Testimony #712 - ಎರಡು ಬಾರಿ ಆಪರೇಷನ್ ಕೂಡ ಆಗಿತ್ತು. 5 ಬಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಬೇಕಾಯಿತು...

 ದೇವರ ನಾಮಕ್ಕೆ ಸ್ತೋತ್ರ! 

 ನನ್ನ ಹೆಸರು ಲಲಿತಾ.

ನಾನು ಪ್ರಾರ್ಥನೆಗೆ ಜಾಯಿನ್ ಆಗಿ ಇವತ್ತಿಗೆ 20 ದಿನಗಳು ಆಗಿವೆ. ಮಂಜುಳಾ ಸಿಸ್ಟರ್ ರವರು ಬೆಳಗಿನ ಪ್ರಾರ್ಥನೆಗೆ ಜಾಯಿನ್ ಆಗಿ ಎಂದು ಮಾರ್ಗದರ್ಶನ ನೀಡಿದಾಗಿನಿಂದ, ನನ್ನ ಜೀವನದಲ್ಲಿ ದೇವರು ಅದೆಷ್ಟೋ ಅದ್ಭುತ ಕಾರ್ಯಗಳನ್ನು ಮಾಡುತ್ತಿದ್ದಾರೆ.

ಕಳೆದ ಎರಡು ವರ್ಷಗಳಿಂದ ನಾನು ಮತ್ತು ನಮ್ಮ ಮನೆಯವರು ದವಾಖಾನೆ–ಆಸ್ಪತ್ರೆಗಳ ನಡುವೆ ಓಡಾಡುತ್ತಿದ್ದೇವೆ. ಅವರಿಗೆ ಅಸ್ತಮಾ ಸಮಸ್ಯೆ, ಭಯಂಕರ ತ್ರಾಸ್, ಹಾಗೂ ಎರಡು ಬಾರಿ ಆಪರೇಷನ್ ಕೂಡ ಆಗಿತ್ತು. 5 ಬಾರಿ ಆಸ್ಪತ್ರೆಯಲ್ಲಿ ಅಡ್ಮಿಟ್ ಮಾಡಬೇಕಾಯಿತು. ಮನೆಯಲ್ಲಿ ಶಾಂತಿ ಸಮಾಧಾನ ಇರಲಿಲ್ಲ.

ಕಳೆದ ವಾರ ನಾನು ಬಿದ್ದು ಕೈ ಮುರಿದುಕೊಂಡಾಗ, ನೀವು ಪ್ರಾರ್ಥನೆ ಮಾಡಿದಿರಿ. ಡಾಕ್ಟರ್ ಆರು ತಿಂಗಳು ಬೇಕು ಎಂದಿದ್ದರು — ಆದರೆ ದೇವರ ಕೃಪೆಯಿಂದ ಕೇವಲ 20 ದಿನಗಳಲ್ಲಿ ಕೈ ಸಂಪೂರ್ಣವಾಗಿ ಆರಾಮವಾಗಿದೆ. ಇದಕ್ಕಾಗಿ ದೇವರಿಗೆ ಕೋಟಿ ಸ್ತೋತ್ರ.

ಅದೇ ಸಮಯದಲ್ಲಿ ನನ್ನ ಮನೆಯವರಿಗೂ  ಆಪರೇಷನ್ ಇತ್ತು.ಅದಕ್ಕೂ ನಾವು ಪ್ರಾರ್ಥನೆ ಮಾಡಿಸಿಕೊಂಡೆವು. ಮೊದಲು 8 ದಿನ ಅಡ್ಮಿಟ್ ಮಾಡಿಕೊಂಡು ಸಲೈನ್ ಹಚ್ಚಿ ಆಮೇಲೆ ಆಪರೇಷನ್ ಮಾಡುತ್ತಿದ್ದರು, ಆದರೆ ಈ ಸಲ ಎಲ್ಲಾ ನಾರ್ಮಲ್ ಇದೆ ಸಲೈನ್ ಬೇಡ ಎಂದು ಡಾಕ್ಟರ್ ಹೇಳಿದರು. ಆಪರೇಷನ್ ಸಕ್ಸಸ್ ಆಗಿದ್ದಕ್ಕೆ ಡಾಕ್ಟರ್ ಕೂಡ ಆಶ್ಚರ್ಯಪಟ್ಟರು  ಆಪರೇಷನ್ ಯಶಸ್ವಿಯಾಗಿ ಆಯಿತು, ಅವರು ಚೆನ್ನಾಗಿದ್ದಾರೆ.  “ಚಲೋ ಆಪರೇಷನ್ ಆಯಿತು”  ಎಂದು ಡಾಕ್ಟರ್ ಕೂಡ ಹೇಳಿದರು. ಆಪರೇಷನ್ ಆದ ಕೂಡಲೇ ಡಿಸ್ಚಾರ್ಜ್ ಮಾಡಿದರು. ಅವರಿಗೆ ಯಾವ ನೋವು ಕೂಡ ಇರಲಿಲ್ಲ. ಎರಡು ತಿಂಗಳು ವಿಶ್ರಾಂತಿ ತೆಗೆದುಕೊಳ್ಳಲು ಹೇಳಿದ್ದರು. ಆದರೆ 15 ದಿನಕ್ಕೆ ಸಂಪೂರ್ಣ ಗುಣವಾಗಿ ಕೆಲಸಕ್ಕೆ ಹೋಗುತ್ತೇನೆ ಎನ್ನುತ್ತಿದ್ದರು.  ದೇವರಿಗೆ ಸ್ತೋತ್ರ!

ನಾನು ಬಿದ್ದ ದಿನ, ಮನಸ್ಸು ತುಂಬಾ ದುಃಖದಿಂದ ತುಂಬಿತ್ತು… ಆತ್ಮಹತ್ಯೆ ಮಾಡಿಕೊಳ್ಳಬೇಕು ಅಂತ ಅಂದುಕೊಂಡಿದ್ದೆ ನನಗೆ ಬಹಳ ಬೇಜಾರಾಗಿತ್ತು  . “ಯೇಸುವನ್ನು ನಂಬಿ ನಲವತ್ತು ವರ್ಷ ಆಯ್ತು—ಆದರೂ ಬಿಡುಗಡೆ ಆಗಿಲ್ಲ, ಮತ್ತೆ ಏನು ಉಪಯೋಗ?” ಎಂದು ಮನಸ್ಸಿನಲ್ಲಿ ವಿಚಾರ ಮಾಡಿಕೊಂಡಿದ್ದೆ.

ಆದರೆ ಈ ಪ್ರಾರ್ಥನೆಯ ಮೂಲಕ ದೇವರು ನನ್ನ ಜೀವನಕ್ಕೆ ಹೊಸ ಸತ್ಯ, ಹೊಸ ಬೆಳಕು, ಹೊಸ ಶಾಂತಿ ಕೊಟ್ಟಿದ್ದಾರೆ. ದೇವರನ್ನು ನಿಜವಾಗಿ ಅರಿಯುವುದಕ್ಕೆ, ಆತ್ಮೀಯವಾಗಿ ಬೆಳೆಯುವುದಕ್ಕೆ, ಪಾಸ್ಟರ್ ನಿಮ್ಮನ್ನು ಉಪಯೋಗಿಸಿದ್ದಕ್ಕಾಗಿ ದೇವರಿಗೆ ಕೋಟಿ ಸ್ತೋತ್ರ.

ಪಾಸ್ಟರ್, ನನಗೂ ನನ್ನ ಕುಟುಂಬಕ್ಕೂ ನೀವು ತೋರಿದ ಪ್ರೀತಿ, ಮಾರ್ಗದರ್ಶನ, ಮತ್ತು ಆತ್ಮಿಕ ಸಹಾಯಕ್ಕೆ ದೇವರು ನಿಮಗೂ ನಿಮ್ಮ ಕುಟುಂಬಕ್ಕೂ ಮಹಾಶ್ರೇಷ್ಠವಾದ ಆಶೀರ್ವಾದಗಳನ್ನು ನೀಡಲಿ.

ದೇವರ ನಾಮಕ್ಕೆ ಸಂಪೂರ್ಣ ಮಹಿಮೆ! ✨


ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


 

Comments

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)