Testimony #701 - ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು

 
 ನನ್ನ ಹೆಸರು ಸರೋಜಿನಿ, 🙏

ಮೇ ತಿಂಗಳಲ್ಲಿ, ನಮ್ಮ ಅಣ್ಣ ಮಾರ್ನಿಂಗ್ ಪ್ರೇಯರ್ ಲಿಂಕ್  ಕಳಿಸಿದರು. 
 ಆ ದಿನವೇ ಪಾಸ್ಟರ್ ನನ್ನ ಹೆಸರು ಕರೆದು, ನಿಮ್ಮ ಅನಾರೋಗ್ಯ ಬಿಟ್ಟು ಹೋಗಲಿ, ಯೇಸುವಿನ ನಾಮದಲ್ಲಿ ನಾನು ಆ ಅನಾರೋಗ್ಯವನ್ನು ರದ್ದು ಮಾಡುತ್ತೇನೆ ಎಂದು ಡಿಕ್ಲೇರ್ ಮಾಡಿದರು.
    ಆ ಸಮಯದಲ್ಲಿ ನನಗೆ ಆರೋಗ್ಯ ತುಂಬಾ ಹದಗೆಟ್ಟಿತ್ತು,  
ಮೊದಲು ಪಿತ್ತವಾಗಿತ್ತು ಅದರ ಮೂಲಕ ಕಫವಾಯಿತು,  ಅತಿಯಾಗಿ ಕೆಮ್ಮುವಾಗ, ಹಾರ್ಟ್ ಜೋರಾಗಿ ಬಡಿಯುತ್ತಿತ್ತು. ಕೈಕಾಲುಗಳು ಸಹ ನಿಶ್ಯಕ್ತ ಸ್ಥಿತಿಯಲ್ಲಿದ್ದವು, ದೇಹದಲ್ಲಿ ತುಂಬಾ ಕಷ್ಟ ಪಡುತ್ತಿದ್ದೆ.

   ಆಸ್ಪತ್ರೆಗೆ ನಾನು ದಿನಾಲು ಹೋಗುತ್ತಿದ್ದೆ, ತಿಂಗಳಿಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಖರ್ಚಾಗುತ್ತಿತ್ತು, ಮಾತ್ರೆ ತೆಗೆದುಕೊಂಡಾಗ ಗುಣವಾದೆ ಅನಿಸುವುದು, ಆದರೆ  ಮಾತ್ರೆಯ ಪವರ್ ಮುಗಿದ ನಂತರ ಮತ್ತೆ ಅದೇ ಸಮಸ್ಯೆಯಲ್ಲಿ ಇರುತ್ತಿದ್ದೆ, 
ಪಾಸ್ಟರ್ ಡಿಕ್ಲೇರ್ ಮಾಡಿದ ನಂತರ ಎಲ್ಲಾ ಅನಾರೋಗ್ಯವು ಬಿಟ್ಟು ಹೋಗಿ ನಾನು ಆರೋಗ್ಯವಾಗಿ ಇದ್ದೇನೆ, ಪಾಸ್ಟರ್ ಮೂಲಕ ದೇವರು ಮಾಡಿದ ಅದ್ಭುತಕ್ಕಾಗಿ ದೇವರಿಗೆ ಕೋಟಿ ಕೋಟಿ ಸ್ತೋತ್ರ ಸ್ತೋತ್ರ.

ನಾನು ಟೀಚರ್ ಕೆಲಸದಲ್ಲಿದ್ದೇನೆ.

ಒಬ್ಬರು ನನಗೆ ಪ್ರಮೋಷನ್ ಕೊಡಿಸುತ್ತೇನೆ ಎಂದು ಹೇಳಿ ದುಡ್ಡು ತೆಗೆದುಕೊಂಡರು, ಆದರೆ ಅವರು ಪ್ರಮೋಷನ್ ಮಾಡಲಿಲ್ಲ.
ಆದರೆ ನಾನು ಪಾಸ್ಟರ್ ಹತ್ತಿರ ಪ್ರಾರ್ಥನೆ ಮಾಡಿಸಿಕೊಂಡೆ. ಅವರು ದುಡ್ಡು ವಾಪಸ್ ಕೊಡಿ ಎಂದು ಪ್ರಾರ್ಥಿಸದೆ, ಬದಲಿಗೆ “ನಿಮಗೆ ಈಗಾಗಲೇ ಪ್ರಮೋಷನ್ ಆಗಿದೆ” ಎಂದು ಪ್ರಾರ್ಥಿಸಿದರು.

ನಾನು ಅದನ್ನು ಆತ್ಮದಲ್ಲಿ ಸ್ವೀಕರಿಸಿ, ನಂಬಿಕೆಯಿಂದ ಅದೇ ಮಾತುಗಳನ್ನು ಮಾತನಾಡುತ್ತಿದ್ದೆ.
ಅದಾದ ಬಳಿಕ, ನನ್ನ ಮನೆಯ ಹತ್ತಿರ ಅಧಿಕಾರಿಗಳು ಬಂದು ಡಾಕ್ಯುಮೆಂಟ್ ತೆಗೆದುಕೊಂಡು, “15 ದಿನಗಳಲ್ಲಿ ಆರ್ಡರ್ ಬರುತ್ತದೆ” ಎಂದು ಹೇಳಿದರು.

ದೇವರಿಗೆ ಮಹಿಮೆ! ಈಗ ಆರ್ಡರ್ ಕಾಪಿ ಬಂದಿದೆ 😇
 ನವೆಂಬರ್ 2ರಿಂದ ನಾನು ಹೊಸ ಹುದ್ದೆಗೆ ಜಾಯಿನ್ ಆಗಬೇಕು.
ದೇವರು ಪಾಸ್ಟರ್ ಮುಖಾಂತರ ಮಾಡಿದ  ಅದ್ಭುತಕ್ಕಾಗಿ ಸ್ತೋತ್ರ👏

ಹಾಗೆಯೇ, ನಾವು ಹೊಲದಲ್ಲಿ ಎಷ್ಟು ಬೆಳೆ ಮಾಡಿದರೂ ಸ್ವಲ್ಪ ಹಣ ಮಾತ್ರ ಬರುತ್ತಿತ್ತು.
ಈ ವರ್ಷ ಪಾಸ್ಟರ್ ಹತ್ತಿರ ಪ್ರಾರ್ಥನೆ ಮಾಡಿಸಿಕೊಂಡು ಹೊಲದಲ್ಲಿ ಬೀಜ ಬಿತ್ತಿದಾಗ, ದೇವರು ಆಶೀರ್ವದಿಸಿ ಎರಡರಷ್ಟು ಲಾಭ ನೀಡಿದರು.

ದೇವರು ಪಾಸ್ಟರ್ ಮುಖಾಂತರ ಮಾಡಿದಂತಹ ಅದ್ಭುತಕ್ಕಾಗಿ ಮತ್ತು ವಾಕ್ಯಗಳ ಮುಖಾಂತರ ನಮ್ಮ ಜೀವನಕ್ಕೆ ಹೊಸ ಬಲ, ಕೃಪೆ ಮತ್ತು ಬದಲಾವಣೆ ತಂದಿದ್ದಕ್ಕಾಗಿ ಸ್ತೋತ್ರ.
 ನಾನು ಸಾಕ್ಷಿ  ಹೇಳುವಂತೆ  ದೇವರು ಮಾಡಿದ ಉಪಕಾರಕ್ಕಾಗಿ ದೇವರಿಗೆ ಸ್ತೋತ್ರ!🙏


ಫಾಲೋ ಮಾಡಿ, ಲೈಕ್ ಮಾಡಿ, ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ!




  
           
SCAN FOR THE LOCATION 

For Prayer Request WhatsApp: 9880516003

GOOGLE MEET LINK - TO JOIN MORNING PRAYER @6 AM from MONDAY TO FRIDAY


Comments

  1. Glory to god 👏👏👏👏🔥🔥powerful testimony Thank you PASTOR god bless you and your family members abundantly In Jesus mighty name i pray Amen Amen Amen 🙏👏🔥❤️

    ReplyDelete
  2. Glory to God 🙏 Power Full testimony 🔥🔥🔥🔥🥳🥳🥳🥳🎉🎉🎉🎉🎉

    ReplyDelete
  3. Glory Glory to Jesus only 🙏🏻🙏🏻🔥🔥👏🏻👏🏻

    ReplyDelete
  4. Glory GLORY GLORY to god 🙏🔥

    ReplyDelete
  5. ದೇವರ ನಮಕ್ಕೆ ಮಹಿಮೆ ಉಂಟಾಗಲಿ, ದೇವರು ಈ ಸಾಕ್ಷಿಯಾ ಮುಖತರವಾಗಿ ನನ್ನ ಜೀವನ ಬದಲಾಯಿಸಿದಕ್ಕೋಸ್ಕರ ದೇವರ ನಮ್ಮಕ್ಕೆ ಸ್ತೋತ್ರ!!

    ReplyDelete

Post a Comment

Popular posts from this blog

2025 ಅಕ್ಟೋಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "ಇಲ್ಲದ್ದನ್ನು ಕರೆಯುವುದು" (Month of Calling Things that do not exist )

2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)