Testimony #713 - ನನ್ನ ಕುಟುಂಬದ ಮೇಲೆ ಮಾಡಿದ ಅದ್ಭುತಗಳನ್ನು ಹಂಚಿಕೊಳ್ಳಲು...

 ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ 🙏🏻🙏🏻🙏🏻

 ನನ್ನ ಹೆಸರು ರೇಖಾ 

ದೇವರ ನಾಮಕ್ಕೆ ಕೋಟಿ ಕೋಟಿ ಸ್ತೋತ್ರಗಳು. ಕಳೆದ ಕೆಲವು ವಾರಗಳಲ್ಲಿ ದೇವರು ನನ್ನ ಕುಟುಂಬದ ಮೇಲೆ ಮಾಡಿದ ಅದ್ಭುತಗಳನ್ನು ಹಂಚಿಕೊಳ್ಳಲು ನನಗೆ ತುಂಬಾ ಸಂತೋಷವಾಗಿದೆ.

1. ನನ್ನ ಮಗನಿಗೆ ದೇವರು ಮಾಡಿದ ಅದ್ಭುತ

ನನ್ನ ಮಗನು ಹಾಸ್ಟೆಲ್‌ನಲ್ಲಿ ಇದ್ದಾಗ ಅವನಿಗೆ ತುಂಬಾ ಜ್ವರ ಇತ್ತು. ನಾನು ಭರತ್ ಅಣ್ಣನಿಂದ ಪ್ರಾರ್ಥನೆ ಮಾಡಿಸಿಕೊಂಡೆ. ಮುಂದಿನ ದಿನ ನಾನು ವಾರ್ಡನ್‌ಗೆ ವಿಚಾರಿಸಿದಾಗ, “ರಾತ್ರಿ ಒಂದು ಮಾತ್ರೆ ಕೊಟ್ಟಿದ್ದೇವೆ, ಹೇಗೆ ಜ್ವರ ಇಳಿಯಿತು  ನಮಗೆ ಗೊತ್ತಿಲ್ಲ” ಎಂದು ಆಶ್ಚರ್ಯದಿಂದ ಹೇಳಿದರು.ಪ್ರಾರ್ಥನೆಯ ಮೂಲಕ ಜ್ವರ ಒಂದೇ ರಾತ್ರಿ ಸಂಪೂರ್ಣವಾಗಿ ಹೋಗಿತ್ತು.ದೇವರಿಂದ ಬಂದ ಆ ಮಾತು ಮತ್ತು ಪ್ರಾರ್ಥನೆ ನನ್ನ ಮಗನಿಗೆ ಪರಿಪೂರ್ಣ ಗುಣವಾಗುವಂತೆ ಮಾಡಿತು.

ನನ್ನ ಮಗನಿಗೆ ಸೈನಿಕ ಶಾಲೆಗೆ ಎಕ್ಸಾಮ್ ಬರೆಯಲು ಅರ್ಜಿ ಹಾಕುತ್ತಿದ್ದೆವು, ಎಷ್ಟೋ ದಿನದಿಂದ ಹಾಕುತ್ತಿದ್ದರು ಕೂಡ ಸರ್ವರ್ ಬಿಜಿ ಎಂದು ತೆಗೆದುಕೊಳ್ಳುತ್ತಿರಲಿಲ್ಲ, ಆದರೆ ಪ್ರಾರ್ಥನೆ ಮಾಡಿದ ರಾತ್ರಿಯೇ ನಾವು ಹಾಕಿದ ಅರ್ಜಿ ತೆಗೆದುಕೊಂಡು ಪರೀಕ್ಷೆಯನ್ನು ಬರೆಯಲು ನನ್ನ ಮಗನಿಗೆ ಅವಕಾಶ  ಸಿಕ್ಕಿತು.

ದೇವರಿಗೆ ಕೋಟಿ ಸ್ತೋತ್ರ!

2. ನನ್ನ ಕಾಲಿನ ನೋವಿಗೆ ಬಂದ ಬಿಡುಗಡೆ

ಹಿಂದಿನ ವಾರ ನನಗೆ ಕಾಲು ನೋವು, ಊತ  ನಡೆಯಲು ಆಗದ ಸ್ಥಿತಿ.

ಆ ಸಮಯದಲ್ಲಿ ಪ್ರಾರ್ಥನೆ ಮಾಡಿ  ನೀರು ತೆಗೆದುಕೊಂಡು ಕುಡಿದೆ .

ಬೆಳಗಿನ ಜಾವ ನಾನು ಎರಡು ಕಿಲೋಮೀಟರ್‌ಗಳಷ್ಟು ಯಾವುದೇ ನೋವಿಲ್ಲದೆ ನಡೆದೆ.

ಮತ್ತೆ ಪಾದ ಹತ್ತಿರ ನೋವು ಬಂದಾಗ ಮತ್ತೊಮ್ಮೆ ಪ್ರಾರ್ಥನೆ ಮಾಡಿಕೊಂಡೆ.

ಮಾರ್ನಿಂಗ್ ಪ್ರೇಯರ್ ನಲ್ಲಿ ದೇವಮನುಷ್ಯ ಬಿಡುಗಡೆ ಮಾಡುವ ಮಾತುಗಳನ್ನುಆತ್ಮದ ಮೂಲಕ ಕೇಳುವಾಗ ನನ್ನ ದೇಹದಲ್ಲಿ ಪರಿಪೂರ್ಣ ಬಿಡುಗಡೆ ಕೊಟ್ಟಿತು.

3. ನನ್ನ ಜ್ವರ–ಕೆಮ್ಮು ಸಂಪೂರ್ಣ ಗುಣವಾದದ್ದು

ಮೂರು ದಿನ ನನಗೆ ಜೋರಾಗಿ ಜ್ವರ, ಕೆಮ್ಮು, ನೆಗಡಿ ಇತ್ತು. ನನ್ನ ಮಗಳು ದೇವಸೇವಕರಿಗೆ ಕರೆಮಾಡೋಣ ಅಂದಳು. ಆದರೆ ನಾನು ಈ ತಿಂಗಳ ವಾಗ್ದಾನದಂತೆ ಆತ್ಮದಲ್ಲಿ ದೇವರ ಮಾತನ್ನು ಸ್ವೀಕರಿಸುತ್ತಿದ್ದೆ. ಒಂದು ರಾತ್ರಿ ಮಗಳು ನೀರನ್ನು ತಂದು “ಯೇಸುವಿನ ರಕ್ತಕ್ಕೆ ಜಯ!” ಎಂದು ಹೇಳಿ ಕುಡಿಸಿದಳು. ಆ ಕ್ಷಣದಲ್ಲಿ ಜ್ವರ, ನೆಗಡಿ, ಕೆಮ್ಮು ಎಲ್ಲವೂ ಸಂಪೂರ್ಣವಾಗಿ ಹೋಗಿಬಿಟ್ಟವು.

ದೇವರಿಗೆ ಮಹಿಮೆ!

4. ನನ್ನ ಎರಡು ವರ್ಷದ ಮಗಳ ಮೇಲೆ ದೇವರ ಕರುಣೆ

ರಾತ್ರಿ ನನ್ನ 2 ವರ್ಷದ ಮಗುವಿಗೆ ಜ್ವರ, ಗ್ಯಾಸ್ಟಿಕ್, ಆಗಿ ಅಳುತ್ತಿದ್ದಳು. ಆಸ್ಪತ್ರೆಗೂ ಹೋಗುವಂತಿರಲಿಲ್ಲ. ನಮ್ಮ ಸಿಸ್ಟರ್ ಒಬ್ಬರು ಪ್ರಾರ್ಥಿಸಿದರು.  ಕೇವಲ ಕೆಲ ನಿಮಿಷಗಳಲ್ಲಿ ಜ್ವರ ಇಳಿದು ಮಗು ಶಾಂತವಾಗಿ ನಿದ್ರೆ ಮಾಡಿತು.

ಇದು ದೇವರ ಕೃಪೆಯೇ!

5. ನಮ್ಮ ಮನೆಯ ಆರ್ಥಿಕ–ಆತ್ಮಿಕ ಬಿಡುಗಡೆ

ನಮ್ಮ ತಂದೆಯವರು ಸಾಲದ ಒತ್ತಡದಿಂದ ತುಂಬಾ ಕಂಗೆಟ್ಟಿದ್ದರು. ನನ್ನ ತಾಯಿ ಕಣ್ಣೀರು ಹಾಕಿ ಗುಪ್ತವಾಗಿ ಪ್ರಾರ್ಥನೆ ಮಾಡಿಸಿಕೊಳ್ಳುತ್ತಿದ್ದರು. ನಾನು ಅವರಿಗೆ, “ಆತ್ಮದಲ್ಲಿ ಹೊಂದಿಕೊ; ದೇವರು ಕೇಳುತ್ತಾನೆ; ನೀನು ಅರಿಕೆ ಮಾಡು” ಎಂದು ಪ್ರೋತ್ಸಾಹಿಸಿದೆ. 

ನಾನು ನನ್ನ ತಂದೆಗೆ ಸುವಾರ್ತೆ ಹೇಳಿದೆ: "ಅಪ್ಪ, ನೀನು ದೇವರನ್ನು ಹುಡುಕಲಿಲ್ಲ, ದೇವರೇ ನಿನ್ನನ್ನು ಹುಡುಕಿ ಬಂದಿದ್ದಾರೆ." ಆ ರಾತ್ರಿ ಪಾಸ್ಟರ್ ಪ್ರಾರ್ಥನೆ ಮಾಡಿದ ತಕ್ಷಣ  ನಮ್ಮ ತಂದೆ–ತಾಯಿ ಇಬ್ಬರೂ ನೈಟ್ ಕಾನ್ಫರೆನ್ಸ್ ಕಾಲ್‌ನಲ್ಲಿ ಕುಳಿತು ದೇವರ ವಾಕ್ಯ ಕೇಳಿದರು. ಅವರ ಮನಸ್ಸಿಗೆ ಶಾಂತಿ ಸಮಾಧಾನ ಬಂತು. ಸಾಲದ ಭಯ, ಕಿರುಕುಳ  ಎಲ್ಲಕ್ಕೂ ಪರಿಪೂರ್ಣ ಬಿಡುಗಡೆ ದೊರಕಿತು.

ದೇವರಿಗೆ ಕೋಟಿ ಕೋಟಿ ಸ್ತೋತ್ರಗಳು!!!

 ಕೊನೆಯದಾಗಿ ಈ ತಿಂಗಳ ವಾಗ್ದಾನದಂತೆ "ಆತ್ಮದಲ್ಲಿ ಹೊಂದಿಕೊಂಡಾಗ ದೇಹದಲ್ಲಿ ಪರಿಪೂರ್ಣ ಸ್ವಸ್ಥತೆ, ಪರಿಪೂರ್ಣ ಬಿಡುಗಡೆ, ಪರಿಪೂರ್ಣ ನಂಬಿಕೆ ಬರುತ್ತದೆ" ಎಂಬುದನ್ನು ನಾನು ನನ್ನ ಜೀವನದಲ್ಲಿ ಅನುಭವಿಸಿದ್ದೇನೆ.

ಯೇಸುವಿಗೆ ಸ್ತೋತ್ರ!!!!!

ಅವರೇ ಗುಣಪಡಿಸುವ ದೇವರು.🥳🥳🥳

 ಅವರೇ ಬಿಡುಗಡೆ ಮಾಡುವ ದೇವರು.🎉🎉🎉

 ನಮ್ಮ ದೇವರು ದಹಿಸುವ ಅಗ್ನಿಯಾಗಿದ್ದಾರೆ 🔥🔥🔥


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY

Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)