Testimony #708 - ಬೆಂಗಳೂರಿನಲ್ಲಿ ನಡೆದ ಕ್ಯಾಂಪ್ ಮೀಟಿಂಗ್‌ಗಾಗಿ ಬಂದಿದ್ದೆ...

 ದೇವರ ಪರಿಶುದ್ಧ ನಾಮಕ್ಕೆ ಸ್ತೋತ್ರ ವಾಗಲಿ.

ನನ್ನ ಹೆಸರು ಬಬ್ಲಿ 

ನಾನು ಬೆಳಗಾವಿಯಿಂದ ಬೆಂಗಳೂರಿನಲ್ಲಿ ನಡೆದ ಕ್ಯಾಂಪ್ ಮೀಟಿಂಗ್‌ಗಾಗಿ ಬಂದಿದ್ದೆ.

ಕ್ಯಾಂಪ್‌ಗೆ ಹೋಗಬೇಕೆಂದು ನಿರ್ಧರಿಸಿದಾಗ ನನ್ನ ಮನಸ್ಸಿನಲ್ಲಿ ಭಯ ತುಂಬಿತ್ತು — “ನೀನು ಬೆಂಗಳೂರಿಗೆ ಹೋಗಬೇಡ, ಅಲ್ಲಿ ಹೋದರೆ ಕುಟುಂಬಕ್ಕೆ ತೊಂದರೆ ಆಗುತ್ತದೆ, ನಿನ್ನ ಗಂಡ ಸಾಯ್ತಾನೆ,  ನೀನು ಬೆಂಗಳೂರಿನಿಂದ ತಿರುಗಿ ಹೇಗೆ ಬರ್ತೀಯಾ, ನಿನಗೆ ಹೇಗೆ ಗೊತ್ತಾಗುತ್ತದೆ, ನಿನ್ನ ಜೊತೆ ಬಂದವರು ಯಾರು ಪ್ರೇಯರ್ ಬಿಟ್ಟು ನಿನ್ನ ಜೊತೆಬರುವುದಿಲ್ಲ” ಎಂಬ ಧ್ವನಿಗಳು ನನ್ನ ಮನಸ್ಸಿನಲ್ಲಿ ಬರುತ್ತಿದ್ದವು.

ಆದರೆ ನಾನು ದೇವರ ಮುಂದೆ ಮೊಣಕಾಲೂರಿ ಅನ್ಯಭಾಷೆಯಲ್ಲಿ ಪ್ರಾರ್ಥನೆ ಮಾಡಿದೆ ಮತ್ತು  — “ದೇವರೇ, ನೀನು ನಮಗಾಗಿ ಜಜ್ಜಲ್ಪಟ್ಟು ಸತ್ತು ಎದ್ದು ಬಂದಿರುವ ದೇವರು, ನಮ್ಮಲ್ಲಿ ವಾಸಿಸುವ ದೇವರಾಗಿದ್ದೀರಿ. ನನ್ನ ಕುಟುಂಬವನ್ನು ನಿನ್ನ ಪಾದಗಳಿಗೆ ಒಪ್ಪಿಸುತ್ತೇನೆ. ನಾನು ನಿನ್ನ ಸೇವೆಗಾಗಿ ಹೋಗುತ್ತೇನೆ, ನನ್ನ ಕುಟುಂಬವನ್ನು ನೀನೆ ಕಾಪಾಡು.”

ಆ ನಂಬಿಕೆಯೊಂದಿಗೆ ನಾನು ಕ್ಯಾಂಪ್ ಮೀಟಿಂಗ್‌ಗೆ ಬಂದೆ.

ಅಲ್ಲಿಯ ಪ್ರಾರ್ಥನೆಯಲ್ಲಿ ಭಾಗವಹಿಸುತ್ತಿದ್ದಾಗಲೇ, ಬೆಳಗಾವಿಯಲ್ಲಿ ನನ್ನ ಗಂಡನಿಗೆ ದೊಡ್ಡ ಅಪಘಾತ ಆಯಿತು. ವಾಹನ ಮೂರು ಬಾರಿ ಪಲ್ಟಿ ಹೊಡೆದಿತ್ತು. ಎಲ್ಲರೂ “ಇವರು ಸತ್ತಿದ್ದಾರೆ” ಎಂದುಕೊಂಡರು. ಆದರೆ ದೇವರ ಕೃಪೆಯಿಂದ ಅವರಿಗೆ ಒಂದು ಸಣ್ಣ ಗಾಯವೂ ಆಗದೆ ಎದ್ದು ಬಂದರು.  ಅಲ್ಲಿದ್ದ ಜನರಿಗೆ ಆಶ್ಚರ್ಯವಾಯಿತು. ನಮ್ಮ ಮನೆಯವರು ಮಗಳಿಗೆ ಕಾಲ್ ಮಾಡಿ ನಾನು ಹೇಗೆ ಉಳಿದೆ ಎಂದು ನನಗೆ ಗೊತ್ತಿಲ್ಲ ಎಂದು ಹೇಳಿದರು. ದೇವರು ಅದ್ಭುತವಾಗಿ ಜೀವ ಉಳಿಸಿದ್ದಕ್ಕಾಗಿ ದೇವರಿಗೆ ಕೋಟಿ ಕೋಟಿ ಸ್ತೋತ್ರಗಳು! 

ನಮ್ಮ ಮನೆಯಲ್ಲಿ 5 ವರ್ಷದ ಮಗು ಇದೆ. ಅದು ಗಾಳಿಪಟದ ದಾರ ಕುತ್ತಿಗೆಯಲ್ಲಿ ಸಿಕ್ಕಿಕೊಂಡಿತ್ತು. ಅದೂ ಪ್ರಾಣಾಪಾಯದ ಸ್ಥಿತಿ. ಆದರೆ ದೇವರು ಆ ಮಗುವನ್ನೂ ಅದ್ಭುತವಾಗಿ ರಕ್ಷಿಸಿದನು. ದೇವರಿಗೆ ಸ್ತೋತ್ರಗಳು! 

ಕ್ಯಾಂಪ್ ಮೀಟಿಂಗ್‌ನಲ್ಲಿ ಆತ್ಮಿಕ ತಂದೆಯವರು ಕಾಣಿಕೆ ಬಗ್ಗೆ ಮಾತನಾಡುವಾಗ, ಆ ಮಾತು ನನ್ನ ಹೃದಯವನ್ನು ಮುಟ್ಟಿತು. ಅವರ ಮಾತುಗಳು ನನಗೆ ಅಪಾರ ಸಂತೋಷ, ಶಾಂತಿ ಮತ್ತು ಆನಂದ ಕಣ್ಣೀರನ್ನು ತರಿಸಿದವು.

ಅವರು ಹೇಳಿದರು —  “ನಿಮಗೆ ಅಗತ್ಯವಿರುವ ವಿಷಯಗಳನ್ನು ಒಂದು ಚೀಟಿಯಲ್ಲಿ ಬರೆದು ಕೊಡಿ.”

ನಾನು ಬರೆದ ಎಲ್ಲವೂ ಈಗ ಒಂದರ ಹಿಂದೊಂದಾಗಿ ನೆರವೇರತೊಡಗಿವೆ. ದೇವರ ಕಾರ್ಯಗಳು ನನ್ನ ಜೀವನದಲ್ಲಿ ಅದ್ಭುತವಾಗಿ ನಡೆಯುತ್ತಿವೆ.

 ನಮ್ಮನ್ನು ದೇವರು ಆತ್ಮದಲ್ಲಿ ದಿನಾಲೂ ನಡೆಸುತ್ತಿರುವುದಮೋಶೆಯ ಮೂಲಕ ದೇವರು ತನ್ನ ಜನರನ್ನು ನಡೆಸಿದಂತೆ, ಈ ಆತ್ಮಿಕ ತಂದೆಯವರ ಮೂಲಕಕ್ಕಾಗಿ ದೇವರಿಗೆ ಕೋಟಿ ಕೋಟಿ ಸ್ತೋತ್ರಗಳು!


 ಫಾಲೋ ಮಾಡಿ, ಲೈಕ್ ಮಾಡಿ, ಕಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR BANGALORE CHURCH LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


Comments

  1. Wow praise the Lord
    Wonderful testimony glory to Jesus 🙏

    ReplyDelete
  2. GLORY to be Father god powerful testimony god bless you sister 👏🙏🔥

    ReplyDelete
  3. Powerful testimony!! Glory to GOD!! AMEN!! 👏👏👏

    ReplyDelete

Post a Comment

Popular posts from this blog

Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)