Testimony #712 - ಒಂದು ಹುಡುಗನಿಗೆ ಇತ್ತೀಚೆಗೆ ಭೀಕರವಾದ ಅಪಘಾತವಾಗಿತ್ತು...
ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರವಾಗಲಿ. 🙏🏻🙏🏻🙏🏻
ನನ್ನ ಹೆಸರು ಶಿಲ್ಪ
ನಮ್ಮ ಮನೆ ಹತ್ತಿರ ಇರುವ ಒಂದು ಹುಡುಗನಿಗೆ ಇತ್ತೀಚೆಗೆ ಭೀಕರವಾದ ಅಪಘಾತವಾಗಿತ್ತು. ಅವನ ತಲೆಗೆ ತುಂಬಾ ಗಂಭೀರ ಪೆಟ್ಟು ಆಗಿತ್ತು. ನಾವು ಅವರಿಗೆ ಪರಿಚಯವಿರಲಿಲ್ಲ. ಒಂದು ಭಾನುವಾರ ಪ್ರಾರ್ಥನೆ ಮುಗಿಸಿ ಮನೆಗೆ ಹೋಗುತ್ತಿದ್ದಾಗಲೇ ಅವರು ನಮ್ಮನ್ನು ಕರೆದು, “ನಮ್ಮ ಮನೆಗೆ ಬಂದು ಪ್ರಾರ್ಥಿಸಿ” ಎಂದು ಹೇಳಿದರು.
ನಾವು ಮೂರು ಜನ ಸಹೋದರಿಯರು ಹೋಗಿ, ಡಾಕ್ಟರ್ ಅವರು ಚೆಕ್ ಮಾಡಿ ಹೋದ ನಂತರ, ಆ ಹುಡುಗನ ಮೇಲೆ ಕೈ ಇಟ್ಟು ಪ್ರಾರ್ಥನೆ ಮಾಡಿದೆವು. ಹುಡುಗ ತಕ್ಷಣ ಹಾಸಿಗೆಯ ಮೇಲಿಂದ ಎದ್ದು ನಡೆದನು, ಅವರ ತಂದೆ ಹೇಳಿದ್ದು ಇದೇ ಮೊದಲ ಸಾರಿ ಈ ರೀತಿ ಆಗಿದ್ದು, ಇದಕ್ಕೂ ಮೊದಲು ಹೀಗೆಲ್ಲ ಆಗಿರಲಿಲ್ಲ ಎಂದು ಅವರ ತಂದೆ ಆಶ್ಚರ್ಯಪಟ್ಟರು.
ಅವರ ತಾಯಿಯವರು ಮುಂದಿನ ದಿನವೂ “ಮತ್ತೆ ಬಂದು ಪ್ರಾರ್ಥಿಸಿ” ಎಂದು ಹೇಳಿದರು.
ಹೀಗಾಗಿ ನಾವು ದಿನಾಲು ಹೋಗಿ ಪ್ರಾರ್ಥನೆ ಮಾಡುತ್ತಿದ್ದೇವೆ.
ಅವರ ಮನೆಯಲ್ಲಿ ತುಂಬಾ ಬದಲಾವಣೆಗಳು ಆಗುತ್ತಿವೆ ಎಂದು ಹುಡುಗನ ತಂದೆಯೇ ಹೇಳಿದರು.. ಅವರಿಗೆ ಕನ್ನಡ ಬರುವುದಿಲ್ಲ; ಅವರು ಮರಾಠಿ ಭಾಷೆಯವರು. ಆದರೆ ಆ ಹುಡುಗನಿಗೆ ಕನ್ನಡ ಗೊತ್ತು. ಅವನಿಗೆ ಕಣ್ಣು ಕಾಣದಿದ್ದರೂ ನಮ್ಮ ಧ್ವನಿಯನ್ನು ಕೇಳಿ, “ಅಕ್ಕ ಬಂದಿದ್ದಾರೆ” ಎಂದು ಗುರುತಿಸುತ್ತಾನೆ. ಮೊನ್ನೆ ನನ್ನ ಬಟ್ಟೆ ಯಾವ ಬಣ್ಣದ್ದು ಎಂದು ಗುರುತಿಸಿದನು. ಅವರ ತಂದೆಗೆ ತುಂಬಾ ಸಂತೋಷವಾಗಿದೆ. ಅವನಲ್ಲೂ ದೊಡ್ಡ ಬದಲಾವಣೆ ಆಗಿದೆ. ಪ್ರಾರ್ಥನೆ ಮಾಡಲು ನಾವು ಬಂದಾಗಲೇ ಅವನು ತುಂಬಾ ಸಂತೋಷವಾಗಿರುತ್ತಾನೆ.
ಅವನು ಕೂಡ “ನಿಮ್ಮ ಪಾಸ್ಟರ್ರನ್ನು ಪರಿಚಯ ಮಾಡಿಸಿ” ಎಂದು ಕೇಳುತ್ತಾನೆ.
ಹುಡುಗನ ತಂದೆ ತುಂಬಾ ಕೃತಜ್ಞತೆಯಿಂದ ಹೇಳುತ್ತಾರೆ: “ನಿಮ್ಮ ದೇವರು ಒಳ್ಳೆಯವರು. ನಮ್ಮ ಮಗ ಬದುಕುವುದಿಲ್ಲವೆಂದು ಡಾಕ್ಟರ್ ಹೇಳಿದ್ದರು. ಡಾಕ್ಟರ್ ಹೇಳಿರುವುದನ್ನೇ ಉಲ್ಟಾ ಮಾಡಿದ ನಿಮ್ಮ ದೇವರು ಒಳ್ಳೆಯವರು ಎಂದರು. ನಾವು ಯೇಸುವನ್ನು ನಂಬಿದ್ದಕ್ಕಾಗಿ ಇಂದು ನನ್ನ ಮಗ ಜೀವಂತವಾಗಿದ್ದಾನೆ ಅಂದರು ”
ಇದೇ ರೀತಿ, ನಮ್ಮ ಮನೆಯ ಹತ್ತಿರ ಇರುವ ಇನ್ನೊಬ್ಬ ಅಕ್ಕನಿಗೆ ಗರ್ಭಕೋಶದಲ್ಲಿ ಗಡ್ಡೆ ಇದೆ ಎಂದು ಹೇಳಿ ಅಳುತ್ತಿದ್ದರು. ಅವರೇನು ಪ್ರಾರ್ಥನೆ ಮಾಡಿ ಎಂದು ಕೇಳಲಿಲ್ಲ, ಆದರೂ ನಾನು ಪ್ರಾರ್ಥಿಸಿದೆ, ಈಗಲೇ ಪ್ರಾರ್ಥಿಸುತ್ತೇನೆ ಎಂದು ಕೈ ಇಟ್ಟು ಪ್ರಾರ್ಥಿಸಿದೆ.
ಅವರು ಮುಂದಿನ ದಿನ ಸ್ಕ್ಯಾನಿಂಗ್ ಮಾಡಿಸಿದರು. ರಿಪೋರ್ಟ್ ಬಂದು, “ಯಾವ ಗಡ್ಡೆಯೂ ಇಲ್ಲ, ಎಲ್ಲವೂ ನಾರ್ಮಲ್” ಎಂದು ಡಾಕ್ಟರ್ ಹೇಳಿದರು.
ಅವರು ನನಗೆ ಕಾಲ್ ಮಾಡಿ, “ದೇವರಿಗೆ ಸ್ತೋತ್ರ! ದೇವರು ಪ್ರಾರ್ಥನೆ ಕೇಳಿದ್ದಾರೆ!” ಎಂದು ತುಂಬಾ ಸಂತೋಷಪಟ್ಟರು.
ದೇವರು ನಮ್ಮನ್ನು ಇನ್ನೊಬ್ಬರಿಗೆ ಆಶೀರ್ವಾದವಾಗಿ ಇಟ್ಟಿದ್ದಾರೆ ಎಂದು ತುಂಬಾ ಖುಷಿಯಾಗುತ್ತದೆ. ದೇವರು ನನ್ನಲ್ಲಿ ಕಾರ್ಯ ಮಾಡುತ್ತಿದ್ದಾರೆ ಅದನ್ನು ನಾನು ಅನುಭವಿಸುತ್ತಾ ಇದ್ದೇನೆ. ನಮ್ಮ ಪಾಸ್ಟರ್ ಹೇಳುವ ಪ್ರಕಾರ ದೇವರ ಉದ್ದೇಶದ ಮೇರೆಗೆ ನಾವು ಜೀವಿಸುತ್ತಾ ಇದ್ದೇವೆ. ನಾವು ಏನು ಬೇಕಾದರೂ ಕೇಳಿಕೊಂಡರೂ ನಮ್ಮ ಜೀವಿತದಲ್ಲಿ ಅದೇ ರೀತಿ ಆಗುತ್ತಿದೆ. ಥ್ಯಾಂಕ್ಯೂ ಪಾಸ್ಟರ್ ತುಂಬಾ ಖುಷಿಯಾಗುತ್ತಿದೆ. ಥ್ಯಾಂಕ್ಯೂ ಪಾಸ್ಟರ್ 🙏🏻
ನಮ್ಮ ಜೀವಿತದಲ್ಲಿ ದೇವರು ನಮ್ಮ ಮೂಲಕ ಕೆಲಸ ಮಾಡುತ್ತಿದ್ದಾರೆ.🎉🎉🥳🥳
ದೇವರಿಗೆ ಕೋಟಿ ಕೋಟಿ ಸ್ತೋತ್ರ.
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
Glory to God 🙏
ReplyDeleteGLORY GLORY GLORY to GOD powerful testimony Lord JESUS bless you and your family members abundantly in Jesus mighty name Amen 🙏
ReplyDeleteGlory to God 🙏 power full testimony sister'
ReplyDeleteಈ ಸಾಕ್ಷಿ ಯನ್ನು ಓದಿದೆ ನನಗೆ ಯೇಸು ದೇವರ ಮೇಲೆ ನಂಬಿಕೆ ಹೆಚ್ಚಾಗ್ತಾ ಇದೆ
ReplyDelete