2025 ರ ಡಿಸೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು, "2026ಗೆ ದೈವಿಕ ಸಿದ್ಧತೆ"
2025 ರ ಡಿಸೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು, "2026ಗೆ ದೈವಿಕ ಸಿದ್ಧತೆ"
{Divine Preparation for 2026}
ಇದನ್ನು ಓದುತ್ತಿರುವ ಪ್ರತಿಯೊಬ್ಬ ಸಹೋದರ ಸಹೋದರಿಯರಿಗೆ ಯೇಸುವಿನ ನಾಮದಲ್ಲಿ ವಂದನೆಗಳನ್ನು ಸಲ್ಲಿಸುತ್ತೇನೆ.
ಇಂತಹ ಸತ್ಯವನ್ನು ಓದಿ, ನಿಮ್ಮ ಆತ್ಮದ ಕಣ್ಣುಗಳು ತೆರೆದು, ನಿಮ್ಮ ಆತ್ಮದ ಸಾಮರ್ಥ್ಯ ಹೆಚ್ಚಾಗಿ, ದೇವರ ಉದ್ದೇಶದ ಪ್ರಕಾರ ನಿಮ್ಮ ಜೀವಿತದಲ್ಲಿ ಎಲ್ಲಾ ಕಾರ್ಯಗಳು ಆಶೀರ್ವಾದವಾಗಿ ನೆರವೇರಲಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.ಕಳೆದ 11 ತಿಂಗಳು ದೇವರು ನಮ್ಮನ್ನು ಸುರಕ್ಷಿತವಾಗಿ, ಆರೋಗ್ಯವಾಗಿ ಮತ್ತು ಆಶೀರ್ವಾದದಲ್ಲಿ ನಡೆಸಿ ಈ ವರ್ಷದ ಕೊನೆಯ ತಿಂಗಳು, ಕೊನೆಯ ವಾಗ್ದಾನವನ್ನು ಕೊಟ್ಟಿದ್ದಾರೆ.
ಈ ತಿಂಗಳು ದೇವರು ಕೊಟ್ಟ ವಾಗ್ದಾನ, " ಆತ್ಮದಲ್ಲಿ ದೈವಿಕ ಸಿದ್ಧತೆ "
ಇವತ್ತಿನ ಧ್ಯಾನ ನಮ್ಮ ಆತ್ಮ, ಪ್ರಾಣ, ಶರೀರ, ಮನಸ್ಸು, ಭಾವನೆಗಳು ಮತ್ತು ಮಾತು ಎಲ್ಲವೂ ಕೂಡ ಆತ್ಮದಲ್ಲಿ ಏನು ಹೊಂದಿಕೊಳ್ಳುತ್ತಿದ್ದೇವೆ?, ಪ್ರಾಣದಲ್ಲಿ ಎಂಥ ಭಾವನೆಯನ್ನು ಪ್ರಕಟಿಸುತ್ತಾ ಇದ್ದೇವೆ?, ಯಾವ ಕಾರ್ಯಗಳನ್ನು ಶರೀರದಲ್ಲಿ ಅನುಭವಿಸುತ್ತಾ ಇದ್ದೇವೆ ಎನ್ನುವುದಾಗಿದೆ. ಅದೇ ರೀತಿ 2026ರಲ್ಲಿ ಏನನ್ನು ಅನುಭವಿಸಬೇಕು ಎನ್ನುವುದರ ಸಿದ್ಧತೆಯ ತಿಂಗಳಾಗಿದೆ.
ಈ ಸಿದ್ಧತೆಗೆ ದೇವರು ಕೊಟ್ಟ ವಾಗ್ದಾನದ ವಚನ :
ಯೆಹೋಶುವನು 1:11
ನೀವು ಪಾಳೆಯದ ಎಲ್ಲಾ ಕಡೆಗೂ ಹೋಗಿ ಜನರಿಗೆ – ನೀವು ಇನ್ನು ಮೂರು ದಿವಸಗಳಲ್ಲಿ ಈ ಯೊರ್ದನ್ ಹೊಳೆಯನ್ನು ದಾಟಿ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವಾಸ್ತ್ಯವಾಗಿ ಕೊಡುವ ದೇಶವನ್ನು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗಬೇಕು. ಆದದರಿಂದ ನಿಮಗೋಸ್ಕರ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ ಎಂದು ಹೇಳಬೇಕು ಅಂದನು.
ನಿಮ್ಮ ಮನೆಯಲ್ಲಿ ಒಂದು ಮದುವೆ ಇದೆ. ನಿಮ್ಮ ಮನೆಯಲ್ಲಿರುವ ಮಗನಿಗೂ ಮಗಳಿಗೂ ಮದುವೆ ನಿರ್ಣಯವಾಗಿದೆ. ಮದುವೆಯ ದಿನ ಹತ್ತಿರ ಬರುತ್ತಾ ಇರುವಾಗ ನಡೆಯುವ ಕಾರ್ಯಗಳೇ "ಸಿದ್ಧತೆ ".
ಕುಟುಂಬವಾಗಿ ಕೂತುಕೊಂಡು ಹೇಗೆ ಮಾಡುವುದು?, ನಮ್ಮ ಬಜೆಟ್ ಎಷ್ಟಿದೆ?, ನಮ್ಮ ಬಜೆಟ್ ಗೆ ತಕ್ಕಂತೆ ಮಾಡಬೇಕಾಗಿರುವ ಕಾರ್ಯಗಳನ್ನು ಒಂದು, ಎರಡು ಎಂದು ಲಿಸ್ಟ್ ಮಾಡಿ, ಅದರಲ್ಲಿ ಒಂದೊಂದು ಕಾರ್ಯವನ್ನು ಒಬ್ಬೊಬ್ಬರು ವಹಿಸಿಕೊಂಡು ಮಾಡುವುದೇ ಸಿದ್ಧತೆ.
ಉದಾಹರಣೆಗೆ : ಅಲಂಕರಿಸುವವರು, ಅಡುಗೆ ಮಾಡುವವರು, ಆಮಂತ್ರಣ ಪತ್ರಿಕೆ ಮಾಡಿಸುವುದು , ಬರುವ ಅತಿಥಿಗಳನ್ನು ನೋಡಿಕೊಳ್ಳುವುದು, ಹೀಗೆ ಒಂದೊಂದು ಕಾರ್ಯವನ್ನು ಲಿಸ್ಟ್ ಮಾಡಿ, ಎಲ್ಲವೂ ಕ್ರಮವಾಗಿ, ಸರಿಯಾಗಿ, ಯಾರಾರು ಏನೇನು ಜವಾಬ್ದಾರಿ ಹೊತ್ತುಕೊಂಡಿದ್ದಾರೆ, ಅವರೆಲ್ಲರೂ ಸರಿಯಾಗಿ ಮಾಡಿದರೆ ಮಾತ್ರವೇ ಆ ಮದುವೆಯ ಕಾರ್ಯ ಯಶಸ್ವಿಯಾಗುವುದು.
ಒಂದು ಕಾರ್ಯ ಯಶಸ್ವಿಯಾಗಿ ನಡೆಯಬೇಕಾದರೆ ಸಿದ್ಧತೆಯಿಂದ ಶುರುವಾಗುತ್ತದೆ.
ಶರೀರ ಪ್ರಕಾರವಾಗಿ ಒಂದು ಮದುವೆಯನ್ನು ಮಾಡಲು ಎಷ್ಟು ಸಮಯ ಖರ್ಚು ಮಾಡುತ್ತೇವೆ, ಯಾವುದು ಬೆಸ್ಟ್ ಆಗಿದೆ ಎಂದು ಹುಡುಕುತ್ತೇವೆ, ಯಾವ ರೀತಿ ಮಾಡಿದರೆ ಚೆನ್ನಾಗಿ ನಡೆಯುತ್ತದೆ ಎಂದು ಆಲೋಚನೆ ಮಾಡಿ ಕಾರ್ಯಗಳನ್ನು ಮಾಡುತ್ತೇವೆ.
ಆ ಮದುವೆಯ ಕಾರ್ಯ ಮುಗಿಯುವಾಗ ಏನನ್ನು ಕರೆಕ್ಟ್ ಆಗಿ ಮಾಡಿದ್ವಿ, ಏನನ್ನು ಮಾಡಲಿಲ್ಲ, ಯಾವುದು ಚೆನ್ನಾಗಿತ್ತು ಯಾವುದು ಚೆನ್ನಾಗಿಲ್ಲ ಎಂದು ನಮಗೆ ಗೊತ್ತಾಗುತ್ತದೆ.
ಅದರಂತೆಯೇ ಈ ತಿಂಗಳು ಮುಂದಿನ ವರ್ಷದ 12 ತಿಂಗಳಿಗೆ ಮಾಡುವ ಸಿದ್ಧತೆಯ ತಿಂಗಳಾಗಿ ಇರುತ್ತದೆ. ಈ ಸಿದ್ಧತೆ ಶರೀರದಲ್ಲಿ ಅಲ್ಲ, ಆತ್ಮದಲ್ಲಿ.
ಈಗ ಈ ವಚನ ಏನು ಹೇಳುತ್ತಿದೆ ಎಂದು ನೋಡೋಣ, ಇದರ ಪ್ರಕಟಣೆಯನ್ನು ಕೂಡ ಧ್ಯಾನ ಮಾಡೋಣ.
ಯೆಹೋಶುವ 1:11
ನೀವು ಪಾಳೆಯದ ಎಲ್ಲಾ ಕಡೆಗೂ ಹೋಗಿ ಜನರಿಗೆ – ನೀವು ಇನ್ನು ಮೂರು ದಿವಸಗಳಲ್ಲಿ ಈ ಯೊರ್ದನ್ ಹೊಳೆಯನ್ನು ದಾಟಿ ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವಾಸ್ತ್ಯವಾಗಿ ಕೊಡುವ ದೇಶವನ್ನು ಸ್ವತಂತ್ರಿಸಿಕೊಳ್ಳುವದಕ್ಕೆ ಹೋಗಬೇಕು. ಆದದರಿಂದ ನಿಮಗೋಸ್ಕರ ಆಹಾರವನ್ನು ಸಿದ್ಧಮಾಡಿಕೊಳ್ಳಿರಿ ಎಂದು ಹೇಳಬೇಕು ಅಂದನು.
ಇಲ್ಲಿ 7 keywords ಇವೆ.
1. Pass through the camp. - ಪಾಳೆಯದ
2. Prepare - ಸಿದ್ಧತೆ
3. Provisions- ಆಹಾರ
4. 3 days - ಮೂರು ದಿನಗಳು
5. Crossing - ದಾಟುವುದು
6. Jordan- ಯೋರ್ದನ್
7. God is giving you- ದೇವರು ಕೊಟ್ಟಿರುವುದು.
ಈ ವಾಕ್ಯದ ಹಿನ್ನೆಲೆಯನ್ನು ನೋಡಿಕೊಳ್ಳೋಣ.
ಮೋಶೆ ಇಸ್ರಾಯೇಲ್ ಜನರನ್ನು ನಡೆಸಿಕೊಂಡು ಬಂದನು. ದೇವರು ವಾಗ್ದಾನ ಮಾಡಿದ್ದ ಹಾಲು ಜೇನು ಹರಿಯುವ ದೇಶಕ್ಕೆ ಇಸ್ರಾಯೇಲ್ ಜನರನ್ನು ನಡೆಸುವುದಕ್ಕಾಗಿ ದೇವರು ಮೋಶೆಯನ್ನು ನೇಮಿಸಿದರು.
40 ದಿನದಲ್ಲಿ ಸೇರಬೇಕಾಗಿರುವವರು 40 ವರ್ಷ ತಿರುಗಾಡಿ ಬಂದಿದ್ದಾರೆ. ಯೋರ್ದನ್ ವರೆಗೂ ಬಂದ ಮೇಲೆ ಮೋಶೆ ತೀರಿಹೋದ. ಆಗ ಯೆಹೋಶುವನನ್ನು ಆಯ್ಕೆ ಮಾಡುತ್ತಾರೆ. ದೇವರು ಮೋಶೆಗೆ ವಾಗ್ದಾನ ಮಾಡಿದ ರೀತಿ ಯೆಹೋಶುವನಿಗೂ ಹೇಳುತ್ತಿದ್ದಾರೆ. ನಾನು ಮೋಶೆಯ ಜೊತೆಗೆ ಇದ್ದು ಮಾಡಿದ ಕಾರ್ಯವನ್ನು ನಿನ್ನ ಜೊತೆ ಇದ್ದು ಮಾಡುತ್ತೇನೆ. ಬಲವಾಗಿರು, ಧೈರ್ಯದಿಂದಿರು, ಹೆದರಬೇಡ, ನಾನು ನಿನ್ನ ಜೊತೆಗೆ ಇದ್ದೇನೆ ಎಂದು ವಾಗ್ದಾನ ಮಾಡಿ, ಇಸ್ರಾಯಲ್ ಜನರನ್ನು ಯೆಹೋಶುವನು ನಡೆಸಬೇಕು ಎಂದು ಹೇಳುತ್ತಾರೆ. ಯೋರ್ದನ್ ನದಿಯನ್ನು ದಾಟಿ ಹೋದರೆ ಮಾತ್ರವೇ ಹಾಲು ಜೇನು ಹರಿಯುವ ವಾಗ್ದಾನದ ದೇಶಕ್ಕೆ ಹೋಗಿ ಸೇರಲು ಆಗುತ್ತದೆ.
ಮೂರು ದಿನದಲ್ಲಿ ಆ ಜಾಗವನ್ನು ಸ್ವತಂತ್ರಿಸಿಕೊಳ್ಳಬೇಕು ಆದರೆ ಅದು ಖಾಲಿಯಾಗಿಲ್ಲ, ಅಲ್ಲಿ ಹಿತ್ತಿಯರು, ಮೋವಾಬ್ಯರು ಮತ್ತು ಅನ್ಯ ಜನರು ಇದ್ದಾರೆ. ಇವರು ಅಲ್ಲಿಗೆ ಹೋಗಿ ಅವರಿಗೆ ವಿರುದ್ಧವಾಗಿ ಹೋರಾಡಿ ಜಯಿಸಬೇಕು. ಅದಕ್ಕೆ ಯೆಹೋಶುವನಿಗೆ ನೀನು ರೂಬೆನ್ಯರು, ಗಾದ್ಯರು ಮತ್ತು ಮನಸ್ಸೇ ಕುಲದ ಅರ್ಧ ಜನರನ್ನು ಕರೆದುಕೊಂಡು ಹೋಗು ಎಂದು ಹೇಳುತ್ತಾರೆ.
ಈಗ ಒಂದೊಂದಾಗಿ ನೋಡುತ್ತಾ ಹೋಗೋಣ.
#. ಪಾಳೆಯದಲ್ಲಿರುವ ಎಲ್ಲಾ ಜನರಿಗೂ ಹೋಗಿ ಹೇಳು, ಮೂರು ದಿವಸಗಳಲ್ಲಿ ಯೋರ್ದನ್ ಹೊಳೆಯನ್ನು ದಾಟುವುದಕ್ಕೆ, ನಿಮ್ಮ ದೇವರಾದ ಯೆಹೋವನು ನಿಮಗೆ ಸ್ವಾಸ್ತ್ಯವಾಗಿ ಕೊಡುವ ದೇಶವನ್ನು ಸ್ವತಂತ್ರ್ಯಸಿಕೊಳ್ಳುವುದಕ್ಕೆ ಹೋಗಬೇಕು.
ನಿಯಮ:
ದೇವರ ವಾಕ್ಯ ಏನು ಹೇಳಲ್ಪಟ್ಟಿದೆಯೋ ಅದನ್ನು ಎಲ್ಲರಿಗೂ ತಿಳಿಯುವಂತೆ, ಎಲ್ಲರಿಗೂ ಕೇಳಿಸುವಂತೆ ಮತ್ತು ಎಲ್ಲರಿಗೂ ಅರ್ಥವಾಗುವಂತೆ ಹೇಳಬೇಕು.
ದೇವರು ವಾಗ್ದಾನವನ್ನು ಪ್ರೀತಿಯಿಂದ ಕೊಟ್ಟಿದ್ದಾರೆ. ಅದು ಅಭಿಷೇಕಿಸಲ್ಪಟ್ಟು, ಆತ್ಮವೂ ಜೀವವೂ ಆಗಿ, ಅದನ್ನು ಹೊಂದಿಕೊಳ್ಳಲು ಪಾತ್ರರಾಗಿರುವಂತೆ ನಮ್ಮನ್ನು ಸಿದ್ಧ ಮಾಡುತ್ತದೆ.
ವಾಗ್ದಾನ ಕೊಡುವುದು ದೇವರ ಕರ್ತವ್ಯ . ವಾಗ್ದಾನವನ್ನು ಹೊಂದಿಕೊಳ್ಳಲು ಸಿದ್ಧರಾಗಿರುವುದು ನಮ್ಮ ಕರ್ತವ್ಯ
ವಾಗ್ದಾನ ಮಾಡಿದ ದೇಶಕ್ಕೆ ಸೇರಿಸಲು ಯೆಹೋಶುವನು ಎಂತಹ ಸಿದ್ಧತೆಯನ್ನು ಮಾಡಿಕೊಂಡು ನಡೆಸಿದನು, ಅದರಂತೆ ಇಲ್ಲಿ ಯೆಹೋಶುವನು ಯೇಸುವನ್ನು ಸೂಚಿಸುತ್ತಾನೆ.
ಯೇಸು ಆತನ ವಾಕ್ಯದ ಮೂಲಕ 2026 ಎಂಬ ವಾಗ್ದಾನದ ವರ್ಷವನ್ನು ಅನುಭವಿಸುವುದಕ್ಕಾಗಿ ನಮ್ಮನ್ನು ಸಿದ್ಧಪಡಿಸುತ್ತಾ ಇದ್ದಾರೆ. ನಮ್ಮ ಆತ್ಮದಲ್ಲಿ, ಪ್ರಾಣದಲ್ಲಿ, ಶರೀರದಲ್ಲಿ, ಮನಸ್ಸಿನಲ್ಲಿ, ಭಾವನೆಗಳಲ್ಲಿ ಎಲ್ಲದರಲ್ಲಿಯೂ ಸಿದ್ಧತೆ ಪಡಿಸಿದ ವರ್ಷವನ್ನು ಹೊಂದಲು, ಜಗದುತ್ಪತ್ತಿಗೆ ಮೊದಲೇ ಎಂತಹ ಮಹತ್ತಾದ ಕಾರ್ಯಗಳನ್ನು ನೆರವೇರಿಸಿದ್ದಾರೋ ಅವುಗಳನ್ನು ಅನುಭವಿಸುವಂತೆ ಹೊಂದಿಕೊಳ್ಳುವಂತೆ, ಅದರ ಫಲಗಳನ್ನು ಅವರು ನೆರವೇರಿಸಿರುವ ಪ್ರಕಾರವೇ ಇರುವ ಆಶೀರ್ವಾದಗಳನ್ನು ಅನುಭವಿಸುವಂತೆ, ಅದಕ್ಕೆ ಪಾತ್ರರಾಗಿ ಅನುಭವಿಸುವ ರೀತಿಯಲ್ಲಿ ನಮ್ಮನ್ನು ಸಿದ್ಧಪಡಿಸುತ್ತಾ ಇದ್ದಾರೆ.
ಈ ವರ್ಷದಲ್ಲಿ ಏನು ಕಾರ್ಯಗಳು ನಡೆಯಬೇಕು, ನನ್ನ ಮಕ್ಕಳಿಗೆ ಏನು ಆಶೀರ್ವಾದವನ್ನು ಇಟ್ಟಿದ್ದೇನೆ ಅನ್ನೋದು ಎಲ್ಲವೂ ನೆರವೇರಿಸಿರುವ ಕಾರ್ಯವಾಗಿದೆ. ಆಗಲೇ ಮಾಡಿ ಮುಗಿಸಿರುವ ಕಾರ್ಯವಾಗಿದೆ. ಅದನ್ನು ಹೊಂದಿಕೊಳ್ಳಲು ನನ್ನ ಮಗ, ನನ್ನಮಗಳು ಯಾವ ಸಿದ್ಧತೆಯಲ್ಲಿದ್ದಾನೆ/ಳೆ ಎಂದು ದೇವರು ಎದುರು ನೋಡುತ್ತಿದ್ದಾರೆ.
ಅಲ್ಲಿ ಮೂರು ದಿನಗಳವರೆಗೆ ಎನ್ನುವುದು ಒಂದು ಪ್ರವಾದನೆಯ ಸಂಖ್ಯೆಯಾಗಿದೆ.
ಯೇಸು ಮರಣ ಹೊಂದಿ ಮೂರು ದಿನ ಇದ್ದು, ಮೂರನೇ ದಿನ ಪುನರುತ್ಥಾನವನ್ನು ಹೊಂದಿದರು.ಆ ಮೂರು ದಿನಗಳ ನಂತರ ಮನುಷ್ಯರ ಇತಿಹಾಸವನ್ನೇ ಬದಲಾಯಿಸಿ, ಕ್ರಿಸ್ತಪೂರ್ವ ಮತ್ತು ಕ್ರಿಸ್ತಶಕ ಎಂದು ಬೇರ್ಪಡಿಸಿದರು. ಸಮಯವನ್ನೇ ವಿಭಾಗ ಮಾಡಿದರು.
2025 ಅಂದರೆ ಯೇಸುಕ್ರಿಸ್ತನು ಮರಣ ಹೊಂದಿ, ಪುನರುತ್ಥಾನವಾಗಿ 2025 ವರ್ಷ ಆಯ್ತು ಎಂದು ಅರ್ಥ.
ಒಂದು ಹಳೆಯ ಜೀವನದಿಂದ ಹೊಸ ಜೀವನಕ್ಕೆ ಪರಿವರ್ತಿಸಿದ ಪುನರುತ್ಥಾನದ ಜೀವನವಾಗಿದೆ.
2026ರಲ್ಲಿ ನಿಮ್ಮ ಶರೀರದ ಬಲದ ಅವಶ್ಯಕತೆ ಇಲ್ಲ, ಸಾಮರ್ಥ್ಯದ ಅವಶ್ಯಕತೆ ಇಲ್ಲ, ತಿಳುವಳಿಕೆಯ ಅವಶ್ಯಕತೆ ಇಲ್ಲ, ಅನುಭವದ ಅವಶ್ಯಕತೆ ಇಲ್ಲ. ನಿಮಗೆ ಬೇಕಾಗಿರುವುದು "ಸಿದ್ಧತೆ" ಎಂಬ ದೇವರ ವಾಗ್ದಾನ ನಿಮ್ಮನ್ನು ಆತ್ಮದಲ್ಲಿ, ಪ್ರಾಣದಲ್ಲಿ, ಶರೀರದಲ್ಲಿ, ಅನುಭವಿಸಿ ಪ್ರಕಟಿಸುವಾಗ ಆ ವಾಕ್ಯದ ಫಲವನ್ನೇ 2026ರಲ್ಲಿ ಅನುಭವಿಸುವಿರಿ.
ಇಲ್ಲಿ ಯೋರ್ದನ್ ಹೊಳೆಯನ್ನು ದಾಟಬೇಕು ಎಂದು ಹೇಳುತ್ತಾರೆ.
ಯೋರ್ದನ್ ಎಂದರೇನು?
ನೀರು ಇಲ್ಲದೆ ಇರುವಾಗ ನಡೆದುಕೊಂಡು ಹೋಗಬಹುದು. ಆದರೆ ಸುಗ್ಗಿಯ ಸಮಯದಲ್ಲಿ ದಡ ಮೀರಿ ಹರಿಯುತ್ತಿತ್ತು. ಅದನ್ನು ದಾಟಿ ಹೋಗಲು ಸಾಧ್ಯವಿಲ್ಲ. ಇದು ಒಂದು ಸಮಸ್ಯೆಯನ್ನು ತೋರಿಸುತ್ತದೆ. ಈ ಸಮಸ್ಯೆಯನ್ನು ಹೇಗೆ ಜಯಿಸುವುದು ಎನ್ನುವುದೇ ಯೋರ್ದನ್.
ಯೇಸು ಕೂಡ ಯೋರ್ದನ್ ಹೊಳೆಗೆ ಬಂದು ದೀಕ್ಷಾಸ್ನಾನ ತೆಗೆದುಕೊಂಡರು. ಪರಲೋಕದ ಬಾಗಿಲು ತೆರೆದು, ಪವಿತ್ರಾತ್ಮನು ಅವರ ಮೇಲೆ ಇಳಿದು, ಪರಲೋಕದಿಂದ ಒಂದು ಶಬ್ದ ಬರುತ್ತಿದೆ, ಇವನು ನನ್ನ ಪ್ರಿಯ ಕುಮಾರನು, ಇವನನ್ನು ನಾನು ಮೆಚ್ಚಿದ್ದೇನೆ ಎಂದು ಆಕಾಶವಾಣಿ ಆಯಿತು. ಅಲ್ಲಿಂದಲೇ ಯೇಸುವಿನ ಸೇವೆ ಶುರುವಾಯಿತು. ಮನುಕುಲಕ್ಕೆ ಇರುವ ಪಾಪಕ್ಕಾಗಿ ಯೇಸು ಮರಣ ಹೊಂದಿದರು. ಶತ್ರುವನ್ನು ಸೋಲಿಸಿ ನಿರ್ಮೂಲ ಮಾಡಿ ಜಯವನ್ನು ಹೊಂದಿದರು.
ತಂದೆಯ ಬಳಿಗೆ ಜನರು ಹೋಗುವಂತೆ ಒಂದು ಮಾರ್ಗವನ್ನು ತೆರೆದರು. ಯಾವ ಮನುಷ್ಯನಿಂದಲೂ ಸಾಧ್ಯವಾಗದನ್ನು, ಯೇಸು ಸಾಧ್ಯ ಮಾಡಿ ತೋರಿಸಿದರು. ಈ ಪುನರುತ್ಥಾನದ ಕಾರ್ಯ ನಡೆದಿದ್ದು ಸಹ ಯೋರ್ದನ್ ನಲ್ಲಿ.
ಯೋರ್ದನ್ ಏನನ್ನು ತೋರಿಸುತ್ತದೆ ಅಂದರೆ, ನೀನು ಸ್ವಾರ್ಥಕ್ಕಾಗಿ ಸತ್ತು, ನಾನು, ನನ್ನ ಬಲ, ನನ್ನ ಸಾಮರ್ಥ್ಯ, ನನ್ನ ಹಣ, ನನ್ನ ಕೆಲಸ ಎಂಬದನ್ನು ಸಾಯಿಸುವುದು. ದೇವರ ಆತ್ಮನಿಂದ ಹೊಸ ಜೀವನಕ್ಕೆ ಹುಟ್ಟುವುದು.
ಇಬ್ರಿಯ ಭಾಷೆಯಲ್ಲಿ ಯೋರ್ಧನ್ - {go down descend } ಕೆಳಗಡೆ ಹೋಗು
ನಮ್ಮ ಶರೀರದ ಕಾರ್ಯಗಳು, ಮಾಂಸದ ಕಾರ್ಯಗಳು, ಭಯ, ಸೋಲುಗಳು, ಈ 2025 ವರ್ಷದಲ್ಲಿ ಯಾವ ಕಾರ್ಯ ನೆರವೇರಲಿಲ್ಲ, ಯಾವ ಕಾರ್ಯ ನಡೆಯಲಿಲ್ಲ ಎಲ್ಲವನ್ನು ಈಗ ಯೋರ್ದನ್ ನಲ್ಲಿ ಹಾಕಿ, ಮುಚ್ಚಿ, ಸಾಯಿಸಿ, ದೇವರ ಆತ್ಮನಿಂದ ಹೊಸ ಜೀವನಕ್ಕೆ ಹುಟ್ಟಿ ಬರುವ ಕಾರ್ಯ.
ಇದು ನಮ್ಮ ಬಲದಿಂದ ನಡೆಯುವ ಕಾರ್ಯ ಅಲ್ಲ ಇದು ದೇವರೇ ಮಾಡುವ ಕಾರ್ಯ.
ಇದುವರೆಗೆ ಇದ್ದ ಜೀವನದಿಂದ ಒಂದು ಹೊಸ ಜೀವನಕ್ಕೆ ಹೋಗುವುದೇ ಕ್ರಾಸ್ ಓವರ್
ನದಿಯ ಈ ದಡದಿಂದ ಆ ದಡಕ್ಕೆ ದಾಟಿ ಹೋಗುವುದು ಎಂದು ಅರ್ಥ. ಅಂದರೆ ಆ ಜಾಗದಲ್ಲಿ ಜಾಗೃತೆಯಿಂದ ದಾಟಿ ಹೋಗಬೇಕು. ಒಂದು ರೀತಿ ಇದ್ದ ಜೀವನವನ್ನು ಇನ್ನೊಂದು ರೀತಿಯಾಗಿ ಪರಿವರ್ತಿಸುವ ಕಾರ್ಯವೇ ಕ್ರಾಸಿಂಗ್
ನನ್ನ ಬಲದಿಂದ, ನನ್ನ ಜ್ಞಾನದಿಂದ, ನನ್ನ ಸಾಮರ್ಥ್ಯದಿಂದ, ನನ್ನ ಅನುಭವದಿಂದ ಸಾಧ್ಯವಿಲ್ಲ ನನಗೆ ಒಂದು ಸಹಾಯ ಬೇಕು ಆ ಸಹಾಯಕನೇ ಪವಿತ್ರಾತ್ಮನು
ಪಾಳೆಯ ಕ್ಕೆ ಹೋಗಿ ಎಲ್ಲರಿಗೂ ಹೇಳಿ ಎನ್ನುವ ಕನ್ನಡ ಪದವನ್ನು ಇಂಗ್ಲಿಷ್ ನಲ್ಲಿ go command to the people
Command ಸಾಧಾರಣವಾಗಿ ಹೇಳುವ ವಿಷಯ ಅಲ್ಲ, ಕಟ್ಟಳೆ ಕೊಡುವ ವಿಷಯ
ಸಿದ್ಧತೆ ಎನ್ನುವುದು ಒಂದು ಕಟ್ಟಳೆಯಾಗಿದೆ. ವಾಕ್ಯವನ್ನು ಎಷ್ಟು ಸೀರಿಯಸ್ ಆಗಿ ಹೊಂದಿಕೊಳ್ಳುತ್ತೇವೋ ಅಷ್ಟು ನಮ್ಮ ಗಮನ, ನಮ್ಮ ಪ್ರಾಮುಖ್ಯತೆ ಅದಕ್ಕಾಗಿ ನಮ್ಮ ಸಿದ್ಧತೆ ಬಹಳ ಸೀರಿಯಸ್ ಆಗಿ ಇರುತ್ತದೆ.
ಇಲ್ಲಿ ಯೆಹೋಶುವನು ಅವರಿಗೆ ಕಮಾಂಡ್ ಮಾಡುತ್ತಿದ್ದಾರೆ. ಎಲ್ಲರೂ ಆಹಾರವನ್ನು ಸಿದ್ಧಪಡಿಸಿಕೊಳ್ಳಿರಿ.
ಇವತ್ತು ವಿಶ್ವಾಸಿಯಾಗಿರುವ ನಮಗೆ ಸಿದ್ಧಪಡಿಸಿಕೊಳ್ಳುವ ಆಹಾರ ಯಾವುದು?
"ವಾಕ್ಯವೆಂಬ ಆಹಾರ"
ವಾಕ್ಯವೆಂಬ ಆಹಾರ ನಮ್ಮ ಆತ್ಮವನ್ನು ಬಲಪಡಿಸಿ, ನಮ್ಮಆತ್ಮದ ಸಾಮರ್ಥ್ಯವನ್ನು ಹೆಚ್ಚಿಸುತ್ತದೆ.
ವಾಕ್ಯವೆಂಬ ಆತ್ಮದ ಆಹಾರದಿಂದ ನಮ್ಮ ನಂಬಿಕೆ ಬಲ ಹೊಂದುವುದು. ನಂಬಿಕೆಯ ಪ್ರೇರೇಪಣೆಯಿಂದ ವಾಗ್ದಾನಕ್ಕೆ ವಿಧೇರಾಗುವುದು. ದೇವರು ಯಾವ ಉದ್ದೇಶಕ್ಕಾಗಿ ನಮ್ಮನ್ನು ಆರಿಸಿಕೊಂಡಿದ್ದಾರೋ ಅದರಂತೆ ನಡೆಯುವುದು. ನಮ್ಮ ಒಳಗಿನ ಮನುಷ್ಯ ದೃಢವಾಗಿ, ದೇವರು ಹೇಳಿದ ಉದ್ದೇಶಕ್ಕೆ ವಿರುದ್ಧವಾದ ಶಬ್ದಗಳು, ವಿರುದ್ಧವಾದ ಕಾರ್ಯಗಳು, ವಿರುದ್ಧವಾದ ಪರಿಸ್ಥಿತಿಗಳು ಬರುವಾಗ, ಅವುಗಳನ್ನು ನಿರ್ಮೂಲ ಮಾಡಿ, ದೇವರ ಉದ್ದೇಶಕ್ಕೆ ಪ್ರಾಮುಖ್ಯತೆಯನ್ನು ಕೊಟ್ಟು ದೇವರ ವಾಕ್ಯದೊಂದಿಗೆ ಅನ್ಯೋನ್ಯತೆಯಿಂದ, ಐಕ್ಯತೆಯಿಂದ, ಹೊಂದಾಣಿಕೆಯಿಂದ ಇದ್ದು, ಆ ವಾಕ್ಯವು ನಿಮ್ಮಲ್ಲಿ ಕಾರ್ಯ ಮಾಡುವ ರೀತಿಯಲ್ಲಿ ಇರುವುದು.
ಹೊರಗಡೆ ಯಾವ ಕಾರ್ಯಗಳು ಸಮಸ್ಯೆಯಾಗಿ, ಭಯ , ಗಲಿಬಿಲಿ ಉಂಟಾಗುವ ಅಸಾಧ್ಯವಾದ ಕಾರ್ಯಗಳನ್ನು ನಮ್ಮ ಕಣ್ಣುಗಳು ನೋಡುತ್ತಿವೆಯೋ, ಅದಕ್ಕಿಂತ ನಮ್ಮ ಒಳಗಿನ ಮನುಷ್ಯ ಆ ವಾಗ್ದಾನವನ್ನು ಆತ್ಮವಾಗಿಯೂ ಜೀವವಾಗಿಯೂ ಹೊಂದಿಕೊಳ್ಳುವಾಗ ಲೋಕದಲ್ಲಿರುವ ಸಮಸ್ಯೆ ಗಿಂತ ಅದರ ಪರಿಹಾರವನ್ನು ನೋಡುವಂತೆ ಅವನ ಆತ್ಮದ ಕಣ್ಣುಗಳು ತೆರೆಯುವುದು
ಇದೇ ಆತ್ಮದ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವುದು
ಆತ್ಮದ ಸಾಮರ್ಥ್ಯವನ್ನು ಹೆಚ್ಚಿಸುವುದು ವಾಕ್ಯ, ಆ ವಾಕ್ಯವೇ ಯೇಸು. ಅದಕ್ಕೆ ಯೇಸು --- "ನಾನು ನಿನ್ನಲ್ಲಿಯೂ ನೀನು ನನ್ನಲ್ಲಿಯೂ ಇದ್ದರೆ , ಹೊರಗಡೆಯಿಂದ ಬಲ ಬೇಕಾಗಿಲ್ಲ, ನಾನೇ ನಿನ್ನ ಬಲವಾಗಿ ಇರುತ್ತೇನೆ. ನೀನು ಏನೋ ಒಂದು ಕಾರ್ಯವನ್ನು ಮಾಡಿ ನೀತಿವಂತನಾಗುವ ಅವಶ್ಯಕತೆ ಇಲ್ಲ. "ನೀತಿ" ಎಂಬ ನಾನು ನಿನ್ನೊಳಗಡೆ ಇದ್ದರೆ ಸಾಕು ಎಂದು ಹೇಳುತ್ತಾರೆ. ನೀನು ಏನೋ ಒಂದು ಕಾರ್ಯವನ್ನು ಮಾಡಿ ಪರಿಶುದ್ಧವಾಗಿರಲು ಪ್ರಯತ್ನ ಪಡಬೇಡ, "ಪರಿಶುದ್ಧ" ಎಂಬ ನಾನು ನಿನ್ನೊಳಗಡೆ ಇರುವುದರಿಂದ ನೀನು ಪರಿಶುದ್ಧನಾಗಿರುತ್ತೀಯ ಎಂದು ಹೇಳುತ್ತಾರೆ.
2026 ಕ್ಕೆ ಏರ್ಪಾಡು ಮಾಡಿರುವ ಮಹತ್ತರ ಕಾರ್ಯಗಳನ್ನು ಆಶೀರ್ವಾದ, ಐಶ್ವರ್ಯ, ಸಮೃದ್ಧಿ, ಸಂಪತ್ತು, ಜಯ ಎಲ್ಲವೂ ನಿನ್ನ ಬಲದಿಂದ ಅನುಭವಿಸುವುದಿಲ್ಲ. "ಬಲ" ಎಂಬ ನಾನು ನಿನ್ನೊಳಗಡೆ ಇರುವುದರಿಂದ ನೀನು ಪರಿಪೂರ್ಣವಾಗಿ ಅನುಭವಿಸುತ್ತಿಯಾ ಎಂದು ಹೇಳುತ್ತಿದ್ದಾರೆ.
ಎಫೆಸದವರಿಗೆ 3:20
ನಮ್ಮಲ್ಲಿ ಕಾರ್ಯಸಾಧಿಸುವ ತನ್ನ ಶಕ್ತಿಯ ಪ್ರಕಾರ ನಾವು ಬೇಡುವದಕ್ಕಿಂತಲೂ ಯೋಚಿಸುವದಕ್ಕಿಂತಲೂ
ನಿಮ್ಮ ಸಾಮರ್ಥ್ಯ ಯಾವ ಲೆವೆಲ್ ಗೆ ಇದೆಯೋ ಆ ಲೆವೆಲ್ ಗೆ ನಿಮ್ಮಲ್ಲಿ ಕೆಲಸ ಮಾಡುತ್ತಾರೆ.
ನಿಮ್ಮ ಶರೀರದಲ್ಲಿ ನೀವು ನೋಡುವುದು ಅನುಭವಿಸುವುದು ನಿಮ್ಮ ಆತ್ಮದ ಸಾಮರ್ಥ್ಯದ ಮೇಲೆ ಇದೆ.
ನಿಮ್ಮ ಆತ್ಮದ ಸಾಮರ್ಥ್ಯ ಮಿತಿಯುಳ್ಳದ್ದಾಗಿ ಇರಕೂಡದು, ದಿನೇ ದಿನೇ ಹೆಚ್ಚಿಸುತ್ತಲೇ ಇರಬೇಕು. ಪವಿತ್ರಾತ್ಮನು ನಿಮ್ಮ ಮೇಲೆ ಸುರಿಸುತ್ತಲೇ ಇರಬೇಕು, ಅದು ನಿಂತು ಹೋಗಬಾರದು ಎಂಬ ಗಮನ ನಿಮ್ಮಲ್ಲಿ ಇರುವುದಾದರೆ ಪವಿತ್ರಾತ್ಮನ ಬಲ, ಶಕ್ತಿ, ಸಾಮರ್ಥ್ಯ ನಿಮ್ಮ ಶರೀರದಲ್ಲಿ ಪ್ರಕಟವಾಗುತ್ತಲೇ ಇರುತ್ತದೆ.
ನಿಯಮ:
ಮಿತಿಯುಳ್ಳ ಆತ್ಮದ ಸಾಮರ್ಥ್ಯದಲ್ಲಿಯೇ ಇರುವ ಹಾಗೆ ದೇವರು ನಿಮ್ಮನ್ನು ಉಂಟುಮಾಡಿಲ್ಲ ನಿಮ್ಮ ಜೀವಮಾನವೆಲ್ಲ ಆತ್ಮದಲ್ಲಿ ಹೆಚ್ಚಾಗುತ್ತಲೇ ಇರಬೇಕು. ಪವಿತ್ರಾತ್ಮನು ಸುರಿಸುತ್ತಲೇ ಇರಬೇಕು. ಆ ಮಹಿಮೆಯನ್ನು ಈ ಭೂಮಿಯಲ್ಲಿ ನಿಮ್ಮ ಜೀವನ ಇರುವ ತನಕ, ಕ್ರಿಸ್ತನು ಬರುವತನಕ, ಎಲ್ಲಾದರಲ್ಲಿಯೂ ಸಮೃದ್ಧಿಯಾಗಿ ಹೆಚ್ಚಿಸುತ್ತಲೇ ಇರಬೇಕು ಎನ್ನುವುದೇ ದೇವರ ಉದ್ದೇಶವಾಗಿದೆ.
ಕೀರ್ತನೆ 81:10
ನಿಮ್ಮನ್ನು ಐಗುಪ್ತದಿಂದ ಕರತಂದ ಯೆಹೋವನೆಂಬ ನಾನೇ ನಿಮ್ಮ ದೇವರು.
ಅಗಲವಾಗಿ ಬಾಯಿದೆರೆಯಿರಿ; ಅದನ್ನು ತುಂಬಿಸುವೆನು ಅಂದೆನು.
ಎಷ್ಟು ಅಗಲವಾಗಿ ನಿನ್ನ ಬಾಯಿಯನ್ನು ತೆರೆಯುತ್ತಿಯೋ ಅಷ್ಟು ಹೆಚ್ಚಾಗಿ ನಾನು ತುಂಬಿಸುತ್ತೇನೆ ಎಂದು ದೇವರು ಹೇಳುತ್ತಾರೆ.
ಈ ಸತ್ಯವನ್ನು ಯಾರೆಲ್ಲಾ ಓದುತ್ತಿದ್ದಾರೋ, ಈ ಸತ್ಯದ ಆತ್ಮ ನಿಮ್ಮಲ್ಲಿ ತುಂಬಿ, ನಿಮ್ಮನ್ನು ಒಂದು ಲೆವೆಲ್ ನಿಂದ ಇನ್ನೊಂದು ಲೆವೆಲ್ ಗೆ ದಾಟಿಸಿ, ನಡೆಸಿ, ಶರೀರದ ಕಾರ್ಯಗಳು ಪ್ರಾಮುಖ್ಯವಾಗಿರದೆ, ಈ ಶರೀರದ ಕಾರ್ಯಗಳು ನೆರವೇರುವುದಕ್ಕೆ ಕಾರಣವಾಗಿರುವ ನಿಮ್ಮ ಆತ್ಮಕ್ಕೆ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳುವಂತೆ, ಈ ಸತ್ಯಕ್ಕೆ ಪ್ರಾಮುಖ್ಯತೆಯನ್ನು ಕೊಡುವಂತೆ ನಡೆಸುತ್ತದೆ.
ಆತ್ಮದಲ್ಲಿ ಕುಗ್ಗಿದರೆ ನಿಮ್ಮ ಶರೀರದಲ್ಲಿ ಕುಗ್ಗಿ ಹೋಗುತ್ತೀರಿ. ದೇವರ ಪ್ರಸನ್ನತೆಗೆ ಪ್ರಾಮುಖ್ಯತೆ ಕೊಡದೆ ನಿಮ್ಮ ಶರೀರದ ಬಲದಲ್ಲಿ ಹೋರಾಡುವ ತನಕ ನೀವು ನಿಮ್ಮ ಮಿತಿಯಾದ ಸಾಮರ್ಥ್ಯದಲ್ಲಿ ಇರುತ್ತೀರಿ. 10 ಕೆಜಿ ಅಕ್ಕಿಗಾಗಿ ವರ್ಷಾನುಗಟ್ಟಲೆ ದುಡಿಯಬೇಕಾಗುತ್ತದೆ. ಆದ್ದರಿಂದ ನಾವು ಶರೀರದಲ್ಲಿ ಅನುಭವಿಸುವುದು ನಮ್ಮ ಆತ್ಮದ ಸಾಮರ್ಥ್ಯದ ಮೇಲೆ ಇದೆ..
ದೇವರು ಹೇಳುತ್ತಿದ್ದಾರೆ 2026ರಲ್ಲಿ ನಿನಗಾಗಿ ಇಟ್ಟಿರುವ ಕಾರ್ಯಗಳಿಗೆ ನೀನು ಯಾವ ಲೆವೆಲ್ ನಲ್ಲಿ ಸಿದ್ಧತೆ ಮಾಡ್ತೀಯೋ, ಆತ್ಮದ ಸಾಮರ್ಥ್ಯವನ್ನು ಎಷ್ಟು ಹೆಚ್ಚಿಸಿಕೊಳ್ಳುತ್ತಿಯೋ ನಾನು ಹೇರಳವಾಗಿ ಇಟ್ಟಿದ್ದರು, ನಿನ್ನ ಸಾಮರ್ಥ್ಯಕ್ಕೆ ತಕ್ಕಂತೆ ನೀನು ಅನುಭವಿಸಲು ಸಾಧ್ಯ.
ಪ್ರಾಮುಖ್ಯವಾದ ನಿಯಮ:
ಹೋಗಿ ಹೇಳು ಎನ್ನುವ ಮಾತನ್ನು ಒಂದು ಗುಂಪಿಗೆ ಹೇಳಲಿಲ್ಲ, ನೂರು ಜನ ಇದ್ದಲ್ಲಿ 10 ಜನರಿಗೆ ಹೇಳಲಿಲ್ಲ, ಒಬ್ಬ ವ್ಯಕ್ತಿಗೆ ಹೇಳಲಿಲ್ಲ, ಪಾಳೆಯ ದಲ್ಲಿರುವ ಎಲ್ಲಾ ಜನರಿಗೂ ಅಂದರೆ ಸಭೆಯನ್ನು ತೋರಿಸುತ್ತದೆ, ಇದು ಸಭೆಯ ಎಲ್ಲರಿಗೂ ಕಟ್ಟಳೆಯಾಗಿದೆ.
ದೇವ ಮನುಷ್ಯನ ಬಾಯಿಂದ ಬರುವ ಒಂದೊಂದು ವಾಕ್ಯ, ವಾಗ್ದಾನ ದೇವರ ಮಕ್ಕಳಾದ ಒಬ್ಬೊಬ್ಬರಿಗೂ ಕಟ್ಟಳೆಯಾಗಿದೆ. ಆ ವಾಕ್ಯವನ್ನು ಬಯಕೆಯಿಂದ ಹೊಂದಿಕೊಂಡು, ಆ ವಾಕ್ಯದ ಆತ್ಮದ ಜೊತೆ ಅನ್ಯೋನ್ಯತೆಯಲ್ಲಿದ್ದು, ಆ ವಾಕ್ಯದ ಆತ್ಮದೊಂದಿಗೆ ಒಂದಾಗಿ, ಹೊಂದಾಣಿಕೆಯಾಗಿರುವಾಗ, ಆ ವಾಕ್ಯದ ವಾಗ್ದಾನದ ಕಾರ್ಯ ನಿಮ್ಮಲ್ಲಿ ಪ್ರಕಟವಾಗುವುದು.
ಮತ್ತಾಯ 18 : 20
“ಯಾಕಂದರೆ ಇಬ್ಬರು ಮೂವರು ನನ್ನ ಹೆಸರಿನಲ್ಲಿ ಎಲ್ಲಿ ಕೂಡಿ ಬಂದಿರುತ್ತಾರೋ ಅಲ್ಲಿ ಅವರ ನಡುವೆ ನಾನು ಇದ್ದೇನೆ” ಅಂದನು.
ನನ್ನ ಹೆಸರಿನಲ್ಲಿ ಇಬ್ಬರು ಮೂವರು ಸೇರಿರುವಾಗ ಅವರು ಒಂದೇ ಆಲೋಚನೆಯಲ್ಲಿ, ಒಂದೇ ಆತ್ಮದಲ್ಲಿ, ಒಂದೇ ಅನ್ಯೋನ್ಯತೆಯಲ್ಲಿ ಮತ್ತು ಒಂದೇ ಐಕ್ಯತೆಯಲ್ಲಿ ಇರುತ್ತಾರೆ ಎಂದು ದೇವರು ಹೇಳುತ್ತಾರೆ.
ಒಂದು ಕಟ್ಟಳೆ ಬರುವಾಗ ಎಲ್ಲಾ ಒಂದು ಮನಸ್ಸಿನಿಂದ, ಒಂದೇ ಆತ್ಮದಿಂದ ಹೊಂದಿಕೊಳ್ಳುವಾಗ ಆ ವಾಗ್ದಾನದ ಕಾರ್ಯ ನೆರವೇರುತ್ತದೆ
ಉದಾಹರಣೆ : ಕಾರು ತಯಾರಿಸುವ ಕಂಪನಿ
ಒಂದು ಕಂಪನಿಯಲ್ಲಿ ಒಬ್ಬರೇ ಕೆಲಸ ಮಾಡಲು ಸಾಧ್ಯವಿಲ್ಲ, ಬೇರೆ ಬೇರೆ ಸಾಮರ್ಥ್ಯ ಇರುವವರು ಬೇಕು, ಅವರೆಲ್ಲರೂ ಒಂದೇ ತಿಳುವಳಿಕೆಯಿಂದ, ಒಂದೇ ಐಕ್ಯತೆಯಿಂದ, ಒಂದೇ ಅನ್ಯೋನ್ಯತೆಯಿಂದ ಒಂದೇ ಗುರಿಯನ್ನು ಇಟ್ಟುಕೊಂಡಿದ್ದರೆ ಮಾತ್ರವೇ ಒಂದು ಕಾರನ್ನು ಉತ್ಪಾದಿಸಲು ಸಾಧ್ಯ . ಆ ಕಂಪನಿಯ ಯಜಮಾನ ಎಲ್ಲಾ ರೀತಿಯ ಸಾಮರ್ಥ್ಯ ಇರುವ ಅನೇಕರನ್ನು ಕೂಡಿಸಿ, ಯಾರ್ಯಾರಿಗೆ ಏನೇನು ಕರ್ತವ್ಯವನ್ನು ಕೊಡುತ್ತಾರೋ ಅವರೆಲ್ಲರೂ ಕ್ರಮವಾಗಿ, ಸರಿಯಾಗಿ ಮಾಡುವಾಗ ಮಾತ್ರವೇ ಒಂದು ಕಾರು ತಯಾರಾಗುತ್ತದೆ.
ಅದರಂತೆ ಇದನ್ನು ಓದುತ್ತಿರುವ ಒಬ್ಬೊಬ್ಬರಿಗೆ ಒಂದೊಂದು ಕಾರ್ಯವನ್ನು ಕೊಟ್ಟು,ಅದಕ್ಕೆ ತಕ್ಕಂತೆ ನಮ್ಮನ್ನು ಸಿದ್ಧತೆ ಮಾಡಿ, ಸಭೆಯಾಗಿ ಸೇರಿ ಅನ್ಯೋನ್ಯತೆಯಿಂದ, ಐಕ್ಯತೆಯಿಂದ, ಕ್ರಮವಾಗಿ ಮತ್ತು ಸರಿಯಾಗಿ ಕೆಲಸ ಮಾಡುವಾಗ ಮಾತ್ರವೇ ಆ ವಾಗ್ದಾನದ ಕಾರ್ಯವನ್ನು ಅನುಭವಿಸಲು ಸಾಧ್ಯ. ಆಗ ನಮ್ಮ ವೈಯಕ್ತಿಕ ಜೀವಿತವು ಸಹ ಆಶೀರ್ವಾದವಾಗಿ ಇರುತ್ತದೆ. ನಮ್ಮ ಜೀವಿತದಲ್ಲಿ ಯಾವ ಕೊರತೆಯೂ ಇರುವುದಿಲ್ಲ.
2026ರಲ್ಲಿ ದೇವರು ನಿಮಗಾಗಿ ಇಟ್ಟಿರುವ ಆರೋಗ್ಯ, ಐಶ್ವರ್ಯ, ಸಮಾಧಾನ, ಸಂತೋಷಕ್ಕೆ ಕೊರತೆ ಇರುವುದಿಲ್ಲ. ನೀವು ಅದಕ್ಕಾಗಿ ಪ್ರಯತ್ನಪಟ್ಟು ಹುಡುಕಿಕೊಂಡು ಹೋಗಬೇಡಿ. ದೇವರ ಉದ್ದೇಶಕ್ಕೆ ಗಮನವಾಗಿ ಕಾರ್ಯಗಳನ್ನು ಒಪ್ಪಿಸಿಕೊಡುವಾಗ, ಇಂಥ ಸತ್ಯದ ಆತ್ಮವನ್ನು ಹೊಂದಿಕೊಂಡು, ಆ ಸತ್ಯದ ಆತ್ಮವೇ , ನಿಮ್ಮನ್ನು ದೇವರ ಉದ್ದೇಶಕ್ಕೆ ತಕ್ಕಂತೆ ನಡೆಸಿ, ನಿಮ್ಮ ಜೀವಿತದಲ್ಲಿ ಎಲ್ಲಾ ಕ್ರಮವಾಗಿ, ಸರಿಯಾಗಿ, ಜಯವಾಗಿ ಮತ್ತು ಆಶೀರ್ವಾದವಾಗಿ ನಡೆಯುತ್ತದೆ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತಿದ್ದೇನೆ.
ಈ ತಿಂಗಳ ಅರಿಕೆಯನ್ನು ಪ್ರತಿಯೊಂದು ದಿನವು ಬೆಳಿಗ್ಗೆ ಎದ್ದು ಅರಿಕೆ ಮಾಡಿ ನಿಮ್ಮ ಆತ್ಮದ ಸಾಮರ್ಥ್ಯವನ್ನು ಹೆಚ್ಚಿಸಿ, ನೀವು ಹೊಂದಿಕೊಂಡಿರುವ ಸತ್ಯ "ಆತ್ಮದಲ್ಲಿ ನಿಮ್ಮನ್ನು ಸಿದ್ಧಪಡಿಸಿದೆ" ಎಂಬ ನಿಶ್ಚಯ ಉಂಟಾದರೆ ಸಾಕು. 2026 ವರ್ಷ ನಮಗೆ ಅನುಕೂಲವಾಗಿರುವ ಅವಶ್ಯಕತೆ ಇಲ್ಲ ಅದನ್ನು ಅನುಕೂಲವಾಗಿ ಮಾಡಿ ಇಟ್ಟಿದ್ದಾರೆ ಎಂದು ತಿಳಿದುಕೊಂಡರೆ ಸಾಕು. ದೇವರು ಈಗಾಗಲೇ ಮಾಡಿ ಇಟ್ಟಿರುವ ಕಾರ್ಯಗಳು ಪ್ರಕಾಶಮಾನವಾಗಿ ಹೊಳೆಯುತ್ತವೆ. ಒಂದು ಆಶೀರ್ವಾದವನ್ನು ಮಿಸ್ ಮಾಡುವುದಿಲ್ಲ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಇವತ್ತಿನ ಸತ್ಯ ಏನೆಂದರೆ - ನೀನು ವಾಕ್ಯವನ್ನು ಹೊಂದಿಕೊಂಡು, ನಿನ್ನ ಆತ್ಮ ಬಲವಾಗಿದ್ದರೆ, ನಿನ್ನ ಆತ್ಮವೇ ನಿನ್ನನ್ನು ನಡೆಸಿ ಯೋರ್ದನ್ ಎಂಬುವ ಎಂತಹ ಸಮಸ್ಯೆಗಳಾದರೂ ಅದನ್ನು ದಾಟಿ, ಆ ವಾಗ್ದಾನ ಮಾಡಿರುವ ದೇಶ ಎಂಬ 2026ರಲ್ಲಿ ದೇವರು ಎಂಥ ಫಲಗಳು, ಮಹತ್ತಾದ ಆಶೀರ್ವಾದಗಳು, ಆರೋಗ್ಯ, ಐಶ್ವರ್ಯ, ಸಮೃದ್ಧಿಯನ್ನು ಅನುಭವಿಸುವಂತೆ ನೀನು ಸಿದ್ಧನಾಗಿರುತ್ತೀಯ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಇಂಥ ಸತ್ಯ ನಿಮ್ಮನ್ನು ಸಿದ್ಧತೆ ಪಡಿಸುತ್ತಾ ಇರುವುದರಿಂದ, ಎಲ್ಲಾ ತಡೆಗಳನ್ನು ನಿರ್ಮೂಲ ಮಾಡಿ ದೇವರ ಆಶೀರ್ವಾದಗಳನ್ನು ನೀವು ತೃಪ್ತಿಯಾಗಿ ಅನುಭವಿಸುವಂತೆ ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಪ್ರವಾದನೆಯ ವಾಕ್ಯ :
ಪ್ರವಾದಿ ಯೆಶಾಯನ ಗ್ರಂಥ - 54 : 2, 3
ನಿನ್ನ ಗುಡಾರದ ಸ್ಥಳವನ್ನು ವಿಸ್ತರಿಸು, ನಿನ್ನ ನಿವಾಸದ ಪರದೆಗಳು ಹರಡಲಿ, ಸಂಕೋಚಪಡಬೇಡ; ನಿನ್ನ ಹಗ್ಗಗಳನ್ನು ಉದ್ದಮಾಡಿ ಗೂಟಗಳನ್ನು ಬಲಪಡಿಸು. ನೀನು ಎಲ್ಲಾ ಕಡೆಗಳಲ್ಲಿಯೂ ಹಬ್ಬಿಕೊಳ್ಳುವಿ; ನಿನ್ನ ಸಂತಾನದವರು ಜನಾಂಗಗಳನ್ನು ವಶಮಾಡಿಕೊಂಡು ಹಾಳು ಪಟ್ಟಣಗಳನ್ನು ಜನಭರಿತವಾಗುವಂತೆ ಮಾಡುವರು.
ಈ ವಾಕ್ಯದಂತೆ ನಿಮ್ಮ ಆತ್ಮದ ಸಾಮರ್ಥ್ಯವನ್ನು ಹೆಚ್ಚಿಸಿ, 2026ರಲ್ಲಿ ಅದರ ಫಲಗಳನ್ನು ತೃಪ್ತಿಯಾಗಿ ಅನುಭವಿಸುತ್ತಿದ್ದೀರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಈ ಸತ್ಯದ ಆತ್ಮ ನಿಮ್ಮ ಆತ್ಮದ ಸಾಮರ್ಥ್ಯವನ್ನು ಹೆಚ್ಚಿಸಿ, ನಿಮ್ಮ ಮನಸ್ಸನ್ನು ಮಾನಸಾಂತರ ಪಡಿಸಿ, ನಿಮ್ಮ ನಂಬಿಕೆಯನ್ನು ಬದಲಾಯಿಸಿ, ಇದುವರೆಗೂ ನಿಮ್ಮ ಪರಿಸ್ಥಿತಿ ಹೇಗೆ ನಡೆಯುತ್ತಿತ್ತು ಅದರಂತೆ ನಡೆಯದೆ ಇನ್ನು ಮುಂದೆ ದೇವರ ಆತ್ಮದ ನಡೆಸುವಿಕೆಯ ಪ್ರಕಾರ ಇರುತ್ತದೆ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಇದುವರೆಗೂ ಮುಟ್ಟಲು ಆಗದಿರುವಂತಹ ಎತ್ತರದ ಸ್ಥಾನವನ್ನು ಮುಟ್ಟುತ್ತಿದ್ದೀರಿ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಯಾವ ಶತ್ರು, ಸೈತಾನನ ಕಾರ್ಯಗಳು ನೀವು ವಿಸ್ತಾರ ಆಗುವುದನ್ನು, ಹೆಚ್ಚಳ ಆಗುವುದನ್ನು ನಿಲ್ಲಿಸಲು ಸಾಧ್ಯವಿಲ್ಲ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಇಂಥ ಸತ್ಯದ ಮೂಲಕ ನಿಮ್ಮ ಆತ್ಮದ ಸಾಮರ್ಥ್ಯ ಹೆಚ್ಚಿಸುವುದು ಮಾತ್ರವಲ್ಲ, ನಿಮ್ಮ ಮಕ್ಕಳ ಮಕ್ಕಳು ಅನುಭವಿಸುವಂತೆ, ಅವರ ಕಾರ್ಯಗಳು ಕೂಡ ದೇವರ ಪ್ರಸನ್ನತೆಯನ್ನು ಅನುಭವಿಸುವಂತೆ, ನಿಮ್ಮ ಮೂಲಕ ಹರಿಯುತ್ತಿರುವ ವಾಗ್ದಾನದ ಅಭಿಷೇಕ, ಬಲ, ಸಾಮರ್ಥ್ಯ ನಿಮ್ಮ ಸಂತತಿಗಳಲ್ಲಿ ಪ್ರಕಟವಾಗುವುದು ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಈ ವರ್ಷ ಏನೇನನ್ನು ಕಳೆದುಕೊಂಡರೋ, ನಷ್ಟವಾಯಿತೋ, ಸಿಗಲಿಲ್ಲವೋ, ಒಡೆದು ಹೋಗಿರುವ ಎಲ್ಲವೂ ಮತ್ತೆ ಪುನಃ ಶ್ರೇಷ್ಠವಾಗಿ, ಅದಕ್ಕಿಂತ ಬೆಸ್ಟ್ ಆಗಿ, ಈಗ ಪುನಃಸ್ಥಾಪನೆ ಆಗುತ್ತಿದೆ ಎಂದು ಯೇಸುವಿನ ನಾಮದಲ್ಲಿ ಡಿಕ್ಲೇರ್ ಮಾಡುತ್ತೇನೆ.
ಈ ತಿಂಗಳ ಅರಿಕೆ :
God is expanding my spirit.
He is enlarging my influence.
He is strengthening my foundation and stretching my capacity.
I am being prepared for an increase that my current life cannot contain.
I will impact nations.
I will restore broken places.
I will rebuild what has been ruined.
What God is doing in me is greater than me,
and what He will release through me will outlive me
ದೇವರು ನನ್ನ ಚೈತನ್ಯವನ್ನು ವಿಸ್ತರಿಸುತ್ತಿದ್ದಾನೆ.
ಅವನು ನನ್ನ ಪ್ರಭಾವವನ್ನು ವಿಸ್ತರಿಸುತ್ತಿದ್ದಾನೆ.
ಅವನು ನನ್ನ ಅಡಿಪಾಯವನ್ನು ಬಲಪಡಿಸುತ್ತಿದ್ದಾನೆ ಮತ್ತು ನನ್ನ ಸಾಮರ್ಥ್ಯವನ್ನು ವಿಸ್ತರಿಸುತ್ತಿದ್ದಾನೆ.
ನನ್ನ ಪ್ರಸ್ತುತ ಜೀವನವು ಹೊಂದಲು ಸಾಧ್ಯವಾಗದ ಹೆಚ್ಚಳಕ್ಕೆ ನಾನು ಸಿದ್ಧನಾಗಿದ್ದೇನೆ.
ನಾನು ರಾಷ್ಟ್ರಗಳ ಮೇಲೆ ಪರಿಣಾಮ ಬೀರುತ್ತೇನೆ.
ನಾನು ಮುರಿದ ಸ್ಥಳಗಳನ್ನು ಪುನಃಸ್ಥಾಪಿಸುತ್ತೇನೆ.
ನಾಶವಾದದ್ದನ್ನು ನಾನು ಪುನರ್ನಿರ್ಮಿಸುತ್ತೇನೆ.
ದೇವರು ನನ್ನಲ್ಲಿ ಏನು ಮಾಡುತ್ತಿದ್ದಾನೆ ಎಂಬುದು ನನಗಿಂತ ದೊಡ್ಡದು,
ಮತ್ತು ಅವನು ನನ್ನ ಮೂಲಕ ಬಿಡುಗಡೆ ಮಾಡುವದು ನನ್ನ ಜೀವಿತಾವಧಿಯನ್ನು ಮೀರುತ್ತದೆ.
ಈ ಸಂದೇಶವನ್ನು ಪೂರ್ತಿಯಾಗಿ ನೋಡಲು ಕೆಳಗಿನ ಲಿಂಕ್ ಮೇಲೆ ಒತ್ತಿ.
Prophetic Word for Month Dec-2025
ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
GOOGLE MEET LINK - TO JOIN MORNING PRAYER @6 AM from MONDAY TO FRIDAY
ಈ ತಿಂಗಳಿನ್ ವಾಗದಾನವನ್ನು ದೇವ ಮನುಷ್ಯನ ಮೂಲಕ ಕೊಟ್ಟಿದಕ್ಕಾಗಿ ಸ್ತೋತ್ರ
ReplyDeleteBlessings!
DeleteGlory to God 🙏 Thank you Jesus 🙏
ReplyDeleteBlessings!
DeleteGlory to god i agree and receive it in my spirit in the mighty Jesus Christ name Amen 🙏🔥🔥💯
ReplyDeleteBlessings!
DeleteGlory to God 🙏 I received it in my spirit in the mighty name of Jesus name Amen 🔥🔥🔥
ReplyDeleteBlessings!
DeleteYes, this month is Divine preparation for 2026
ReplyDeleteGlory glory to Jesus 🙏🏻🙏🏻🙏🏻
This comment has been removed by the author.
ReplyDeleteYes! This message has given a lot of energy in my Spirit to prepare 2026!! Thank you LORD for this powerful life changing message!! Glory and honor to the LORD JESUS CHRIST!! 🔥🔥🔥
ReplyDelete