Testimony #728 - ನಮ್ಮ ಅಕ್ಕನಿಗೆ ಮೂತ್ರಕೋಶದ ಕಲ್ಲು {ಕಿಡ್ನಿ ಸ್ಟೋನ್ }ಆಗಿದೆ ಆಪರೇಷನ್ ಹೇಳಿದ್ದರು...

 ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻

 ನನ್ನ ಹೆಸರು ಸಂಗೀತ, ಬೀದರ್ ನಿಂದ, 

ದೇವರಿಗೆ ಕೋಟಿ ಕೋಟಿ ಸ್ತೋತ್ರ 

ಈ ತಿಂಗಳಿನ ಎಲ್ಲಾ ವಾಗ್ದಾನಗಳಿಗಾಗಿ ದೇವರಿಗೆ ಮಹಿಮೆ ಉಂಟಾಗಲಿ.

 ನಮ್ಮ ಅಕ್ಕನಿಗೆ   ಮೂತ್ರಕೋಶದ ಕಲ್ಲು {ಕಿಡ್ನಿ ಸ್ಟೋನ್ }ಆಗಿದೆ, ಆಪರೇಷನ್ ಹೇಳಿದ್ದರು, ಆದರೆ ಪಾಸ್ಟರ್ ಗೆ ಕಾಲ್ ಮಾಡಿ ಪ್ರೇಯರ್ ಮಾಡಿಸಿಕೊಂಡಿದ್ದೆ.  ಆಪರೇಷನ್ ಆಗೋದಿಲ್ಲ ಎಂದು ನೀವು ಡಿಕ್ಲೇರ್  ಮಾಡಿದ್ದೀರಿ ಪಾಸ್ಟರ್.   ಈಗ ನಮ್ಮ ಅಕ್ಕ ಆರಾಮಾಗಿದ್ದರೆ. 

ಮತ್ತೆ ನಮ್ಮ ಭಾವನವರಿಗೆ ಮೂತ್ರಕೋಶದ ಕಲ್ಲು ಆಗಿದೆ ಎಂದು ಡಾಕ್ಟರ್ ಹೇಳಿದರು. "ಒಬ್ಬ ಶತಾಧಿಪತಿ ಹೇಗೆ ಒಂದು ಮಾತು ಸಾಕು" ಎಂದು ಹೇಳಿದರು ಹಾಗೆ, ನಿಮ್ಮ ಒಂದು ಪ್ರಾರ್ಥನೆಯ ಅವಶ್ಯಕತೆ ನನಗಿದೆ ಎಂದು ಅವರಿಗೆ ಕೇಳಿಕೊಂಡಿದ್ದೆ. ನಮ್ಮ ಭಾವನವರು ," ನೀನು ಪ್ರಾರ್ಥನೆಯನ್ನು ಕೇಳುತ್ತಿಯಲ್ಲ, ಆ ಪಾಸ್ಟರ್ ಗೆ ಹೇಳಿ ಪ್ರೇಯರ್ ಮಾಡಿಸು" ಎಂದು ಹೇಳಿದ್ದರು. ಅದೇ ರೀತಿ ಇಬ್ಬರಿಗೂ ಆರಾಮಾಗಿದೆ ಪಾಸ್ಟರ್ .

 ನಾನು ಸತ್ಯವನ್ನು ಕೇಳುತ್ತಾ ಆರು ತಿಂಗಳಾಯಿತು. ನನ್ನೊಳಗೆ ಸತ್ಯ ಪ್ರಕಟಣೆಯಾದ ಹಾಗೆ ಇವರಲ್ಲಿಯೂ ಪ್ರಕಟಣೆ ಆಗಲಿ ಎಂದು ಕೇಳುತ್ತಿದ್ದೆ. ಪಾಸ್ಟರ್ ಗೆ ಹೇಳಿದಾಗ ತಕ್ಷಣ ಪ್ರೇಯರ್ ಮಾಡಿದರು. ನಮ್ಮ ಭಾವನವರು, ಬಹಳ ಬಿಜಿ ಇರುತ್ತಾರೆ, ಎಷ್ಟು ಬೇಗ ಪ್ರೇಯರ್ ಮಾಡಿದರು ಎಂದು ಹೇಳಿದರು.

 ನನಗೆ ಅರ್ಥವಾಗುವ ರೀತಿಯಲ್ಲಿ ವಾಕ್ಯಗಳನ್ನು ಬಹಳಷ್ಟು ಪಾಸ್ಟರ್ ಮೂಲಕ ತಿಳಿದುಕೊಂಡಿದ್ದೇನೆ, ಮತ್ತು ತಿಳಿದುಕೊಳ್ಳುತ್ತಿದ್ದೇನೆ ಎಂದು ಅವರಿಗೆ ತಿಳಿಸಿದೆ. 

 ಆನ್ ಲೈನ್ ನಲ್ಲಿ ವಾಕ್ಯವನ್ನು ಕೇಳಿ ಇಷ್ಟು ಆಶೀರ್ವಾದ ಹೊಂದಿದ್ದೇನೆ. ಇನ್ನು ಡೈರೆಕ್ಟಾಗಿ ಭೇಟಿಯಾಗಿ, ಕೇಳುವಾಗ ಇನ್ನೂ ಹೆಚ್ಚಾದ ಆಶೀರ್ವಾದವನ್ನು ಹೊಂದಿಕೊಳ್ಳುತ್ತೇನೆ ಎಂದು ಯೋಚಿಸುತ್ತಿದ್ದೆ.

 2026 ಸ್ಪೆಷಲ್ ಆಗಿರುತ್ತದೆ ಎಂದು ನೀವು ವಾಗ್ದಾನ ಕೊಟ್ಟ ಪ್ರಕಾರವೇ ನನ್ನ ಕುಟುಂಬದವರಿಗೆ ತಿಳಿಸಿದ್ದೇನೆ. ಯೆಹೆಜ್ಕೇಲ 47:9 ನೇ ವಾಕ್ಯ ಈ ತೊರೆಯು ಎಲ್ಲೆಲ್ಲಿ ಹರಿಯುತ್ತದೋ ಅಲ್ಲಲ್ಲಿ ಗುಂಪುಗುಂಪಾಗಿ ಚಲಿಸುವ ಸಕಲವಿಧ ಜಲಜಂತುಗಳು ಬದುಕಿಬಾಳುವವು; ಮೀನುಗಳು ತಂಡೋಪತಂಡವಾಗಿರುವವು. ಈ ನೀರು ಸಮುದ್ರಕ್ಕೆ ಬೀಳಲು [ಆ ನೀರೂ] ಸಿಹಿಯಾಗುವದು; ಈ ತೊರೆಯು ಎಲ್ಲೆಲ್ಲಿ ಹರಿದರೂ ಅಲ್ಲಲ್ಲಿ ಜೀವವುಂಟಾಗುವದು ತಿಳಿಸಿದೆ. 

 ನೀವು ನಮ್ಮ ಊರಿಗೆ ಬರುವುದಕ್ಕಾಗಿ ನಾವು ಕಾಯುತ್ತಿದ್ದೇವೆ ಮತ್ತು ನಾವು ಸಿದ್ಧ ಮಾಡಿಕೊಳ್ಳುತ್ತಿದ್ದೇವೆ "ಆತ್ಮಮಂಡಲದಲ್ಲಿ ಕೃತಜ್ಞತೆ" ಎಂಬುದಾಗಿ ಆರಾಧನೆ ಇಟ್ಟುಕೊಳ್ಳುತ್ತಿದ್ದೇವೆ.

 ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ.


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 

Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)