Testimony #724 - ಸಾಲ ಕೊಟ್ಟವರು ಮನೆ ಮುಂದೆ ಬಂದು...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ಉಂಟಾಗಲಿ 🙏🏻🙏🏻🙏🏻
ನನ್ನ ಹೆಸರು ರೇಖಾ
ನಮ್ಮ ತಂದೆಯವರಿಗೆ ಸಾಲದ ಸಲುವಾಗಿ ತುಂಬಾ ಸಮಸ್ಯೆ ಆಗಿತ್ತು. ಸಾಲಗಾರರು ತುಂಬಾ ಕಾಟ ಕೊಡುತ್ತಿದ್ದರು. ಅವರು ಕಾಳಿನ ವ್ಯಾಪಾರ ಮಾಡುತ್ತಿದ್ದರು. ಆ ವ್ಯಾಪಾರವನ್ನು ಮತ್ತೆ ಮುಂದುವರಿಸಲು ಸಹ ದುಡ್ಡು ಬೇಕಿತ್ತು.
ಒಂದು ದಿನ ನಮ್ಮ ತಾಯಿ ನನಗೆ ಕಾಲ್ ಮಾಡಿ ಅಳುತ್ತಿದ್ದರು. ಸಾಲ ಕೊಟ್ಟವರು ಮನೆ ಮುಂದೆ ಬಂದು ಗಲಾಟೆ ಮಾಡಿದರು ಎಂದು ಹೇಳಿದರು. ನಾನು ನಿಮಗೆ ಕಾಲ್ ಮಾಡಿ ಪ್ರೇಯರ್ ಮಾಡಿಸಿದೆ ಪಾಸ್ಟರ್ " ಅವರ ನಿಂತಿದ್ದ ಎಲ್ಲಾ ಕೆಲಸ ಕಾರ್ಯಗಳು ಅದ್ಭುತವಾಗಿ ನಡೆಯುತ್ತವೆ ಅವರು ಇನ್ನು ಮುಂದೆ ಸಾಲದಲ್ಲಿ ಇರುವುದಿಲ್ಲ ಕೊರತೆಯಲ್ಲಿ ಇರುವುದಿಲ್ಲ ಅವರು ನಡೆಯುವುದಿಲ್ಲ ಇನ್ನು ಮುಂದೆ ದೇವರ ಆತ್ಮನೆಯವರನ್ನು ನಡೆಸುತ್ತಾರೆ" ಎಂದು ಪ್ರವಾದನೆ ಮಾಡಿದ್ದೀರಿ ಪಾಸ್ಟರ್.
ಅದರಂತೆಯೇ ಒಂದು ದಿನ ಇಬ್ಬರು ಬಂದು ನೀವು ಕಾಳಿನ ವ್ಯಾಪಾರ ಚೆನ್ನಾಗಿ ಮಾಡುತ್ತೀರಿ, ಎಂದು ಹೇಳಿ, ಎರಡು ಚೀಲ ಕಾಳು ಕೊಟ್ಟು, ದುಡ್ಡು ಆಮೇಲೆ ಕೊಡಿ ಅಂದರಂತೆ .ಅದರಂತೆ ಮೂರು ಗಾಡಿ ಲೋಡ್ ಕಳಿಸಿದ್ದಾರೆ. ನೀವು ಪ್ರವಾದಿಸಿದ ಪ್ರಕಾರವೇ 15 ದಿನದಲ್ಲಿ ಅವರು ಕೆಲಸವನ್ನು ಶುರು ಮಾಡಿದ್ದಾರೆ.
ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ. 👏🏻👏🏻👏🏻
ದೇವ ಮನುಷ್ಯನ ಬಾಯಿಂದ ಬಂದ ಮಾತು ಅದು ನೆರವೇರದೆ ಇರಲು ಸಾಧ್ಯವಿಲ್ಲ ಎಂದು ನಮ್ಮ ಜೀವಿತದಲ್ಲಿ ದೇವರು ತೋರಿಸಿಕೊಟ್ಟರು.
ನೀವು ನಮ್ಮ ತಂದೆಯವರಿಗಾಗಿ ಪ್ರಾರ್ಥಿಸಿದ್ದೀರಿ. ಈ ಹೊಸ ವರ್ಷದಲ್ಲಿ, ಅವರ ಜೀವಿತದಲ್ಲಿ ಅದ್ಭುತವಾಗಿ ದೇವರು ಸಹಾಯ ಮಾಡಿದ್ದಕ್ಕೆ ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ 🎉🎉🎉🥳🥳🥳
ಅದೇ ರೀತಿ ನಮಗೂ ಕೂಡ ದೇವರು ಅದ್ಭುತವಾಗಿ ದೇವರ ಪ್ರಸನ್ನತೆಯಲ್ಲಿ ಈ ಹೊಸ ವರ್ಷವನ್ನು ಶುರು ಮಾಡುವಂತೆ ಸಹಾಯ ಮಾಡಿದರು. ಲೋಕದ ಜನರು ಕುಡಿದು, ತಿಂದು ಮಜಾ ಮಾಡುತ್ತಾ ಇರುವ ಕ್ಷಣದಲ್ಲಿ, ನಮ್ಮನ್ನು ದೇವರ ಪ್ರಸನ್ನತೆಯಲ್ಲಿ ಕಳೆಯುವಂತೆ ಸಹಾಯ ಮಾಡಿದ್ದಾರೆ.
ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರ
ಹೋದ ವರ್ಷ ನಮ್ಮ ತಾಯಿಯವರಿಗೆ ಒಂದು ವಾಗ್ದಾನದ ಕಾರ್ಡನ್ನು ತೆಗೆದುಕೊಂಡಿದ್ದೆ. ದೇವರು ನಿಮ್ಮನ್ನು ಅನಾಥರಾಗಿ ಬಿಡುವುದಿಲ್ಲ ಎಂಬ ವಾಕ್ಯ ಬಂದಿತ್ತು. ಅದನ್ನೇ ನಮ್ಮ ತಾಯಿಯವರಿಗೆ ಹೇಳಿದೆ,-- ಲೋಕದ ಜನ ನಮ್ಮನ್ನು ಕೈಬಿಟ್ಟರೂ, ದೇವರು ನಮ್ಮ ಜೊತೆಗೆ ಇರುತ್ತಾರೆ ಅವರು ನಮ್ಮನ್ನು ಅನಾಥರಾಗಿ ಬಿಡುವುದಿಲ್ಲ ಎಂದು ಹೇಳಿದ್ದೆ. ಯಾರು ಇದ್ದರೂ ಯಾರು ಇಲ್ಲದಿದ್ದರೂ ದೇವರು ನಮ್ಮ ಜೊತೆ ಇರುತ್ತಾರೆ ಎಂದು ನೀನು ಸದಾ ಕಾಲ ಅರಿಕೆ ಮಾಡು ಎಂದು ಹೇಳಿದ್ದೆ.
ನೀವು ಮಾಡಿದ ಪ್ರಾರ್ಥನೆ, ಅವರ ಜೀವಿತದಲ್ಲಿ ಕಾರ್ಯ ಮಾಡಿದೆ.
ಥ್ಯಾಂಕ್ಯೂ ಪಾಸ್ಟರ್ 🙏🏻🙏🏻🙏🏻.
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory glory to Jesus 🙏🏻🔥🔥🔥👏🏻👏🏻👏🏻
ReplyDeleteGLORY to god 🙏🔥
ReplyDeleteGlory to God 🙏🔥
ReplyDelete