ಮಾಡುತ್ತದೆ ಎಂದು ಯೇಸುವಿನ ನಾಮದಲ್ಲಿ ಅರಿಕೆ ಮಾಡುತ್ತೇನೆ.
"ನನ್ನ ಬಾಸುಂಡೆಗಳಿಂದ ನೀನು ಗುಣ ಹೊಂದಿದೀಯ" ಎಂಬ ವಾಗ್ದಾನಗಳನ್ನು ಓದುವಾಗೆಲ್ಲ ಶರೀರ ಹೇಳುತ್ತಿದೆ, ಹೌದು ಬೈಬಲ್ ನಲ್ಲಿ ಬರೆದಿದೆ, ನಾನು 20 ಸಲ ಹೇಳಿಬಿಟ್ಟೆ, ಆದರೂ ನನ್ನ ಕಾಲಿನಲ್ಲಿರುವ ನೋವು ಹೋಗುತ್ತಿಲ್ಲ, ಹೊಟ್ಟೆಯಲ್ಲಿರುವ ನೋವು ಹೋಗುತ್ತಿಲ್ಲ, ಪ್ರತಿಸಲ ಹೋದಾಗಲೂ ಡಾಕ್ಟರ್ ರಿಪೋರ್ಟ್ ಇನ್ನೂ ಸೀರಿಯಸ್ ಆಗಿದೆ, ನೀನು ಆರು ತಿಂಗಳು ಮಾತ್ರ ಉಳಿಯುತ್ತೀಯ ಎಂದು ಹೇಳುತ್ತಾರೆ.
ಯಾಕೆ ನಮಗೆ ಅಂಥ ರಿಪೋರ್ಟ್ ನೋಡುವಾಗ, ಒಂದು ಕಡೆ ಡಾಕ್ಟರ್ ರಿಪೋರ್ಟ್ ಇದೆ ಇನ್ನೊಂದು ಕಡೆ ಬೈಬಲ್ ನಲ್ಲಿ ವಾಕ್ಯ ಇದೆ, ವಾಗ್ದಾನ ಇದೆ, ಎರಡೂ ಕಡೆ ನೋಡುವಾಗ ನನ್ನ ಶರೀರ ಯಾವ ಪರಿಸ್ಥಿತಿಯಲ್ಲಿ ಕಾರ್ಯವನ್ನು ಅನುಭವಿಸುತ್ತಾ ಇದೆಯೋ ಅದೇ ನನಗೆ ಸತ್ಯವಾಗಿ ಕಾಣಿಸುತ್ತಿದೆ, ಅದೇ ನನಗೆ ಜೋರಾಗಿದೆ, ಯಾಕೆಂದರೆ, ವಾಕ್ಯ ನಿಮ್ಮನ್ನು ಆಳ್ವಿಕೆ ಮಾಡುವುದಕ್ಕಿಂತಲೂ, ಮಾಂಸವು ನಿಮ್ಮನ್ನು ಆಳ್ವಿಕೆ ಮಾಡುತ್ತಿದೆ ಎಂದು ಅರ್ಥ.
ವಾಕ್ಯವು ಅಂದರೆ ದೇವರ ಆತ್ಮನು, ಪವಿತ್ರಾತ್ಮನು ನಿಮ್ಮಲ್ಲಿ ನಿರಂತರವಾಗಿದ್ದಾರೆ. ಅವರು ಆಳ್ವಿಕೆ ಮಾಡುವ ಜಾಗದಲ್ಲಿ ನಿಮ್ಮ ಶರೀರದ ಸ್ವಭಾವಗಳು, ನಿಮ್ಮ ಶರೀರದ ಭಾವನೆಗಳು, ನಿಮ್ಮ ಶರೀರದ ಕಣ್ಣುಗಳು ಯಾವುದನ್ನು ನೋಡುತ್ತಿದೆಯೋ, ಯಾವುದನ್ನು ಕೇಳಿಸಿಕೊಳ್ಳುತ್ತಿದೆಯೋ, ಅದೇ ನಿಮ್ಮನ್ನು ಆಳ್ವಿಕೆ ಮಾಡುತ್ತದೆ. ಅದರಿಂದಲೇ ಶರೀರದಲ್ಲಿ ಯಾವುದು ಒಂದು ಸಮಸ್ಯೆ ಬರುತ್ತದೆಯೋ ಅದೇ ನಮಗೆ ನಿಜವಾಗಿ ಸತ್ಯವಾಗಿ ಕಾಣುತ್ತದೆ.
ಅಂಥ ಪರಿಸ್ಥಿತಿಯಲ್ಲಿ ದೇವರ ವಾಕ್ಯ ನನ್ನಲ್ಲಿ ಕೆಲಸ ಮಾಡುವುದು ಹೇಗೆ?
ಎಲ್ಲರೂ ಒಂದು ಸಲ ಅರಿಕೆ ಮಾಡೋಣ :
ನಾನು ನನ್ನ ಪರಿಸ್ಥಿತಿಯನ್ನು ಸಮಸ್ಯೆಗಳನ್ನು ಬದಲಾಯಿಸುವುದಕ್ಕೆ ಪ್ರಯತ್ನಪಡುವುದಿಲ್ಲ, ದೇವರ ವಾಕ್ಯ ನನ್ನನ್ನು ಬದಲಾಯಿಸುತ್ತಾ ಇರುವುದರಿಂದ, ಆತನಲ್ಲಿ ಇರುವುದನ್ನು ನಾನು ಅನುಭವಿಸುತ್ತಿದ್ದೇನೆ.
ನಿಜವಾಗಿಯೂ ಇಂಥ ಸತ್ಯವನ್ನು ಕೇಳುವುದು ಪರಿಸ್ಥಿತಿಯನ್ನು ಬದಲಾಯಿಸುವುದಕ್ಕಾಗಿ ಅಲ್ಲ, ನಿಮ್ಮನ್ನು ಬದಲಾಯಿಸುವುದಕ್ಕೋಸ್ಕರ . ನಿಮ್ಮನ್ನು ಬದಲಾಯಿಸಿದರೆ, ನೀವು ನೋಡುವ ದೃಷ್ಟಿ ಬದಲಾವಣೆಯಾದರೆ, ನಿಮ್ಮ ನಂಬಿಕೆ ಬದಲಾವಣೆಯಾದರೆ, ನಿಮ್ಮ ಭಾವನೆಗಳು ಬದಲಾವಣೆಯಾದರೆ, ಇಡೀ ಸೃಷ್ಟಿಯೇ ನಿಮಗೆ ಸೇವೆ ಮಾಡುತ್ತದೆ ಎಂದು ನಾನು ಹೇಳುತ್ತೇನೆ.
ಯಾಕೆಂದರೆ ದೇವರು ಯಾವಾಗಲೂ ಯಜಮಾನ ಕೆಲಸದವನಿಗೆ ಕಮಾಂಡ್( ಆಜ್ಞೆ ) ಮಾಡುತ್ತಾನೆ. ಕೆಲಸದವನು ಯಜಮಾನ ಹೇಳಿದ ರೀತಿಯಲ್ಲಿಯೇ ಮಾಡುತ್ತಾನೆ. ಎಲ್ಲಿಯಾದರೂ ಕೆಲಸದವನು ಕಮೆಂಟ್ ಮಾಡಿ ಯಜಮಾನ ವಿಧೇಯವಾಗುವ ರೀತಿಯಲ್ಲಿ ನೋಡಿದ್ದೀರಾ? ಆದರೆ ಇವತ್ತಿನ ನಮ್ಮ ಪರಿಸ್ಥಿತಿ ಅದೇ ಆಗಿದೆ.
"ನನ್ನ ಹೋಲಿಕೆಯಲ್ಲಿ, ನನ್ನ ಸ್ವರೂಪದಲ್ಲಿ, ನಿನ್ನನ್ನು ಸೃಷ್ಟಿಸಿ, ನೀನು ಈ ಲೋಕದಲ್ಲಿ ದೊರೆತನ ಮಾಡು ಎಂದು ನಿನ್ನನ್ನು ಇಟ್ಟಿರುವಾಗ ನೀನು ಯಜಮಾನ, ಇಡೀ ಸೃಷ್ಟಿ ನಿನಗೆ ಸೇವೆ ಮಾಡಬೇಕು".ಎಂದು ದೇವರು ಹೇಳುತ್ತಾರೆ.
ಆದರೆ ಪಾಪದ ನಿಮಿತ್ತವಾಗಿ ಮನುಷ್ಯ ಪಾಪದಿಂದ ಕೆಳಗಡೆ ಬಿದ್ದ ತಕ್ಷಣ ಪಾತ್ರಗಳು ಬದಲಾವಣೆ ಆಯ್ತು, ಈಗ ಸೃಷ್ಟಿ ಯಜಮಾನ ಆಯಿತು, ಮನುಷ್ಯ ದಾಸನಾಗಿಬಿಟ್ಟ,
ಅದಕ್ಕೆ ಸೃಷ್ಟಿ ಹೇಳುತ್ತಿದೆ, - "ನಾನು ಊಟ ಕೊಟ್ಟರೇನೇ ನೀನು ಬದುಕುವುದು" - ಎಂದು,
ಅದಕ್ಕೆ ಮನುಷ್ಯ ಹೌದು, ನನಗೆ ಮೂರು ಹೊತ್ತು ಊಟ ಸಿಕ್ಕಿದರೆ ಸಾಕು ಎಂದು ಹೇಳುತ್ತಾನೆ.
ಎಲ್ಲಿ ದೊರೆತನ ಮಾಡಬೇಕಾಗಿತ್ತೋ, ಅಲ್ಲಿ ದಾಸನ ಹಾಗೆ ಬೇಡುತ್ತಿದ್ದಾನೆ. ಈ ಸತ್ಯ ನಿಮ್ಮನ್ನು ಬಿಡುಗಡೆ ಮಾಡಲಿ ಎಂದು ಯೇಸುವಿನ ನಾಮದಲ್ಲಿ ಅರಿಕೆ ಮಾಡುತ್ತೇನೆ.
ನಿಮ್ಮ ಮನಸ್ಸು, ನಿಮ್ಮ ಯೋಚನೆ, ನೀವು ನೋಡುವ ರೀತಿ ಇವುಗಳೆಲ್ಲವೂ ಬದಲಾವಣೆಯಾಗಲಿ ಎಂದು ಯೇಸುವಿನ ನಾಮದಲ್ಲಿ ಅರಿಕೆ ಮಾಡುತ್ತೇನೆ.
ಸ್ಥಾಪನೆಯಾಗಿದೆ, ನೆಲೆಗೊಂಡಿದೆ, ಸ್ಥಿರವಾಗಿದೆ ಅನ್ನುವುದು ಏನು?
ಯೇಸು ಕ್ರಿಸ್ತನಲ್ಲಿ ಒಂದು ವಿಶ್ವಾಸಿಯಾಗಿ ಇದರ ಅರ್ಥವೇನು?
ನಿಜವಾಗಿಯೂ ನನ್ನಲ್ಲಿ ಸ್ಥಾಪನೆಯಾಗಿರುವ ಕಾರ್ಯ ಏನು?
ಅದು ನನ್ನ ಜೀವನದಲ್ಲಿ ಹೇಗೆ ಪ್ರಕಟಪಡಿಸುತ್ತದೆ? ಎನ್ನುವುದಕ್ಕೆ ಒಂದು ಘಟನೆಯನ್ನು ಧ್ಯಾನಿಸೋಣ.
ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ; ನಿಮ್ಮ ವಿರೋಧಿಯಾಗಿರುವ ಸೈತಾನನು ಗರ್ಜಿಸುವ ಸಿಂಹದೋಪಾದಿಯಲ್ಲಿ ಯಾರನ್ನು ನುಂಗಲಿ ಎಂದು ಹುಡುಕುತ್ತಾ ತಿರುಗುತ್ತಾನೆ. ನೀವು ನಂಬಿಕೆಯಲ್ಲಿ ದೃಢವಾಗಿದ್ದು ಅವನನ್ನು ಎದುರಿಸಿರಿ; ಲೋಕದಲ್ಲಿರುವ ನಿಮ್ಮ ಸಹೋದರರೂ ಅಂಥ ಬಾಧೆಗಳನ್ನೇ ಅನುಭವಿಸುತ್ತಿದ್ದಾರೆಂದು ನಿಮಗೆ ತಿಳಿದದೆಯಲ್ಲಾ. ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯಪ್ರಭಾವಕ್ಕೆ ಕರೆದ ಕೃಪಾಪೂರ್ಣನಾದ ದೇವರು ತಾನೇ ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯೋಗ್ಯಸ್ಥಿತಿಗೆ ತಂದು ನೆಲೆಗೊಳಿಸಿ ಬಲಪಡಿಸುವನು.
ಈ ಅಧ್ಯಾಯ ಅಲ್ಲಿರುವ ವಿಶ್ವಾಸಿಗಳಿಗೆ ಬರೆಯಲ್ಪಟ್ಟಿದೆ. ಯೇಸುವಿನ ಬಗ್ಗೆ ಸುವಾರ್ತೆಯನ್ನು ಸಾರಿ, ಜನರು ಯೇಸುವನ್ನು ಸ್ವಂತ ರಕ್ಷಕನಾಗಿ ಸ್ವೀಕರಿಸಿ ಕೊಂಡ ಮೇಲೆ, ಅವರೆಲ್ಲ ಆತ್ಮದಲ್ಲಿ ಬೆಳೆಯಲು, ಸತ್ಯದಲ್ಲಿ ನಡೆಯಲು, ಆತ್ಮದಲ್ಲಿ ಪ್ರಬುದ್ಧರಾಗಲು ಸಿದ್ಧರಾದರು. ಆದರೆ ಅವರ ಜೀವಿತದಲ್ಲಿ ಸಮಸ್ಯೆಗಳ ನಿಮಿತ್ತವಾಗಿ, ವಿರೋಧಿಗಳ ನಿಮಿತ್ತವಾಗಿ ತೊಂದರೆ ಬರುತ್ತಿತ್ತು. ಆಗ ಪೇತ್ರನು ಈ ಮಾತನ್ನು ಹೇಳುತ್ತಿದ್ದಾನೆ. ಶರೀರ ಪ್ರಕಾರವಾಗಿ ಅವರು ಆತ್ಮದಲ್ಲಿ ಬೆಳೆಯದ ಹಾಗೆ ಶರೀರದಲ್ಲಿ ಬರುವ ನಿಂದನೆಗಳು, ನೋವು ತೊಂದರೆಯ ನಿಮಿತ್ತವಾಗಿ ಪೇತ್ರನು ಈ ರೀತಿಯಾಗಿ ಹೇಳುತ್ತಿದ್ದಾನೆ.
ನಾವು ಎಷ್ಟೇ ದೇವರ ವಾಕ್ಯದಲ್ಲಿ ಪ್ರಬುದ್ಧರಾಗಿ, ದೃಢವಾಗಿ ನಂಬಿಕೆಯಲ್ಲಿ ನಡೆಯುವಾಗ, ಸೈತಾನನು ಅವನ ಕಾರ್ಯವನ್ನು ಸರಿಯಾಗಿ ಮಾಡುತ್ತಲೇ ಇದ್ದಾನೆ.
ಇಲ್ಲಿ ಎರಡು ಪದಗಳನ್ನು ತುಂಬಾ ಗಮನ ವಾಗಿ ಕೇಳಿ.
ಸ್ವಸ್ಥಚಿತ್ತರಾಗಿರಿ, ಎಚ್ಚರವಾಗಿರಿ.
ಈ ವಾಕ್ಯದ ನಿಜವಾದ ಅರ್ಥ ಏನು? ನಿಜವಾದ ಪ್ರಕಟಣೆ ಏನು? ಇಲ್ಲಿ ಒಂದು ಘಟನೆ ಬರೆದಿದೆ ಅಂದರೆ ಆತ್ಮದ ವ್ಯಕ್ತಿಗೆ ಬರೆದಿದೆ. ಇಲ್ಲಿ ಏನು ಘಟನೆ ನಡೆದಿದೆ ಎನ್ನುವುದು ನಮಗೆ ಮುಖ್ಯ ಅಲ್ಲ, ಆ ಘಟನೆಯ ಮೂಲಕ ಇವತ್ತು "ನೀನು" ಎಂಬ ಆತ್ಮದ ವ್ಯಕ್ತಿಗೆ ಏನು ಪ್ರಕಟಣೆ? ಇವತ್ತು ನೀನು ಏನನ್ನು ಮಾಡಬೇಕಾಗಿದೆ? ಒಂದು ತೊಂದರೆ ಬರುವಾಗ ನೀನು ಯಾವ ರೀತಿ ಪ್ರತಿಕ್ರಿಯಿಸಬೇಕು ? ಎನ್ನುವ ಪ್ರಕಟಣೆ ಬರಬೇಕು.
ಯೋಬನು ಎಂಥಾ ಭಕ್ತಿ ವಂತ, ನೀತಿವಂತನಾಗಿದ್ದ. ಅವನೇ ಎಲ್ಲವನ್ನು ಕಳೆದುಕೊಂಡ. ನಾವೆಲ್ಲ ಯಾವ ಮೂಲೆಗೆ? ಎಂದು ಇವತ್ತಿಗೂ ಮಾತಾಡುತ್ತಿದ್ದಾರೆ.
ನಿಯಮ: ಆದರೆ ಅಲ್ಲಿ ಆ ರೀತಿ ನಡೆದಿದೆ ಅಂದರೆ, ಅದರ ಪ್ರಕಟಣೆಯ ಮೂಲಕ ನಿನ್ನ ಜೀವನದಲ್ಲಿ ಅದಕ್ಕಿಂತ ಶ್ರೇಷ್ಠವಾದದ್ದು, ಮಹತ್ತಾದದ್ದು, ಬಲವುಳ್ಳದ್ದು, ಆಶೀರ್ವಾದವಾದದ್ದು, ದೇವರ ನಾಮ ಮಹಿಮೆ ಪಡುವ ರೀತಿಯಲ್ಲಿ ಆತನೇ ನಿನ್ನಲ್ಲಿ ಪ್ರಕಾಶಮಾನವಾಗಿ ಹೊಳೆಯುವ ಸ್ಥಿತಿಯಲ್ಲಿ ಡಿಸೈನ್ ಮಾಡಿದ್ದಾರೆ.
ಆದಾಮನಲ್ಲಿ ಎಂಥಾ ಜೀವ ಇತ್ತು. ಪಾಪದ ನಿಮಿತ್ತವಾಗಿ ಏದೆನ್ ನಿಂದ ಕೆಳಗೆ ತಳಲ್ಪಟ್ಟ. ಆದರೆ ಯೇಸುಕ್ರಿಸ್ತನ ಮೂಲಕ ನಮ್ಮನ್ನು ಮತ್ತೆ ಏದೆನ್ ನಲ್ಲಿ ಪುನಃ ಸ್ಥಾಪನೆ ಮಾಡಿದ್ದಾರೆ.
ಆದರೆ ದೇವರು ಕೊಟ್ಟ ಪ್ರಕಟಣೆ ಏನೆಂದರೆ,. ಆದಾಮನು ಪಾಪ ಮಾಡುವುದಕ್ಕೆ ಮೊದಲು, ಅವನಿಗೆ ಶತ್ರು ಅಂದರೆ ಏನೆಂದು ಗೊತ್ತಿಲ್ಲ, ಸಮಸ್ಯೆ ಅಂದರೆ ಏನೆಂದು ಗೊತ್ತಿಲ್ಲ, ಸೋಲು ಅಂದರೆ ಏನೆಂದು ಗೊತ್ತಿಲ್ಲ.
ದೇವರು ತೋರಿಸಿದ ಕಾರ್ಯ ಹೇಗಿತ್ತು ಅಂದರೆ, ರೋಡ್ ಖಾಲಿ ಆಗಿರುವಾಗ ಅವನು ಕಣ್ಣು ಮುಚ್ಚಿಕೊಂಡು ಗಾಡಿ ಓಡಿಸಿದರೂ ಯಾರೂ ಅವನನ್ನು ಗುದ್ದುವುದಿಲ್ಲ, ಅವನ ಎಡಗಡೆಗೂ ಬಲಗಡೆಗೂ ಮುಂದೆಯೂ ಹಿಂದೆಯೂ ದಾರಿ ಇರುವಾಗ ನೀನು ಹೇಗೆ ಹೋದರೂ ಬೀಳುವುದಿಲ್ಲ. ನೀನು ಎಲ್ಲಿ ಹೋದರೂ ಬೀಳುವುದಿಲ್ಲ. ಸರಿಯಾಗಿ ಗಾಡಿ ಹೋಗುತ್ತಲೇ ಇರುತ್ತದೆ. ಅವನು ಹೇಗೆ ಹೋದರೂ ಸರಿಯಾದ ದಾರಿಯಲ್ಲಿಯೇ ಹೋಗುತ್ತಿದ್ದ. ಅವನಿಗೆ ಬಿರುಗಾಳಿ ಬಂದು ಅಲ್ಲಿಂದ ಪಾರಾಗುವಂತ ಪರಿಸ್ಥಿತಿ ಇಲ್ಲ, ಅವನನ್ನು ಶತ್ರುಗಳು ಅಟ್ಟಿಸಿಕೊಂಡು ಸಾಯಿಸಲು ಬರುತ್ತಿದ್ದಾರೆ, ತಪ್ಪಿಸಿಕೊಳ್ಳಬೇಕು ಎನ್ನುವ ಪರಿಸ್ಥಿತಿ ಇಲ್ಲ. ಅವನು ಇದ್ದಿದ್ದೇ ಎಲ್ಲವೂ ಕ್ರಮವಾಗಿ, ಸರಿಯಾಗಿ ಹೋಗುತ್ತಿತ್ತು.
ಇವತ್ತು ಯೇಸುಕ್ರಿಸ್ತನಲ್ಲಿ ನಮ್ಮನ್ನು ಏದೆನ್ ನಲ್ಲಿ ಪುನಃ ಸ್ಥಾಪನೆ ಮಾಡಿದ್ದಾರೆ. ಅಂದರೆ ಮೊದಲ ಆದಾಮನಿಗಿಂತ ನಾವು ತುಂಬಾ ವಿಶೇಷವಾದವರು, ಹೇಗೆಂದರೆ ಅವನು ಓಡಾಡುವಾಗ ದಾರಿ ಸುಲಭವಾಗಿತ್ತು, ಆದರೆ ಈ ಲೋಕ ಪಾಪದಲ್ಲಿ ಬಿದ್ದು ಹೋಗಿರುವುದರಿಂದ, ಹೆಚ್ಚಾದ ಜನ ಆಶೀರ್ವಾದ ಇಲ್ಲದೆ ಇದ್ದಾರೆ. ಯಾಕೆಂದರೆ ಪಾಪದ ನಿಮಿತ್ತವಾಗಿ ಈ ಲೋಕದಲ್ಲಿ ಸೈತಾನನ ಕಾರ್ಯದ ಆಳ್ವಿಕೆ ಜಾಸ್ತಿಯಾಗಿದೆ. ಅಂಥ ಒಂದು ಲೋಕದಲ್ಲಿ ದೇವರು ನಮ್ಮನ್ನು ಯಾವ ರೀತಿ ಇಟ್ಟಿದ್ದಾರೆ ಎಂದರೆ ಆದಾಮನು ಟ್ರಾಫಿಕ್ ಇಲ್ಲದ ರೋಡ್ ಮೇಲೆ 100 ಕಿಲೋಮೀಟರ್ ವೇಗದಲ್ಲಿ ಹೇಗೆ ಓಡಿಸಿದನೋ, ಈಗ ಅದೇ ಟ್ರಾಫಿಕ್ ಇರುವ ರೋಡ್ ಮೇಲೆ ಯೇಸು ಕ್ರಿಸ್ತನ ಮೂಲಕ 100 ಕಿಲೋಮೀಟರ್ ವೇಗದಲ್ಲಿ ನಾವು ಹೋಗುವಂತೆ ವಿಶೇಷವಾಗಿ ನಮ್ಮನ್ನು ನಡೆಸುತ್ತಿದ್ದಾರೆ.
ಯಾವ ಬಿರುಗಾಳಿ ಬಂದರೂ, ಆ ಬಿರುಗಾಳಿಯ ಮಧ್ಯದಲ್ಲಿಯೇ ನಾನು ಮಾತ್ರ ದೋಣಿಯಲ್ಲಿ ಆರಾಮಾಗಿ ಹೋಗಿ ದಡವನ್ನು ಸೇರುವವನಾಗಿದ್ದೇನೆ. ಸಾವಿರಾರು ಶತ್ರುಗಳು ನನ್ನನ್ನು ಹುಡುಕಿ ಸಾಯಿಸಬೇಕು, ನಾಶಪಡಿಸಬೇಕು ಎನ್ನುವುದರ ಮಧ್ಯದಲ್ಲಿ ಯೇಸುವಿನ ಮಹಿಮೆ ನನ್ನ ಮೂಲಕ ಪ್ರಕಟವಾಗಿ, ಎಲ್ಲದರಲ್ಲೂ ಜಯವಾಗಿ, ಕ್ರಮವಾಗಿ, ಸರಿಯಾಗಿ, ಆಶೀರ್ವಾದವಾಗಿ ಇರುವಂತೆ ನಡೆಸುತ್ತಾ ಇದ್ದಾರೆ.
ನಿಯಮ: ನೀವು ಸತ್ಯದಲ್ಲಿ ಬೆಳೆಯುತ್ತಾ ಇರುವಾಗ, ನಿಮ್ಮಲ್ಲಿ ಭಯ ಇರುವುದಿಲ್ಲ. ನಂಬಿಕೆ ಹೆಚ್ಚಾಗುತ್ತದೆ, ನಂಬಿಕೆಯನ್ನು ಪ್ರಕಟಿಸುವ ಜಾಗದಲ್ಲಿ ಸಮಸ್ಯೆಯ ನಿಮಿತ್ತವಾಗಿ ನಿಮ್ಮನ್ನು ಭಯದಲ್ಲಿ ನಡೆಸುತ್ತಿದೆ ಎಂದರೆ ನೀವು ಇನ್ನೂ ಸತ್ಯದಲ್ಲಿ ಪ್ರಬುದ್ಧರಾಗಿಲ್ಲ ಎನ್ನುವುದನ್ನು ವ್ಯಕ್ತಪಡಿಸುತ್ತಿದ್ದೀರಿ.
ಭಯ ಇರುವ ಜಾಗದಲ್ಲಿ ನಂಬಿಕೆ ಇರುವುದಿಲ್ಲ, ನಂಬಿಕೆ ಇರುವ ಜಾಗದಲ್ಲಿ ಭಯ ಇರುವುದಿಲ್ಲ.
ನಿಮ್ಮ ಶರೀರದಲ್ಲಿ ಭಯವನ್ನು ವ್ಯಕ್ತಪಡಿಸಿದರೆ ನಂಬಿಕೆ ಇಲ್ಲ, ನಂಬಿಕೆಯನ್ನು ವ್ಯಕ್ತಪಡಿಸಿ, ಧೈರ್ಯವಾಗಿದ್ದರೆ ಅಲ್ಲಿ ಭಯ ಇಲ್ಲ ಎಂದು ಅರ್ಥ.
ಈ ವಾಕ್ಯದಲ್ಲಿ 5 ಕಾರ್ಯಗಳನ್ನು ನೋಡುತ್ತೇವೆ.
ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯಪ್ರಭಾವಕ್ಕೆ ಕರೆದ ಕೃಪಾಪೂರ್ಣನಾದ ದೇವರು ತಾನೇ ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯೋಗ್ಯಸ್ಥಿತಿಗೆ ತಂದು ನೆಲೆಗೊಳಿಸಿ ಬಲಪಡಿಸುವನು.
1. ಸ್ವಲ್ಪಕಾಲ ಬಾಧೆ ಪಟ್ಟು
2. ಆತನೇ ಪರಿಪೂರ್ಣ ಮಾಡಿ
3. ಸ್ಥಿರಪಡಿಸಿ
4. ಬಲಪಡಿಸಿ
5. ನೆಲೆಗೊಳಿಸುವನು
ನೀವು ಸತ್ಯದಲ್ಲಿ ಬೆಳೆಯುವಾಗ ಸೈತಾನನಿಗಿಂತ ಬೇರೆ ಲೆವೆಲ್ ನಲ್ಲಿ ಇದ್ದೀರಿ. ಈಗ ಅವನಿಗೆ ನಿಮ್ಮನ್ನು ನೋಡಿದರೆ ಭಯ. ಆ ಭಯದಲ್ಲಿ ನಿಮ್ಮನ್ನು ಅಟ್ಯಾಕ್ ಮಾಡಲು ಬರುತ್ತಿದ್ದಾನೆ. ಅವನು ನಿಜವಾಗಲೂ ನಿಮ್ಮನ್ನು ನಿರ್ಮೂಲ ಮಾಡಲು, ನಾಶಪಡಿಸಲು ಬರುತ್ತಿಲ್ಲ, ಅವನು ನಾನೆಲ್ಲಿ ನಿರ್ಮೂಲ ಆಗಿ ಬಿಡುತ್ತೇನೋ ಎಂಬ ಭಯಕ್ಕೆ ಬರುತ್ತಿದ್ದಾನೆ.
ಆದರೆ ನಿನಗೆ ಸತ್ಯ ತಿಳಿದಿಲ್ಲ ಅಂದರೆ ಅವನು ಮಾಡುವ ತಂತ್ರಗಳಿಗೆ ನೀನು ಬಿದ್ದು ಹೋಗಿಬಿಡುತ್ತೀಯಾ, ಆದರೆ ಅವನೇ ಭಯದಲ್ಲಿ ಬರುತ್ತಿದ್ದಾನೆ. ಈಗ ನಿನ್ನಲ್ಲಿರುವ ಅಧಿಕಾರ ಎಂಥದ್ದು ಎಂದು ತೋರಿಸಿದರೆ ಅವನನ್ನು ನಿರ್ಮೂಲ ಮಾಡಿ ಬಿಡಬಹುದು. ಅನೇಕರಿಗೆ ಈ ಸತ್ಯ ತಿಳಿಯದೆ ಇರುವುದರಿಂದಲೇ ಸಮಸ್ಯೆ ಬರುವ ರೀತಿಯಲ್ಲಿ ಇರುವಾಗಲೇ ನಡುಕ ಶುರುವಾಗಿ ಬಿಡುತ್ತದೆ.
ಅವನು ರೋಗದ ಲಕ್ಷಣಗಳನ್ನು ತರುವುದೇ ನಿಮ್ಮನ್ನು ಹೆದರಿಸುವುದಕ್ಕೋಸ್ಕರ, ಭಯ ಹುಟ್ಟಿಸುವುದಕ್ಕೋಸ್ಕರ. ಆದರೆ ನೀವು ನಿಮ್ಮಲ್ಲಿರುವ ನಂಬಿಕೆಯನ್ನು ವ್ಯಕ್ತಪಡಿಸುವಾಗ ಭಯ ನಿರ್ಮೂಲ ಆಗುತ್ತದೆ. ಹಲ್ಲೆಲೂಯ!!!
ಆತನೇ ಪರಿಪೂರ್ಣ ಪಡಿಸುವುದು ಸ್ಥಾಪಿಸುವುದು ಸ್ಥಿರಪಡಿಸುವುದು ಬಲಪಡಿಸುವುದು ನೆಲೆಗೊಳಿಸುವುದು ಎಲ್ಲವೂ ಆತನೇ ಮಾಡುವ ಕಾರ್ಯ. ಕೃಪೆಯಿಂದ ದೇವರು ನಿಮ್ಮನ್ನು ಆರಿಸಿಕೊಂಡಿದ್ದಾರೆ. ಆದ್ದರಿಂದ ಸ್ವಲ್ಪ ಕಾಲ ನಿಮಗೆ ಬಾಧೆ ಇದ್ದರೂ ಚಿಂತೆ ಪಡಬೇಡಿ, ಆತನೇ ನಿಮ್ಮನ್ನು ಪರಿಪೂರ್ಣ ಮಾಡಿ ಸ್ಥಿರಪಡಿಸಿ ಬಲಪಡಿಸಿ ನೆಲೆಗೊಳಿಸುತ್ತಾನೆ ಎಂದು ವಾಕ್ಯ ಹೇಳುತ್ತದೆ.
ಈಗ ಇದರ ನಿಜವಾದ ಅರ್ಥ ಏನು ಎಂದು ನೋಡಿಕೊಳ್ಳೋಣ.
1 ಪೇತ್ರನು 5:10
ಕ್ರಿಸ್ತನಲ್ಲಿ ನಿಮ್ಮನ್ನು ತನ್ನ ನಿತ್ಯಪ್ರಭಾವಕ್ಕೆ ಕರೆದ ಕೃಪಾಪೂರ್ಣನಾದ ದೇವರು ತಾನೇ ನೀವು ಸ್ವಲ್ಪಕಾಲ ಬಾಧೆಪಟ್ಟ ಮೇಲೆ ನಿಮ್ಮನ್ನು ಯೋಗ್ಯಸ್ಥಿತಿಗೆ ತಂದು ನೆಲೆಗೊಳಿಸಿ ಬಲಪಡಿಸುವನು.
ಸೈತಾನನು ಬಂದು ಅಟ್ಯಾಕ್ ಮಾಡುತ್ತಾನೆ ಎಂದರೆ ,- "ಸೈತಾನನು ಬಂದು ನಿಮ್ಮ ಮೇಲೆ ಆಳ್ವಿಕೆ ಮಾಡಬೇಕು, ನಿಮ್ಮ ಜೀವನದಲ್ಲಿ ನಷ್ಟವನ್ನು ತರಬೇಕು, ನಿಮ್ಮ ಜೀವನದಲ್ಲಿ ಏನೋ ಒಂದು ಉದ್ದೇಶವನ್ನು ನೆರವೇರಿಸುವುದಕ್ಕೋಸ್ಕರ ಬಂದಿದ್ದಾನೆ"
ವಿಶೇಷವಾಗಿ ವಿಶ್ವಾಸಿಯಾಗಿರುವ, ಯೇಸು ಕ್ರಿಸ್ತನನ್ನು ಸ್ವಂತ ರಕ್ಷಕನಾಗಿ ಸ್ವೀಕರಿಸಿಕೊಂಡಿರುವ, ಆತ್ಮದಲ್ಲಿ ಪ್ರಬುದ್ಧನಾಗಿದ್ದೇನೆ ಎಂದು ಹೇಳುವ, ವಾಕ್ಯಭರಿತರಾಗಿರುವ, ಪವಿತ್ರಾತ್ಮ ಭರಿತರಾಗಿರುವ ವ್ಯಕ್ತಿಯನ್ನೂ ಕೂಡ ಇವತ್ತು ಸೈತಾನನು ಅಟ್ಯಾಕ್ ಮಾಡುತ್ತಿದ್ದಾನೆ.
ಯಾವ ವ್ಯಕ್ತಿ ವಾಕ್ಯದ ಮೂಲಕ ದೇವರ ಜೊತೆ ಸಂಪರ್ಕದಲ್ಲಿದ್ದು, ದೇವರ ಜೊತೆ ಅನ್ಯೋನ್ಯತೆಯಲ್ಲಿದ್ದು, ದೇವರ ಜೊತೆ ಐಕ್ಯತೆಯಲ್ಲಿದ್ದು, ಯಾವಾಗಲೂ ದೇವರ ಶಬ್ದವನ್ನೇ ಕೇಳುತ್ತಾ ಇರುತ್ತಾನೋ ಅಲ್ಲಿಯವರೆಗೆ ಅವನಿಗೆ ಸೈತಾನನು ಏನು ಮಾಡಲಿಕ್ಕೆ ಆಗುವುದಿಲ್ಲ. ಎಲ್ಲಿಯವರೆಗೆ ಅವನು ಕೇಳಿಸಿಕೊಳ್ಳುವ ಶಬ್ದ ದೇವರದಾಗಿದೆಯೋ ಅಲ್ಲಿಯವರೆಗೆ ಸೈತಾನ ಏನೇನು ಮಾಡಲು ಆಗುವುದಿಲ್ಲ. ಯಾವ ರೋಗದ ಲಕ್ಷಣಗಳು ಕೆಲಸ ಮಾಡುವುದಿಲ್ಲ.
ಅವನ ಗುರಿ ಏನೆಂದರೆ, - ಇಂತಹ ಲಕ್ಷಣಗಳ ಮೂಲಕ ದೇವರೊಂದಿಗೆ ಒಂದಾಗಿರುವ ಆ ಶಬ್ದಕ್ಕೆ ಕಿವಿಗೊಡದೇ, ಅದನ್ನು ಬೇರೆ ಕಡೆಗೆ ತಿರುಗಿಸಿ ಅವನ ಯೋಚನೆಯನ್ನು, ಅವನು ನೋಡುವ ದೃಷ್ಟಿಯನ್ನು, ಬದಲಾಯಿಸಿ, ತನ್ನ ಕಡೆ ನೋಡುವಂತೆ ಮಾಡುವುದೇ ಅಟ್ಯಾಕ್.
ಇದನ್ನೇ ಏದೇನ್ ತೋಟದಲ್ಲಿ ಮಾಡಿದ್ದು.
ನೀನು ಎಲ್ಲಿಯವರೆಗೆ ಅದೇ ಶಬ್ದವನ್ನು ಕೇಳುತ್ತಾ ಇರುತ್ತೀಯೋ, ಅಲ್ಲಿಯವರೆಗೆ ಈ ಮರದಲ್ಲಿರುವ ಹಣ್ಣನ್ನು ತಿನ್ನುವುದೇ ಇಲ್ಲ. ಆದರೆ ಈ ಮರದ ಹಣ್ಣನ್ನು ನೀನು ತಿನ್ನಬೇಕೆಂದರೆ ನನ್ನ ಶಬ್ದಕ್ಕೆ ಕಿವಿಗೊಡಬೇಕು , ನೀನು ಕೇಳಿದಂತೆ ಆ ಮಾತು ನಿನ್ನ ಬಾಯಲ್ಲಿ ಬರಬೇಕು. ಆ ಮಾತಿನಂತೆಯೇ ನಿನ್ನ ಶರೀರ ಹೋಗಿ ಆ ಹಣ್ಣನ್ನು ತಿನ್ನಬೇಕು ಎನ್ನುವುದೇ ಸೈತಾನನು ಉದ್ದೇಶವಾಗಿತ್ತು.
ಹವ್ವಳು ಸುಮ್ಮನೆ ಹೋಗಿ ಅದನ್ನು ತಿನ್ನಲಿಲ್ಲ, "ನೋಡುವುದಕ್ಕೆ ರಮ್ಯವಾಗಿಯೂ, ಊಟಕ್ಕೆ ಅನುಕೂಲವಾಗಿಯೂ, ಜ್ಞಾನೋದಯಕ್ಕೆ ಅಪೇಕ್ಷಿಸತಕ್ಕದ್ದು ಆಗಿದೆ"- ಎಂದು ಅವಳು ಹೋಗಿ, ಹಣ್ಣನ್ನು ತಿನ್ನುವಾಗಲೇ, ಅವಳು ಮನಸ್ಸು ಪೂರ್ತಿ ಅದರಿಂದಲೇ ತುಂಬಿತ್ತು. ಅವಳು ಅದನ್ನು ಬಾಯಿ ಬಿಟ್ಟು ಹೇಳಬೇಕೆಂದರೆ, ಒಂದು ಶಬ್ದ ವನ್ನು ಅವಳು ಸ್ವೀಕಾರ ಮಾಡಿಕೊಳ್ಳಬೇಕಿತ್ತು, ಆ ಶಬ್ದವೇ ಸೈತಾನನ ಶಬ್ದ.
ನಿಯಮ: ಬೈಬಲ್ ನಲ್ಲಿ ಅನೇಕ ವರಗಳಿವೆ. ಅದರಲ್ಲಿ ಒಂದು ವರ ಸತ್ಯ ಸತ್ಯಾತ್ಮಗಳನ್ನು ವಿವೇಚಿಸುವ ಆತ್ಮ .
ನಿಮಗೆ ಬರುವ ಆಲೋಚನೆ ದೇವರಿಂದ ಬಂದ ಆಲೋಚನೆಯಾ? ಇಲ್ಲವೇ ದೇವರದಲ್ಲದೆ ಇರುವ ಆಲೋಚನೆಯಾ?
ನಿನಗೆ ಬಂದ ಶಬ್ದ ದೇವರಿಂದ ಬಂದ ಶಬ್ದವೇ?, ಇಲ್ಲವೇ ದೇವರದಲ್ಲದೆ ಇರುವುದರಿಂದ ಬಂದ ಶಬ್ದವೇ? ಎಂದು ಈ ಆತ್ಮ ಎಂದು ವಿವೇಚಿಸುತ್ತದೆ.
ಇಲ್ಲಿ ಕೂಡ 10ನೆಯ ವಾಕ್ಯದಲ್ಲಿ ನೀನು ಸ್ವಲ್ಪ ಹೊತ್ತು ಬಾಧೆ ಪಡುತ್ತಿದ್ದೀಯ ಅಂದರೆ - ರಕ್ಷಣೆ ಹೊಂದಿದ ಮೇಲೆಯೂ ಕೂಡ ನಮಗೂ ಆವಾಗವಾಗ ಸಮಸ್ಯೆಗಳು ಬರುತ್ತಿವೆ. ದುಃಖದಲ್ಲಿ, ಬಾಧೆಯಲ್ಲಿ, ಚಿಂತೆಯಲ್ಲಿ, ಬೀಳುತ್ತಿದ್ದೇವೆ. ಆತ್ಮದಲ್ಲಿ ಪ್ರಬುದ್ಧನಾಗಿದ್ದೇನೆ ಎಂದು ಹೇಳಿಕೊಳ್ಳುವವರ ಜೀವಿತದಲ್ಲಿಯೂ ಕೂಡ ಅದೇ ಪರಿಸ್ಥಿತಿ.
ಇದಕ್ಕೆ ಕಾರಣ ಏನೆಂದರೆ,- ಸೈತಾನನು ಬಂದು ದೇವರ ವಾಕ್ಯವನ್ನು ಕೇಳದಂತೆ, ವಾಕ್ಯದೊಂದಿಗೆ ಒಂದಾಗಿ ಇರದಂತೆ ನಿಮ್ಮನ್ನು ಬೇರೆಡೆಗೆ ತಿರುಗಿಸುವುದು.
1. ಸ್ವಲ್ಪಕಾಲ ಬಾಧೆ ಪಟ್ಟು :
[ಹೆಚ್ಚಿನ ಪ್ರಕಟಣೆಗಾಗಿ ಓದಿ, ಆಧಾರ ವಾಕ್ಯಗಳು ಎಫೆ 2:12,
ನೀವು ಪೂರ್ವಕಾಲದಲ್ಲಿ ಕ್ರಿಸ್ತನನ್ನು ಸೇರದವರಾಗಿದ್ದು ಇಸ್ರಾಯೇಲ್ಯ ಹಕ್ಕಿನಲ್ಲಿ ಪಾಲಿಲ್ಲದವರೂ [ಅಬ್ರಹಾಮನಿಗೆ ಉಂಟಾದ] ವಾಗ್ದಾನಕ್ಕೆ ಸಂಬಂಧವಾದ ಒಡಂಬಡಿಕೆಗಳಲ್ಲಿ ಸೇರದವರೂ ಈ ಲೋಕದಲ್ಲಿ ಯಾವ ನಿರೀಕ್ಷೆಯಿಲ್ಲದವರೂ ದೇವರನ್ನರಿಯದವರೂ ಆಗಿದ್ದಿರೆಂದು ಜ್ಞಾಪಕಮಾಡಿಕೊಳ್ಳಿರಿ.
ಪ್ರವಾದಿ ಯೆಶಾಯನ ಗ್ರಂಥ 59:2 ಆದರೆ ನಿಮ್ಮ ಅಪರಾಧಗಳೇ ನಿಮ್ಮ ದೇವರಿಂದ ನಿಮ್ಮನ್ನು ಅಗಲಿಸುತ್ತಾ ಬಂದಿವೆ; ನಿಮ್ಮ ಪಾಪಗಳೇ ಆತನು ಕೇಳಲಾರದಂತೆ ಆತನ ಮುಖಕ್ಕೆ ಅಡ್ಡವಾಗಿವೆ.]
ದೇವರಿಂದ ದೂರವಿರುವುದು, ದೇವರ ವಾಕ್ಯ ಒಳಗಡೆ ಹೋಗುತ್ತಿಲ್ಲ ಎನ್ನುವ ಪರಿಸ್ಥಿತಿಯಲ್ಲಿರುವುದು, ದೇವರ ವಾಕ್ಯದೊಂದಿಗೆ ಒಂದಾಗದೆ ಇರುವುದೇ ಬಾಧೆ ಪಡುವುದು. ನನಗೂ ಕ್ರಿಸ್ತನಿಗೂ ಒಂದು ಸಂಬಂಧ ಇದೆ ಎನ್ನುವ ರೀತಿಯಲ್ಲಿ ಅನುಭವ ಆಗುತ್ತಿಲ್ಲ ಎನ್ನುವುದು ಕೂಡ ಒಂದು ಬಾಧೆಯಾಗಿದೆ.
ನೀವು ದೇವರ ಪ್ರಸನ್ನತೆಯಲ್ಲಿ ಇಲ್ಲದೇ ಇರುವಾಗ, ಯೇಸು ಕ್ರಿಸ್ತನಿಂದ ದೂರ ಇರುವಾಗ, ದೇವರ ಪ್ರಜ್ಞೆಯಲ್ಲಿ ಇಲ್ಲದೇ ಇರುವಾಗ ಮಾತ್ರವೇ ನಿಮ್ಮ ಶರೀರದಲ್ಲಿ ಬಾಧೆ, ಚಿಂತೆ, ವೇದನೆ, ದುಃಖ, ಭಾರ ಇವುಗಳೆಲ್ಲ ಪ್ರಕಟವಾಗುವುದು.
ನೀನು ಪಾಪದ ನಿಮಿತ್ತವಾಗಿ ಬಿದ್ದೆ, ಈಗ ನಿನ್ನನ್ನು ನೀನೇ ಕಾಪಾಡಿಕೊಳ್ಳುವುದಕ್ಕೆ ಆಗಲಿಲ್ಲ. ಆದರೆ ಸ್ವಲ್ಪ ಕಾಲ ಮಾತ್ರ ಆ ರೀತಿ ಇದ್ದೆ, ಈಗ ನಿನ್ನನ್ನು ರಕ್ಷಿಸುವುದಕ್ಕಾಗಿ ಆತ್ಮದ ಮಂಡಲದಲ್ಲಿರುವ ಆತನೇ, ಆಕಾಶವನ್ನು ಭೂಮಿಯನ್ನು ಸೃಷ್ಟಿ ಮಾಡಿದ, ಮಿತಿ ಇಲ್ಲದೇ ಇರುವ ಮಂಡಲದಲ್ಲಿರುವ ದೇವರು, ಮಿತಿಯುಳ್ಳ ಲೋಕಕ್ಕೆ ಸಾಧಾರಣ ಮನುಷ್ಯನಾಗಿ ಬಂದು, ಜಜ್ಜಲ್ಪಟ್ಟು, ರಕ್ತ ಸುರಿದು, ಮರಣ ಹೊಂದಿ, ಪುನರುತ್ಥಾನದ ಮೂಲಕ ಮತ್ತೆ ಎದ್ದು ಬಂದಾತನು ಹೇಳುತ್ತಿದ್ದಾನೆ," ಈಗ ನಿನ್ನನ್ನು ಪರಿಪೂರ್ಣವಾಗಿ ಮಾಡಿದ್ದೇನೆ. ನಿನ್ನನ್ನು ಸ್ಥಾಪಿಸಿದ್ದೇನೆ . ನಿನ್ನನ್ನು ಬಲಪಡಿಸಿದ್ದೇನೆ. ನಿನ್ನನ್ನು ನೆಲೆಗೊಳಿಸಿದ್ದೇನೆ. ಹಲ್ಲೆಲೂಯ!!!
suffering ಅಂದರೆ ಯೇಸುಕ್ರಿಸ್ತನಲ್ಲಿ ಇಲ್ಲದೆ ಇರುವುದೇ ಬಾಧೆ , ದೇವರ ಪ್ರಸನ್ನತೆಯಲ್ಲಿ ಇಲ್ಲದೇ ಇರುವುದೇ ಬಾಧೆ, ವಾಕ್ಯಕ್ಕೂ ನಿಮಗೂ ಸಂಬಂಧ ಇಲ್ಲದೆ ಇರುವುದೇ ಬಾಧೆ, ವಾಕ್ಯವನ್ನು ಸ್ವೀಕರಿಸಿಕೊಳ್ಳಲು ಆಗದೇ ಇರುವಂತಹ ಪರಿಸ್ಥಿತಿಯೇ ಬಾಧೆ,
2. ಆತನೇ ಪರಿಪೂರ್ಣ ಮಾಡಿ:
[ಆಧಾರ ವಾಕ್ಯಗಳು: ಇಬ್ರಿಯರಿಗೆ 10:14 ಪವಿತ್ರರಾಗುತ್ತಿರುವವರನ್ನು ಒಂದೇ ಸಮರ್ಪಣೆಯಿಂದ ನಿರಂತರವಾಗಿ ಸಿದ್ಧಿಗೆ ತಂದಿದ್ದಾನಷ್ಟೆ.]
ಎಂಥ ಬಾಧೆಯಲ್ಲಿ ಇದ್ದರೂ ಕೂಡ ದೇವರು ಹೇಳುತ್ತಿದ್ದಾರೆ ,- ನಾನು ನಿನ್ನನ್ನು ಹೆಚ್ಚಾಗಿ ಪ್ರೀತಿ ಮಾಡುತ್ತಿರುವುದರಿಂದ ನಾನೇ ಬಂದು ನಿನ್ನನ್ನು ಪರ್ಫೆಕ್ಟ್ ಮಾಡುತ್ತಿದ್ದೇನೆ. ಪುನಃ ಸ್ಥಾಪನೆ ಮಾಡುತ್ತಿದ್ದೇನೆ, ನಿನ್ನನ್ನು ಪರಿಪೂರ್ಣ ಮಾಡುತ್ತಿದ್ದೇನೆ.
ಪರಿಪೂರ್ಣತೆ ಮತ್ತು ಅಪೂರ್ಣತೆ [Complete and incomplete]
ಪಾಪದ ನಿಮಿತ್ತವಾಗಿ ದೇವರು ನಿಮ್ಮಲ್ಲಿ ವಾಸಿಸುವುದಕ್ಕೆ ಆಗದಂತ ಪರಿಸ್ಥಿತಿ ಅಪೂರ್ಣತೆ, ಈಗ ಯೇಸು ಕ್ರಿಸ್ತನಲ್ಲಿ ಪುನಃ ಸ್ಥಾಪನೆ ಮಾಡಿದ ಕೂಡಲೇ ಪರಿಪೂರ್ಣತೆಯಲ್ಲಿದ್ದೇವೆ. ಹಲ್ಲೆಲೂಯ!!!
ನೀವು ಪರಿಪೂರ್ಣತೆಯಲ್ಲಿ ಇರುವುದು ಏನೆಂದು ಹೇಳುತ್ತದೆ ಎಂದು ಐದು ಕಾರ್ಯಗಳನ್ನು ಹೇಳುವಾಗ ಗಮನವಾಗಿ ಓದಿ,
"ಕ್ರಿಸ್ತನಲ್ಲಿ ಇಲ್ಲದೆ ಇರುವುದು, ದೇವರ ಪ್ರಸನ್ನತೆಯಲ್ಲಿ ಇಲ್ಲದೆ ಇರುವುದು, ದೇವರನ್ನು ಅನುಭವಿಸುತ್ತಿದ್ದೇನೆ ಎನ್ನುವ ಅನುಭವ ಇಲ್ಲದೇ ಇರುವುದು, ವಾಕ್ಯದಲ್ಲಿ ಇಲ್ಲದೆ ಇರುವುದು, ವಾಕ್ಯವನ್ನು ಹೊಂದಿಕೊಳ್ಳಲು ಸಾಧ್ಯವಾಗದೇ ಇರುವುದೇ ಬಾಧೆ "
ಅಂಥ ಬಾಧೆಯಲ್ಲಿ ಇರುವ ಹಾಗೆಯೇ ಇರುವುದಕ್ಕೆ ನಿಮ್ಮನ್ನು ಬಿಟ್ಟುಬಿಡದೆ, ಯೇಸು ಕ್ರಿಸ್ತನ ಮೂಲಕ, ನೀವು ಪರಿಪೂರ್ಣವಾಗಿ ಇರುವುದು, ಆತನ ರಕ್ತದ ಮೂಲಕ, ಆತನ ಮರಣದ ಮೂಲಕ, ಆತನ ಪುನರುತ್ಥಾನದ ಮೂಲಕ ನಿಮ್ಮನ್ನು ಮತ್ತೆ ಪರಿಪೂರ್ಣವಾಗಿ ಮಾಡಿರುವ ಕಾರ್ಯ.
ಈಗ ಪರಿಪೂರ್ಣವಾಗಿ ಮಾಡಿರುವುದು ಅಂದರೆ,- ನಿಮ್ಮ ಗುರುತು ಈ ಲೋಕದ ಪ್ರಜೆ ಅಲ್ಲ, ಪರಲೋಕದ ಪ್ರಜೆ, ಉನ್ನತದಲ್ಲಿರುವವರು. ಯಾವ ವಾಗ್ದಾನ ಶಾಶ್ವತವಾಗಿ ಸ್ಥಿರವಾಗಿ ಅಲ್ಲಿ ಮಾಡಿಟ್ಟಿದ್ದಾರೋ ಅದನ್ನು ಅನುಭವಿಸುವ ಪರಿಪೂರ್ಣ ವ್ಯಕ್ತಿ. ಹಲ್ಲೆಲೂಯ!!!
3. ಸ್ಥಿರಪಡಿಸಿ [to Establish]
ನಿಮ್ಮ ಗುರುತು ಏಸುಕ್ರಿಸ್ತನಲ್ಲಿದ್ದು, ನೀವು ಪರಲೋಕದ ಪ್ರಜೆಯಾಗಿದ್ದರೆ, ಆ ಪ್ರಜೆ ಅಲ್ಲಿರುವ ಕಾರ್ಯಗಳನ್ನು ಅನುಭವಿಸಬೇಕು.
ಅನುಭವಿಸುವುದಕ್ಕೆ ಜ್ಞಾನ ಬೇಕು, ಬಲ ಬೇಕು, ಸಾಮರ್ಥ್ಯ ಬೇಕು. ಅಲ್ಲಿರುವ ಕಾರ್ಯಗಳನ್ನು ಅರಿತುಕೊಳ್ಳಬೇಕು ಈ ಪ್ರಕ್ರಿಯೆಯೇ ಸ್ಥಿರಪಡಿಸುವುದು.
ಉದಾಹರಣೆ: ಈಗ ಭಾರತದಲ್ಲಿರುವ ನಾನು ಶಾಶ್ವತವಾಗಿ ಅಮೆರಿಕ ದೇಶಕ್ಕೆ ಹೋಗುವುದಾದರೆ, ಅಲ್ಲಿ ಹೋದ ಮೇಲೆ left hand driving ಕಲಿಯಬೇಕು, ಡ್ರೈವಿಂಗ್ ಲೈಸೆನ್ಸ್ ತೆಗೆದುಕೊಳ್ಳಬೇಕು, ಅಲ್ಲಿಯ ಆಹಾರ, ಅಲ್ಲಿಯ ವಾತಾವರಣಕ್ಕೆ ಹೊಂದಿಕೊಳ್ಳಬೇಕು, ಅಲ್ಲಿ ಹೋದ ಮೇಲೆ ಅಲ್ಲಿರುವ ಸಂಸ್ಕೃತಿ ಯನ್ನು ಅಳವಡಿಸಿಕೊಳ್ಳಬೇಕು. ಇದೇ ಪ್ರಕ್ರಿಯೆ
ನೀನು ಪಾಪದಲ್ಲಿ ಬಿದ್ದಿದ್ದೆ, ಬರೀ ಶರೀರದ ಕಣ್ಣುಗಳಿಂದ ನೋಡುತ್ತಿದ್ದೆ, ಇದು ನಿನ್ನ ನಿಜವಾದ ಜೀವನ ಅಲ್ಲ. ಯೇಸು ಕ್ರಿಸ್ತನಲ್ಲಿ ನಿನ್ನನ್ನು ಪರಿಪೂರ್ಣ ಪಡಿಸಿ. ನಿನ್ನ ಗುರುತು ಯೇಸು ಕ್ರಿಸ್ತನಲ್ಲಿ, ನೀನು ಪರಲೋಕದ ಪ್ರಜೆ, ಪರಲೋಕದ ಸಂಸ್ಕೃತಿಯೇ ಬೇರೆ, ಪರಲೋಕದ ಜೀವನ ಶೈಲಿಯೇ ಬೇರೆ, ಪರಲೋಕದಲ್ಲಿ ನಡೆಯುವ ಕಾರ್ಯಗಳೇ ಬೇರೆ, ಈಗ ನೀನು ಅದರಂತೆ ಅನುಭವಿಸಬೇಕು.
ಯೇಸು ಕ್ರಿಸ್ತನಲ್ಲಿ ನಿಮ್ಮ ಗುರುತು ಅಂದರೆ ಯೇಸುಕ್ರಿಸ್ತನ ಸ್ವಭಾವ, ಯೇಸುಕ್ರಿಸ್ತನ ಜೀವನಶೈಲಿ, ಯೇಸು ಕ್ರಿಸ್ತನ ಸಾಮರ್ಥ್ಯ, ಯೇಸು ಕ್ರಿಸ್ತನ ಕಾರ್ಯಗಳು ನಿಮ್ಮಲ್ಲಿ ಬೆಳೆಯುತ್ತಲೇ ಇರುತ್ತವೆ ಇದೇ ಸ್ಥಿರಪಡಿಸುವುದು. ಆ ಭಾವನೆಯಲ್ಲಿ ಇರುವಾಗ ನಾವು ಕ್ರಿಸ್ತನ ಸ್ವಭಾವಗಳನ್ನು ವ್ಯಕ್ತಪಡಿಸುವವರಾಗಿರುತ್ತೇವೆ, ಕ್ರಿಸ್ತನ ಸಾಮರ್ಥ್ಯವನ್ನು ವ್ಯಕ್ತಪಡಿಸುವವರಾಗಿರುತ್ತೇವೆ, ಕ್ರಿಸ್ತನ ಮಹಿಮೆಯನ್ನು ವ್ಯಕ್ತಪಡಿಸುವವರಾಗಿರುತ್ತೇವೆ ಮತ್ತು ಕ್ರಿಸ್ತನ ಮಾತಿಗೆ ಶಬ್ದ ಕೊಡುವವರಾಗಿರುತ್ತೇವೆ.
4. ಬಲಪಡಿಸಿ [Be strengthened]:
[ಆಧಾರ ವಾಕ್ಯ, ಎಫೆ 3:16 -- ನೀವು ದೇವರಾತ್ಮನ ಮೂಲಕ ಆಂತರ್ಯದಲ್ಲಿ ವಿಶೇಷಬಲ ಹೊಂದಿದವರಾಗುವ ಹಾಗೆಯೂ]
ಬಲಪಡಿಸುವುದು ಅಂದರೆ ನೀವು ಪ್ರಬುದ್ಧರಾಗುವ ಹಂತದಲ್ಲಿ ಸಮಸ್ಯೆ ಬಂದರೂ ನೀವು ಜಾರಿ ಹಿಂದೆ ಹೋಗುವುದಿಲ್ಲ , ನೀವು ಜಾರಿ ಬೀಳುವುದಿಲ್ಲ.
ಯಾಕೆಂದರೆ ಈಗ ನಿಮ್ಮ ಗುರುತು ಏನೆಂದು ನಿಮಗೆ ಗೊತ್ತಾಯಿತು, ನಿಮ್ಮ ನಿಜವಾದ ಜೀವನ ಏನೆಂದು ಗೊತ್ತಾಯಿತು, ನಿಮ್ಮಲ್ಲಿ ಜೀವಿಸುತ್ತಿರುವುದು ಕ್ರಿಸ್ತನೆಂದು ಗೊತ್ತಾಯಿತು. ಆದ್ದರಿಂದ ಈಗ ಸಮಸ್ಯೆಗಳು ನಿಮ್ಮನ್ನು ಬೀಳಿಸುವುದಕ್ಕೆ ಸಾಧ್ಯವಿಲ್ಲ. ಸಮಸ್ಯೆಗಳು ನಿಮ್ಮನ್ನು ವಂಚಿಸಲು ಸಾಧ್ಯವಿಲ್ಲ. ಸೈತಾನನು ನಿಮ್ಮನ್ನು ಬೀಳಿಸಲು ಸಾಧ್ಯವಿಲ್ಲ.
ಬಲಪಡಿಸುವುದು ಏನೆಂದರೆ ನೀವು ಎಂಬ ಆತ್ಮದ ವ್ಯಕ್ತಿ ಅವನು ಬಲವಾಗಿದ್ದರೆ ಯಾವ ಶತ್ರು ಸೈತಾನ ಬಂದರೂ , ನಿಮ್ಮನ್ನು ಕಂಡರೆ ಅವನು ಹೆದರಿಕೊಳ್ಳಬೇಕು. ಅವನನ್ನು ಅಟ್ಟಿಸಿಕೊಂಡು ಹೋಗಿ, ಹೊಡೆದು ನಿರ್ಮೂಲ ಮಾಡುವ ಕಾರ್ಯ ಇದೇ ಬಲ ಹೊಂದುವುದು. ಹಲ್ಲೆಲೂಯ !!!
5. ನೆಲೆಗೊಳಿಸುವನು [ Settled ] :
ನಮ್ಮ ಈ ತಿಂಗಳ ವಾಗ್ದಾನ : ಸ್ಥಾಪನೆಯಾಗಿರುವುದು, ನೆಲೆಗೊಂಡಿರುವುದು, ಸ್ಥಿರವಾಗಿರುವುದು.
ನೆಲೆಗೊಂಡಿರುವುದು ಅಂದರೆ -- ನೀವು ಗುರುತಲ್ಲಿರುವಾಗ, ಸ್ಥಿರವಾಗಿರುವಾಗ ಬಲಪಡಿಸಿಕೊಂಡಿರುವಾಗ ಈ ಮೂರು ಹಂತದಲ್ಲಿ ನೀವು ರಕ್ಷಣೆ ಹೊಂದುವ ಪ್ರಕ್ರಿಯೆಯಲ್ಲಿದ್ದೀರಿ.
ಉದಾಹರಣೆ : ಮಡಿಕೆ ಮಾಡುವ ವಿಧಾನ
ಬಾಧೆ ಪಡುವ ಹಂತದಲ್ಲಿ ಇರುವಾಗ ಬರಿ ಮಣ್ಣಾಗಿರುತ್ತದೆ. ಪರಿಪೂರ್ಣ ಪಡಿಸುವ ಹಂತದಲ್ಲಿ ಆಕಾರ ಮಾಡುತ್ತಿದ್ದಾರೆ, ಸ್ಥಿರಪಡಿಸುವ ಹಂತದಲ್ಲಿ ಒಂದು ಆಕಾರಕ್ಕೆ ತರುತ್ತಾರೆ, ಬಲಪಡಿಸುವ ಹಂತದಲ್ಲಿ ಅದನ್ನು ಕಾಯಿಸಿ, ಬಿಸಿ ಮಾಡಿ, ಗಟ್ಟಿಯಾಗಿ ಮಾಡುತ್ತಾರೆ.
ಸ್ಥಿರವಾಗಿರಿಸುವುದು ಅಂದರೆ ಅದನ್ನು ಕೆಳಗಡೆ ಹಾಕಿದರೂ ಒಡೆದು ಹೋಗದಂತೆ ಅದರ ಮೇಲೆ ಒಂದು ಕೋಟಿಂಗ್ ಹಾಕುವುದು.
ಸ್ಥಿರವಾಗಿರಿಸುವುದು ಅಂದರೆ -- ದೇವರ ಮೇಲೆ ನಾನು ನಂಬಿಕೆ ಇಟ್ಟಿದ್ದೇನೆ ಎನ್ನುವುದಕ್ಕಿಂತಲೂ, ದೇವರು ನಿನ್ನ ಮೇಲೆ ನಂಬಿಕೆ ಇಟ್ಟಿದ್ದಾರೆ. ಇವನು ನನ್ನ ಮಗ, ನನ್ನ ಮಗಳು ಎನ್ನುವ ಹಂತಕ್ಕೆ ಬರುವಾಗ ನೀವು ನೆಲೆಗೊಂಡಿದ್ದೀರಿ.
ನಾನು ಆತನ ಕೈಯನ್ನು ಹಿಡಿದುಕೊಂಡರೆ ಜಾರಿ ಹೋಗುತ್ತದೆ, ಆದರೆ ಅವರು ನನ್ನ ಕೈಯನ್ನು ಹಿಡಿದುಕೊಂಡಿರುವಾಗ ಜಾರಿ ಬೀಳಲು ಸಾಧ್ಯವೇ ಇಲ್ಲ. ಇದೇ ಸ್ಥಾಪಿತವಾಗುವುದು.
ನನ್ನ ಕೆಲಸದ ಮೇಲೆ. ನನ್ನ ಶಿಕ್ಷಣದ ಮೇಲೆ. ನನ್ನ ಪ್ರಭಾವದ ಮೇಲೆ ನಂಬಿಕೆಯಿಡದೆ, ಇನ್ನು ಮುಂದೆ ನನ್ನ ನಂಬಿಕೆ ಆತನಲ್ಲಿದೆ. ಆತನು ನನ್ನ ಮೇಲೆ ನಂಬಿಕೆ ಇಡುವ ಕಾರ್ಯ. ಹಲ್ಲೆಲೂಯ !!!
ಆತನಿಗೆ ನನ್ನ ಮೇಲೆ ನಂಬಿಕೆ ಅಂದರೆ ನಾನು ಎಂಬ ಆತ್ಮದ ವ್ಯಕ್ತಿ ಅವರಲ್ಲಿ ಬೇರೂರಿದ್ದೀನಿ ಎಂದು ಅರ್ಥ. ಸ್ಥಾಪಿತವಾಗಿರುವಾಗ ಮಾತ್ರವೇ ಪವಿತ್ರ ಆತ್ಮನು ನಿಮ್ಮನ್ನು ನಡೆಸುವುದಕ್ಕೆ ಸಾಧ್ಯ . ಪವಿತ್ರಾತ್ಮನ ಉದ್ದೇಶದ ಪ್ರಕಾರ ನಿಮ್ಮ ಶರೀರದಲ್ಲಿ ಕಾರ್ಯಗಳನ್ನು ಪ್ರಕಟಿಸಲು ಸಾಧ್ಯ . ನೀವು ಸ್ಥಾಪಿತರಾಗಿರುವಾಗ , ಸ್ಥಿರವಾಗಿರುವಾಗ ಸೈತಾನನು ಎಂತಹ ಕಾರ್ಯಗಳನ್ನು ತೆಗೆದುಕೊಂಡು ಬಂದರೂ ಅವನು ತರುವ ತಂತ್ರಗಳಿಗೆ ನೀವು ಬೀಳುವುದಿಲ್ಲ, ಹಿಂಜರಿಯುವುದಿಲ್ಲ, ದೇವರ ವಾಕ್ಯವನ್ನು ಬಿಟ್ಟು ದೂರ ಹೋಗುವುದಿಲ್ಲ.
ನೆಲೆಗೊಂಡಿರುವುದು ಅಂದರೆ -- ಯೇಸು ಕ್ರಿಸ್ತನ ಜೀವನಶೈಲಿಯ ಹಾಗೆ ನಿಮ್ಮ ಜೀವನಶೈಲಿ, ಯೇಸುಕ್ರಿಸ್ತನ ಹಾಗೆ ನಿಮ್ಮ ಯೋಚನೆ, ಯೇಸು ಕ್ರಿಸ್ತನ ಹಾಗೆ ನಿಮ್ಮ ಮಾತು, ಯೇಸು ಕ್ರಿಸ್ತನ ಹಾಗೆ ದೇವರ ಮಹತ್ತಾದ ಕಾರ್ಯಗಳು ನಿಮ್ಮಲ್ಲಿ ಪ್ರಕಟಿಸುವ ಕಾರ್ಯವಾಗಿದೆ .ಈಗ ನಾವು ಯೇಸುಕ್ರಿಸ್ತನ ಅಧಿಕಾರದಿಂದ ಜೀವಿಸುವವರಾಗಿದ್ದೇವೆ.
ಈ ಐದು ಕಾರ್ಯಗಳನ್ನು ಸತ್ಯವೇದದಲ್ಲಿರುವ ಒಂದು ಘಟನೆಯ ಮೂಲಕ ನೋಡಿಕೊಳ್ಳೋಣ.
ನಾವು ಬಾಧೆ ಪಡುವಾಗ ಅಂದುಕೊಳ್ಳುತ್ತೇವೆ, "ನಾವು ಸರಿಯಾಗಿ ಭಯ ಭಕ್ತಿಯಿಂದ ಜೀವಿಸುತ್ತಿಲ್ಲ, ಪರಿಪೂರ್ಣರಾಗಿಲ್ಲ" ಎಂದು.
ಆದರೆ ಯೋಬನು ಎಂಥವನಾಗಿದ್ದ ಅಂದರೆ ದೇವರೇ ಅವನನ್ನು ಕುರಿತು ಸಾಕ್ಷಿ ಕೊಟ್ಟರು. ಆತನು ಪರಿಪೂರ್ಣ ಪ್ರಾಮಾಣಿಕ ವ್ಯಕ್ತಿಯಾಗಿದ್ದ. ದೇವರ ಮುಂದೆ ಕ್ರಮವಾಗಿ, ಸರಿಯಾಗಿ ಜೀವಿಸುತ್ತಿದ್ದ ವ್ಯಕ್ತಿ.
ಯೋಬನು ಗ್ರಂಥ 1:10-11:
ನೀನು ಅವನಿಗೂ ಅವನ ಮನೆಗೂ ಅವನ ಎಲ್ಲಾ ಸ್ವಾಸ್ತ್ಯಕ್ಕೂ ಸುತ್ತುಮುತ್ತಲು ಬೇಲಿಯನ್ನು ಹಾಕಿದ್ದೀಯಲ್ಲಾ. ಅವನು ಕೈಹಾಕಿದ ಕೆಲಸವನ್ನು ನೀನು ಸಫಲಪಡಿಸುತ್ತಿರುವದರಿಂದ ಅವನ ಸಂಪತ್ತು ದೇಶದಲ್ಲಿ ವೃದ್ಧಿಯಾಗುತ್ತಾ ಬಂದಿದೆ. ಆದರೆ ನಿನ್ನ ಕೈನೀಡಿ ಅವನ ಸೊತ್ತನ್ನೆಲ್ಲಾ ಅಳಿಸಿಬಿಡು. ಆಗ ಅವನು ನಿನ್ನ ಎದುರಿಗೆ ನಿನ್ನನ್ನು ದೂಷಿಸಲೇ ದೂಷಿಸುವನು ಅಂದನು.
ಸೈತಾನನು ದೇವರಿಗೆ ಹೇಳುತ್ತಿದ್ದಾನೆ ,"ನೀನು ಅವನಿಗೆ ಬೇಲಿಯನ್ನು ಹಾಕಿದ್ದೀಯಾ ಅದನ್ನು ತೆಗೆದು ಬಿಡು, ಆಗ ನೋಡೋಣ. ಅವನು ನಿನ್ನನ್ನು ಶಪಿಸುತ್ತಾನೆ ಎಂದು ಹೇಳುತ್ತಾನೆ. ಇಲ್ಲಿ ತೆಗೆದು ಬಿಡುವುದು ಅಂದರೆ,-- ದೇವರು ಅವನಿಂದ ದೂರ ಬಂದುಬಿಡುವುದು. ದೇವರ ವಾಕ್ಯದಿಂದ, ದೇವರ ಪ್ರಸನ್ನತೆಯಿಂದ ದೂರವಾಗಿ ಬಿಟ್ಟರೆ. ಬೇರ್ಪಟ್ಟರೆ ಅವನಿಗೆ ಆಶೀರ್ವಾದ ಇಲ್ಲ ದೇವರ ಆಶೀರ್ವಾದಗಳೆಲ್ಲಾ ದೇವರಲ್ಲಿ ಇರುವಾಗ ಮಾತ್ರವೇ ಅನುಭವಿಸುವ ಕಾರ್ಯಗಳಾಗಿವೆ.
ಯೋಬನು ಗ್ರಂಥ 3:25:
ನನಗೆ ಭಯವು ಹುಟ್ಟಿದೊಡನೆಯೇ ಆಪತ್ತು ಸಂಭವಿಸುವದು.
ನಾನು ಯಾವದಕ್ಕೆ ಹೆದರುತ್ತೇನೋ ಅದು ತಪ್ಪದೆ ಬರುವದು.
{ಬಹಳವಾದ ಹೆದರಿಕೆಯೂ ನನ್ನ ಮೇಲೆ ಬಂತು, ನಾನು ಅಂಜಿದ್ದೇ ನನಗೆ ಬಂತು}
ಎಲ್ಲಿ ದೇವರಿಲ್ಲವೋ ಅಲ್ಲಿ ನಂಬಿಕೆ ಇರುವುದಿಲ್ಲ. ದೇವರಲ್ಲಿ ಇರುವಾಗ ಭಯ ಬಂದರೂ ಅದನ್ನು ದೇವರು ನಿರ್ಮೂಲ ಮಾಡುತ್ತಲೇ ಇರುತ್ತಾರೆ.
ಯೋಬನು ತನ್ನ ಮಕ್ಕಳ ನಿಮಿತ್ತವಾಗಿ, ಅವನು ಬಲಿಗಳನ್ನು ಕೊಡುತ್ತಲೇ ಇದ್ದ. ಆದರೆ ದೇವರಲ್ಲಿ ಇರುವ ತನಕ ಏನೂ ಮಾಡಲಿಲ್ಲ. ಆದರೆ ದೇವರಿಂದ ಬೇರ್ಪಟ್ಟ ಕೂಡಲೇ ಆ ಭಯ ಯಾವುದಕ್ಕೆ ಹೆದರಿಕೊಂಡನೋ ಅದೇ ನಡೆಯಿತು.
ಭಯ ಇರುವ ಜಾಗದಲ್ಲಿ ನಂಬಿಕೆ ಇರುವುದಿಲ್ಲ, ಆಗ ಅಲ್ಲಿ ಸೈತಾನನು ತನ್ನ ಕಾರ್ಯಗಳನ್ನು ಪ್ರಕಟಿಸುತ್ತಾನೆ.
ಅವನು ಹೇಗೆ ಪುನಃ ಸ್ಥಾಪನೆಯಾಗುತ್ತಾನೆ?
ಯೋಬನು ಗ್ರಂಥ 38:1:
ಆಗ ಯೆಹೋವನು ಬಿರುಗಾಳಿಯೊಳಗಿಂದ ಯೋಬನಿಗೆ ಪ್ರತ್ಯುತ್ತರವಾಗಿ ಹೀಗೆಂದನು –
ಆ ಬಿರುಗಾಳಿಯಲ್ಲಿ ದೇವರು ಅವರೊಂದಿಗೆ ಮಾತನಾಡಿದರು. ಈಗ ದೇವರಿಗೆ ಕಿವಿಗೊಟ್ಟ.
ಯಾವ ಶಬ್ದಕ್ಕೆ ಮೊದಲು ಕನೆಕ್ಟ್ ಆಗಿದ್ದನೋ ಅದನ್ನು ಬಿಡಿಸಿ, ಸೈತಾನನ ಶಬ್ದವನ್ನು ಕೇಳುವುದರ ನಿಮಿತ್ತವಾಗಿ ದೇವರ ಆಶೀರ್ವಾದವನ್ನು ಕಳೆದುಕೊಂಡ.
ಬಿರುಗಾಳಿ ಅಂದರೆ ಒಂದು ಶಕ್ತಿ ದೇವರ ಶಕ್ತಿಯಿಂದ ತುಂಬಿರುವ ವಾತಾವರಣದಿಂದ ಅವರು ಮಾತಾಡುತ್ತಿದ್ದಾರೆ. ಈಗ ಯೋಬನು ದೇವರ ಶಬ್ದಕ್ಕೆ ಕಿವಿಗೊಟ್ಟ ಮೇಲೆ, ಅವನ ಹೃದಯ ಬದಲಾವಣೆಯಾಗುತ್ತದೆ.
ಯೋಬನು ಗ್ರಂಥ 42:5-6:--
ಕಿವಿಯಿಂದ ನಿನ್ನ ವಿಷಯವನ್ನು ಕೇಳಿದ್ದೆನು.
ಈಗಲಾದರೋ ನಿನ್ನನ್ನೇ ಕಣ್ಣಾರೆ ಕಂಡೆನು.
ಆದಕಾರಣ [ನಾನು ಆಡಿದ್ದನ್ನು] ತಿರಸ್ಕರಿಸಿ
ಧೂಳಿಯಲ್ಲಿಯೂ ಬೂದಿಯಲ್ಲಿಯೂ ಕುಳಿತು ಪಶ್ಚಾತ್ತಾಪಪಡುತ್ತೇನೆ.
ಅದಾದಮೇಲೆ ಅವನು ಮಾನಸಾಂತರ ಪಟ್ಟನು .
ಮಾನಸಾಂತರ ಪಡುವುದು ಅಂದರೆ ಇದುವರೆಗೂ ನಿನ್ನ ಬಗ್ಗೆ ಇದ್ದ ಒಂದು ಅರಿವು , ನಿನ್ನನ್ನು ನಾನು ನೋಡುವ ರೀತಿ, ಇದೆಲ್ಲವೂ ಬೇರೆಯವರು ನಿನ್ನ ಬಗ್ಗೆ ಏನನ್ನು ಹೇಳಿದರೋ, ಅದರಂತೆ ನಿನ್ನನ್ನು ಹಿಂಬಾಲಿಸುತ್ತಿದ್ದೆ.
ಈಗ ಬೇರೆಯವರು ಹೇಳಿದ್ದರ ನಿಮಿತ್ತವಲ್ಲ, ನಾನೇ ನಿನ್ನ ಶಬ್ದವನ್ನು ಕೇಳಿಸಿಕೊಂಡಿದ್ದೇನೆ. ನಾನೇ ನಿನ್ನನ್ನು ನೋಡಿದ್ದೇನೆ, ನಿನ್ನನು ಅನುಭವಿಸಿದ್ದೇನೆ .
ನೀವು ಯಾವಾಗ ಬೇರೆ ಶಬ್ದಗಳಿಗೆ ಕಿವಿ ಮುಚ್ಚಿ, ಈಗ ನೀವು ಕೇಳುತ್ತಿರುವ ದೇವರ ಶಬ್ದದ ಸಂಪರ್ಕದಲ್ಲಿದ್ದರೆ ಸಾಕು, ನಿಮ್ಮ ಹೃದಯ ಕುತೂಹಲದಿಂದ ಅದನ್ನೇ ಸ್ವೀಕರಿಸಿದರೆ, ಆ ವಾಕ್ಯದ ಭಾವನೆಗಳನ್ನೇ ನೀವು ಪ್ರಕಟಿಸುವುದು, ನಿಮ್ಮ ಹೃದಯ ಆ ವಾಕ್ಯಗಳಿಂದಲೇ ತುಂಬಿರುವುದು, ನಿಮ್ಮ ಮಾತುಗಳು ಅದರಂತೆ ಇರುವುದು, ನಿಮ್ಮ ಶರೀರ ಅದರಂತೆ ಅನುಭವಿಸುವುದು.
ಇಲ್ಲಿ ಯೋಬನು ದೇವರ ಶಬ್ದವನ್ನು ಕೇಳಿದನು.
ಯೋಬನು ಗ್ರಂಥ 13:15:--
ಆಹಾ, ಆತನು ನನ್ನನ್ನು ಕೊಲ್ಲುವನು, ಅದಕ್ಕಾಗಿ ಕಾದಿರುತ್ತೇನೆ,
ಆದರೂ ನನ್ನ ನಡತೆಯ ಒಳ್ಳೇತನವನ್ನು ಆತನ ಮುಂದೆ ಸ್ಥಾಪಿಸುವೆನು.
ಅವರು ನನ್ನನ್ನು ಸಾಯಿಸಿದರೂ, ನನ್ನ ನಂಬಿಕೆ ಅವರ ಮೇಲೆ. ಇದು ದೃಢವಾಗಿ ನಿಂತಿರುವ ಕಾರ್ಯ. ಇದು ಸ್ಥಿರವಾಗಿರುವವರ ಜೀವನ ಶೈಲಿ.
ಅವನು ಸ್ಥಾಪಿತವಾದ ಮೇಲೆ ಏನನ್ನು ಅನುಭವಿಸಿದ ಅಂದರೆ,--
ಯೋಬನು ಗ್ರಂಥ 42:16:--
ಆಮೇಲೆ ಯೋಬನು ನೂರನಾಲ್ವತ್ತು ವರುಷ ಬಾಳಿ ತನ್ನ ಮಕ್ಕಳನ್ನು ಮೊಮ್ಮಕ್ಕಳನ್ನು ಅಂತು ತನ್ನ ಸಂತಾನದ ನಾಲ್ಕು ತಲೆಗಳನ್ನು ಕಂಡನು.
ವಾಕ್ಯ ಹೇಳುತ್ತಿದೆ, 140 ವರ್ಷ ಜೀವವಾಗಿದ್ದನು.
ಯೋಬನು ಗ್ರಂಥ 42:12:--
ಯೆಹೋವನು ಯೋಬನ ಮೊದಲನೆಯ ಸ್ಥಿತಿಗಿಂತಲೂ ಅವನ ಕಡೆಯ ಸ್ಥಿತಿಯನ್ನು ಹೀಗೆ ಹೆಚ್ಚಾಗಿ ಆಶೀರ್ವದಿಸಿದನು; ಅವನಿಗೆ ಹದಿನಾಲ್ಕು ಸಾವಿರ ಕುರಿಗಳೂ ಆರು ಸಾವಿರ ಒಂಟೆಗಳೂ ಒಂದು ಸಾವಿರ ಜೋಡಿ ಎತ್ತುಗಳೂ ಒಂದು ಸಾವಿರ ಹೆಣ್ಣುಕತ್ತೆಗಳೂ ಉಂಟಾದವು.
ಮೊದಲು ಅವನಿಗೆ ಏನೇನಿತ್ತೋ, ಅದೆಲ್ಲದರಲ್ಲೂ ಎರಡರಷ್ಟು ಆಶೀರ್ವಾದವನ್ನು ಅನುಭವಿಸಿದನು. ಪರಿಪೂರ್ಣವಾಗಿ ಇದ್ದನು. ಅವನು ತೃಪ್ತಿಯಾಗಿ ಜೀವಿಸಿದನು.
ಪ್ರವಾದನೆಯ ಅರಿಕೆ :
ನಾನು ಕ್ರಿಸ್ತನಲ್ಲಿ ನೆಲೆಗೊಂಡಿರುವುದರಿಂದ ಕ್ರಿಸ್ತನ ಜೀವನಶೈಲಿಯನ್ನು ಅನುಭವಿಸುತ್ತಿದ್ದೇನೆ. ನನ್ನ ಆಲೋಚನೆಗಳು ಕ್ರಿಸ್ತನ ರೀತಿಯಲ್ಲಿವೆ, ನನ್ನ ಮಾತು ಕ್ರಿಸ್ತನ ರೀತಿಯಲ್ಲಿವೆ, ನನ್ನ ಕಾರ್ಯಗಳು ಕ್ರಿಸ್ತನ ರೀತಿಯಲ್ಲಿವೆ ಎಂದು ಹೇಳುವಾಗ ಅದು ನೀವಲ್ಲ ನಿಮ್ಮಲ್ಲಿರುವ ಕ್ರಿಸ್ತನೇ ಪ್ರಕಟವಾಗುವ ಕಾರ್ಯ.
ನೀವು ಏನನ್ನು ತೀರ್ಮಾನ ತೆಗೆದುಕೊಳ್ಳಬೇಕು ಎಂದು ಗೊತ್ತಿಲ್ಲದೆ ಇರುವ ಸಮಯದಲ್ಲಿಯೂ ಕೂಡ ಈಗ ಕ್ರಿಸ್ತನ ಜೀವನಶೈಲಿಯಲ್ಲಿ ಇರುವುದರಿಂದ ಕ್ರಿಸ್ತನ ಜ್ಞಾನ ಅಲ್ಲಿ ಸರಿಯಾದ ಕಾರ್ಯವನ್ನೇ ಪ್ರಕಟಿಸುವುದು. ಸರಿಯಾದ ನಿರ್ಧಾರವನ್ನೇ ನೀವು ಮಾಡುವುದು ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ .
ಕ್ರಿಸ್ತನ ಜೀವನಶೈಲಿಯಲ್ಲಿರುವಾಗ ಎಂಥ ಭಯದ ಪರಿಸ್ಥಿತಿಯಲ್ಲಿಯೂ ನಿಮ್ಮ ಸಮಾಧಾನ ಕೆಡಿಸುವ ಪರಿಸ್ಥಿತಿಯಲ್ಲಿಯೂ ಕ್ರಿಸ್ತನ ಧೈರ್ಯ ಅಲ್ಲಿ ಪ್ರಕಟವಾಗುವುದು.
ಯೆಹೆಜ್ಕೇಲ 36:11:
ನಿಮ್ಮಲ್ಲಿ ಬಹುಜನರನ್ನೂ ಪಶುಗಳನ್ನೂ ವೃದ್ಧಿಗೊಳಿಸುವೆನು; ಅವು ಹೆಚ್ಚಿ ಅಭಿವೃದ್ಧಿಯಾಗುವವು; ಮೊದಲಿನಂತೆ ನಿಮ್ಮಲ್ಲಿ ನಿವಾಸಿಗಳನ್ನು ತುಂಬಿಸಿ ಮೊದಲಿಗಿಂತ ನಿಮ್ಮನ್ನು ಉತ್ತಮ ಸ್ಥಿತಿಗೆ ತರುವೆನು; ನಾನೇ ಯೆಹೋವನು ಎಂದು ನಿಮಗೆ ದೃಢವಾಗುವದು.
ನೀವು ಇದರ ಹಿಂದೆ ಜೀವಿಸಿದ ಜೀವನಕ್ಕಿಂತಲೂ, ನೀವು ಅನುಭವಿಸಿದ ಆಶೀರ್ವಾದಕ್ಕಿಂತಲೂ, ನೀವು ಅನುಭವಿಸಿದ ಆರೋಗ್ಯಕಿಂತಲೂ, ನೀವು ಅನುಭವಿಸಿದ ಸಮಾಧಾನಕ್ಕಿಂತಲೂ ಈ ತಿಂಗಳಿನ ಒಂದೊಂದು ದಿನವೂ ಅದಕ್ಕಿಂತ ಹೆಚ್ಚಾಗಿ ಇರುತ್ತೀರಿ. ಎಲ್ಲದರಲ್ಲೂ ಅಭಿವೃದ್ಧಿಯಾಗಿರುತ್ತೀರಿ, ಆಶೀರ್ವಾದವಾಗಿರುತ್ತೀರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತಿದ್ದೇನೆ.
ಈ ತಿಂಗಳ ಪ್ರವಾದನೆಯ ಅರಿಕೆ :
I am no longer separated from Christ.
Christ lives in me.
I am restored- identified in Christ.
I am established- Matured in Christ.
I am strengthened- in the Power of Holy Spirit .
I am settled - in Christ Lifestyle
ನಾನು ಇನ್ನು ಮುಂದೆ ಕ್ರಿಸ್ತನಿಂದ ಬೇರ್ಪಡುವುದಿಲ್ಲ.
ಕ್ರಿಸ್ತನು ನನ್ನಲ್ಲಿ ವಾಸಿಸುತ್ತಾನೆ.
ನಾನು ಕ್ರಿಸ್ತನಲ್ಲಿ ಪರಿಪೂರ್ಣರಾಗಿದ್ದೇನೆ - ಗುರುತಿಸಲ್ಪಟ್ಟಿದ್ದೇನೆ.
ನಾನು ಕ್ರಿಸ್ತನಲ್ಲಿ ಸ್ಥಿರವಾಗಿದ್ದೇನೆ - ಪ್ರಬುದ್ಧನಾಗಿದ್ದೇನೆ
ನಾನು ಕ್ರಿಸ್ತನಲ್ಲಿ ಬಲಗೊಂಡಿದ್ದೇನೆ - ಪವಿತ್ರಾತ್ಮನ ಶಕ್ತಿಯಿಂದ ತುಂಬಿದ್ದೇನೆ.
ನಾನು ಕ್ರಿಸ್ತನಲ್ಲಿ ನೆಲೆಗೊಂಡಿದ್ದೇನೆ - ಕ್ರಿಸ್ತನ ಜೀವನಶೈಲಿಯಲ್ಲಿ ಜೀವಿಸುತ್ತಿದ್ದೇನೆ.
ಪೂರ್ಣ ಸಂದೇಶವನ್ನು ವೀಕ್ಷಿಸಲು ಇಲ್ಲಿ ಕ್ಲಿಕ್ ಮಾಡಿ
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY

Yes Amen 🙏 Glory Glory to God 🙏 wonderful Revelation
ReplyDeleteGLORY to god powerful 🔥🔥🔥🔥🔥
ReplyDeleteAmen! Powerful message 🙏
ReplyDeleteGlory to God power
ReplyDelete