2025 ನೇ ವರ್ಷ ಸೆಪ್ಟೆಂಬರ್ ತಿಂಗಳಿಗೆ ದೇವರು ಕೊಟ್ಟ ಪ್ರವಾದನೆಯ ವಾಗ್ದಾನವು "Deliver" (ಕೊಡಲ್ಪಡುವುದು)
ಓದುತ್ತಿರುವ ಪ್ರತಿಯೊಬ್ಬ ಸಹೋದರ ಸಹೋದರಿಯರಿಗೆ ನನ್ನ ಪ್ರೀತಿಯ ವಂದನೆಗಳು ಮತ್ತು ಯೇಸುಕ್ರಿಸ್ತನ ಹೆಸರಿನಲ್ಲಿ ನಿಮ್ಮನ್ನು ಆಶೀರ್ವದಿಸುತ್ತಿದ್ದೇನೆ.
ಎಂಟು ತಿಂಗಳು ಮುಗಿದು ಒಂಬತ್ತನೇ ತಿಂಗಳಿಗೆ ಕಾಲಿಡಲು ದೇವರು ಕೊಟ್ಟ ಕೃಪೆಗೋಸ್ಕರ ಸ್ತೋತ್ರ. ಈ ತಿಂಗಳಿನ ವಾಗ್ದಾನ "Deliver" (ಕೊಡಲ್ಪಡುವುದು)
"Deliver" ಅಂದರೆ ಕೊಡಲ್ಪಡುವುದು. Deliver ಎಂಬುದಾಗಿ ಧ್ಯಾನ ಮಾಡಬೇಕಾದರೆ ದೇವರು ಕೊಟ್ಟ ದರ್ಶನ ಏನೆಂದರೆ 9 ತಿಂಗಳು ಗರ್ಭ ಧರಿಸಿದ ಹೆಣ್ಣುಮಗಳಿಗೆ ಒಂಬತ್ತು ತಿಂಗಳಿನ ನಂತರ delivery ಆಗುತ್ತದೆ. ಆದರೆ ಒಂಬತ್ತು ತಿಂಗಳು ಆ ಮಗು ಕಣ್ಣಿಗೆ ಕಾಣಿಸುವುದಿಲ್ಲ, ಏನಾಗುತ್ತಿದೆ ಎಂದು ಗೊತ್ತಾಗುವುದಿಲ್ಲ, ಆದರೆ ಸಮಯ ಬಂದಾಗ ನೂರು ಪ್ರತಿಶತದಷ್ಟು ಗ್ಯಾರಂಟಿಯಾಗಿ ಗರ್ಭದಲ್ಲಿರುವ ಮಗು ಕಣ್ಣಿಗೆ ಕಾಣಿಸುತ್ತದೆ. ಆಮೆನ್.
ಕೊರಿಯರ್ ನಲ್ಲಿ ಒಂದು ಪಾರ್ಸೆಲ್ ಬರುವಾಗ ಸರಿಯಾದ ಸ್ಥಳದಲ್ಲಿ, ಸರಿಯಾದ ಸಮಯದಲ್ಲಿ ಆ ವ್ಯಕ್ತಿ ಇರುವಾಗ ಪಾರ್ಸೆಲ್ "Deliver" ಆಗುತ್ತದೆ. ಅದೇ ರೀತಿ ದೇವರು ಸರಿಯಾದ ಸಮಯದಲ್ಲಿ, ಸರಿಯಾದ ಸ್ಥಳದಲ್ಲಿ, ಸರಿಯಾದ ವ್ಯಕ್ತಿಯ ಮೂಲಕ ನಿಮಗೆ ಪಾರ್ಸಲ್ "Deliver" ಮಾಡುತ್ತಾರೆ.
ರೂತಳು 2:2 - ಮೋವಾಬ್ಯಳಾದ ರೂತಳು ನೊವೊವಿುಗೆ – ನಾನು ಹೋಗಿ ಯಾವನು ನನಗೆ ದಯೆತೋರಿಸುವನೋ ಅವನ ಹೊಲದಲ್ಲಿ ಹಕ್ಕಲತೆನೆಗಳನ್ನು ಕೂಡಿಸಿಕೊಂಡು ಬರುವೆನು ಅಂದಳು.
ಯಾರ ಕಣ್ಣಲ್ಲಿ ದಯೆ, ಕೃಪೆ ಸಿಗುವುದೋ ಅಲ್ಲಿ ಕೆಲಸ ಮಾಡುತ್ತೇನೆ ಎಂದು ರೂತಳು ಹೇಳಿದಳು.
ಕೃಪೆಯ ಆತ್ಮ ನಿಮ್ಮನ್ನು ನಡೆಸುವಾಗ ಸರಿಯಾದ ಸಮಯಕ್ಕೆ, ಸರಿಯಾದ ಸ್ಥಳಕ್ಕೆ ಕರೆದುಕೊಂಡು ಹೋಗಿ, ಸರಿಯಾದ ವ್ಯಕ್ತಿ ಬೋವಜ್ ನನ್ನು ಭೇಟಿ ಮಾಡುವ ಹಾಗೆ ಮಾಡುತ್ತದೆ. ದೇವರ ಮಿತಿಯಿಲ್ಲದ, ಅಳತೆ ಮಾಡಲಾಗದ ಉದ್ದೇಶಪೂರ್ವಕವಾದ ಫಲಗಳು, ಪಾರ್ಸಲ್ ಗಳು ನಿಮಗೆ ದೊರಕಿ, ನೀವು ಎದುರು ನೋಡದೆ ಇರುವ ತುಂಬಿ ತುಳುಕುವ ಆಶೀರ್ವಾದಗಳನ್ನು ಹೊಂದಿಕೊಳ್ಳುವಿರಿ ಮತ್ತು ತೃಪ್ತಿಯಾಗಿ ಅನುಭವಿಸುವಿರಿ.
ವಾಗ್ದಾನದ ವಾಕ್ಯ :
ಕೀರ್ತನೆ - 68:19 - ಪ್ರತಿ ದಿನವೂ ನಮ್ಮನ್ನು ಮೇಲುಗಳಿಂದ ತುಂಬಿಸು, ಕರ್ತನು ಅಂದರೆ ನಮ್ಮ ರಕ್ಷಣೆಯ ದೇವರು ಸ್ತುತಿ ಹೊಂದಲಿ.
ದೇವರು ನಿಮಗೆ ಪ್ರತಿ ದಿನವೂ ಪಾರ್ಸಲ್ ಗಳನ್ನು ಕೊಟ್ಟಿದ್ದಾನೆ.
ಪ್ರತಿಯೊಂದು ದಿನವೂ ಆತನು ನಿಮ್ಮನ್ನು ರಕ್ಷಿಸುವವನಾಗಿದ್ದಾನೆ, ಆತನು ನಿಮಗೆ ರಕ್ಷಕನಾಗಿ ಇರುವುದೇ ಆತನ ಆಶೀರ್ವಾದಗಳನ್ನು ನೀವು ಅನುಭವಿಸುವುದಕ್ಕಾಗಿ, ಆಮೆನ್. ಆದ್ದರಿಂದ ಯೇಸುವಿನ ನಾಮದಲ್ಲಿ ನೀವು ಎದುರು ನೋಡುವುದಕ್ಕಿಂತಲೂ, ನೀವು ಯೋಚಿಸುವುದಕ್ಕಿಂತಲೂ, ನೀವು ಬೇಡಿಕೊಳ್ಳುವುದಕ್ಕಿಂತಲೂ ಅಧಿಕವಾದ ದೇವರ ಆಶೀರ್ವಾದಗಳು, ದೇವರ ಫಲಗಳು ನಿಮಗೆ ಪ್ರಕಟವಾಗುತ್ತವೆ, ಇದನ್ನು ನೀವು ಆತ್ಮದಲ್ಲಿ ಹೊಂದಿಕೊಳ್ಳಬೇಕು, ಆಮೆನ್.
ಒಂದೊಂದು ದಿನವೂ ಕೊರತೆ ಇಲ್ಲದಂತೆ ಬೇಕಾದದ್ದೆಲ್ಲವನ್ನು, ನಮಗೆ ತಿಳಿದಿದೆಯೋ ಇಲ್ಲವೋ ಪಾರ್ಸಲ್ ಗಳು ನಮಗೆ ಕೊಡಲ್ಪಡುತ್ತಲೇ ಇರುತ್ತವೆ.
ಆಧಾರವಾದ ದೇವರ ವಾಕ್ಯಗಳು:
2 ಪೇತ್ರನು 1:3 - "ನಮ್ಮನ್ನು ತನ್ನ ಪ್ರಭಾವದಿಂದಲೂ ಗುಣಾತಿಶಯದಿಂದಲೂ ಕರೆದ ದೇವರ ವಿಷಯವಾಗಿ ಯೇಸುವಿನ ದಿವ್ಯ ಶಕ್ತಿಯು ನಮಗೆ ಪರಿಜ್ಞಾನವನ್ನು ಕೊಟ್ಟದ್ದರಲ್ಲಿ ಜೀವಕ್ಕೂ ಭಕ್ತಿಗೂ ಬೇಕಾದದ್ದೆಲ್ಲವು ದೊರೆಯಿತೆಂದು ಬಲ್ಲೆವಷ್ಟೆ."
ದೇವರ ಶಕ್ತಿ, ದೇವರ ಸಾಮರ್ಥ್ಯ, ದೇವರ ಆತ್ಮ ನಮ್ಮಲ್ಲಿ ಇಟ್ಟಿರುವುದೇ ಆ ದೇವರ ಆತ್ಮದ ಮೂಲಕ ನಮಗೆ ಪ್ರತಿದಿನವೂ ಬೇಕಾಗಿರುವ ಕಾರ್ಯಗಳು ದೇವರ ಉದ್ದೇಶದ ಪ್ರಕಾರ ನಡೆಯುವಂತೆ ಯೇಸುಕ್ರಿಸ್ತನ ಜ್ಞಾನದಿಂದ ನಮ್ಮನ್ನು ತುಂಬಿಸಿ, ಪ್ರತಿ ದಿನವೂ ಆತನ ಒಳ್ಳೆಯತನ, ಆತನ ಮಹಿಮೆ ನಮ್ಮಲ್ಲಿ ಎಂದೆಂದೂ ಪ್ರಕಟವಾಗುತ್ತಲೇ ಇರಬೇಕು ಎಂದು ದೇವರು ಅದನ್ನು ಈಗಾಗಲೇ ನೆರವೇರಿಸಿದ್ದಾರೆ.
ಈಗ ಕಳುಹಿಸಿಕೊಟ್ಟಿರುವ ಕಾರ್ಯಗಳು ಅಂದರೆ ನೆರವೇರಿಸಿರುವ ಕಾರ್ಯಗಳನ್ನು ಈಗ ನಿಮ್ಮ ಶರೀರದಲ್ಲಿ ಕಾಣುವ ರೂಪದಲ್ಲಿ ಪಾರ್ಸಲ್ ಗಳಾಗಿ ನೀವು ಹೊಂದಿಕೊಳ್ಳುತ್ತೀರಿ. ಅಂದರೆ ದೇವರ ಕಾರ್ಯಗಳನ್ನು ಸ್ವೀಕರಿಸುತ್ತಿದ್ದೀರಿ. ಅದರ ಫಲವನ್ನು ತೃಪ್ತಿಯಾಗಿ ಅನುಭವಿಸುತ್ತಿದ್ದೀರಿ. ಎಂದು ಯೇಸುವಿನ ನಾಮದಲ್ಲಿ ಅರಿಕೆ {Declare} ಮಾಡುತ್ತೇನೆ, ಆಮೆನ್.
ನಾವು ಇದುವರೆಗೂ ಎದುರುI ನೋಡದಿರುವಂತಹ ಕಾರ್ಯಗಳು ಒಂದು ಪಾರ್ಸಲ್ ಅಥವಾ ಒಂದು ಉಡುಗೊರೆಯಾಗಿ ನಮಗೆ ಬಂದರೆ ಅದು ಎಂತಹ ಖುಷಿ, ಎಂತಹ ಸಂತೋಷ.
ಯಾವುದೋ ಒಂದು ಉಡುಗೊರೆ ನಮಗೆ ಬರುತ್ತದೆ ಎಂದು ನಮಗೆ ತಿಳಿದು ಬರುವುದಕ್ಕಿಂತ, ತಿಳಿಯದೆ ಬರುವಂತಹ ಒಂದು ಉಡುಗೊರೆ ನಮಗೆ ಬಹಳ ಉತ್ಸಾಹವನ್ನು ಉಂಟು ಮಾಡುತ್ತದೆ. ಬಹಳ ಆಶ್ಚರ್ಯವನ್ನು ಉಂಟುಮಾಡುತ್ತದೆ, ಆಮೆನ್.
ಅದೇ ರೀತಿಯಾಗಿ ಈ ತಿಂಗಳು ನಾನು ನಿಮಗೆ ಪ್ರವಾದನೆಯಾಗಿ ಮಾತನಾಡುತ್ತೇನೆ, ಯೇಸುವಿನ ನಾಮದಲ್ಲಿ ನೀವು ಎದುರು ನೋಡದೆ ಇರುವಂತಹ ದೇವರ ಕಾರ್ಯಗಳು ನಿಮ್ಮ ಜೀವಿತದಲ್ಲಿ ನೆರವೇರುತ್ತವೆ ಎಂಬುದಾಗಿ ಒಂದು ಯೋಚನೆಯೂ ಇಲ್ಲದೆ ಇರುವಂತಹ ಮಹತ್ತಾದ ಕಾರ್ಯಗಳನ್ನು ನೀವು ಹೊಂದಿಕೊಳ್ಳುವಿರಿ ಎಂದು ನಾನು ನಿಮಗೆ ಯೇಸುವಿನ ಹೆಸರಿನಲ್ಲಿ ಅರಿಕೆ {Declare} ಮಾಡುತ್ತೇನೆ ಆಮೆನ್.
ಎಲ್ಲವೂ ನಿಮಗೆ ಅನುಕೂಲವಾಗಿಯೂ, ನಿಮಗೆ ಆಶೀರ್ವಾದವಾಗಿಯೂ ಮತ್ತು ಜಯವಾಗಿಯೂ ಕಾರ್ಯಗಳು ಈ ತಿಂಗಳು ದೇವರು ನಿಮಗೆ ಮಾಡಿದ್ದಾನೆ ಎಂದು ಅರಿಕೆ {Declare} ಮಾಡುತ್ತೇನೆ.
ಯೇಸುವಿನ ನಾಮದಲ್ಲಿ ಸ್ವೀಕರಿಸಿಕೊಳ್ಳಿರಿ. ಎಲ್ಲಾ ಪಾರ್ಸಲ್ ಗಳು ನಿಮ್ಮ ಜೀವನದಲ್ಲಿ ನಿಮಗೆ ಕೊಡಲ್ಪಡುವುದು ಎಂದು ಅರಿಕೆ {Declare}ಮಾಡುತ್ತೇನೆ. ಆಮೆನ್. 🙏🏻
ಕ್ಯಾಂಪ್ ಮೀಟಿಂಗ್ ನಲ್ಲಿ ಭಾಗವಹಿಸಿದ ನಂತರ ನಡೆದ ಸಾಕ್ಷಿ:
ನಾನು ಬೆಂಗಳೂರಿಗೆ ಹೋಗುವಾಗಲೇ ಆರೋಗ್ಯ ಸರಿ ಇರಲಿಲ್ಲ. ಆದರೆ ಅಲ್ಲಿ ಮೊದಲನೆಯ ದಿನವೇ ಪಾಸ್ಟರ್ "ಸ್ವಸ್ಥತೆ"ಯ ಬಗ್ಗೆ ವಾಕ್ಯವನ್ನು ಹೇಳಿ, ಪ್ರಾರ್ಥಿಸುವಾಗಲೇ ಸಂಪೂರ್ಣ ಗುಣವಾಯಿತು ಮತ್ತು ಇದುವರೆಗೂ ಯಾವುದೇ ಅನಾರೋಗ್ಯ ತಿರುಗಿ ಬಂದಿಲ್ಲ.
ಎರಡನೆಯ ದಿನ "ಸಮೃದ್ಧಿ" {Prosperity} ಯ ಬಗ್ಗೆ ವಾಕ್ಯವನ್ನು ಹೇಳಿ, ಚಟುವಟಿಕೆ {Activity} ಯನ್ನು ಮಾಡಿಸುವಾಗ ನಿಮ್ಮ ಸಮಸ್ಯೆಯನ್ನು ಬರೆದು, ಬೀಜ {Seed} ದೊಂದಿಗೆ ಡಬ್ಬಿಯಲ್ಲಿ ಹಾಕಿ ಎಂದು ಪಾಸ್ಟರ್ ಹೇಳಿದರು. "ಬೇರೆಯವರು ನಮಗೆ ಕೊಡಬೇಕಾದ ಹಣ ಕೊಡುವಂತೆ ಮತ್ತು ನಾವು ಇನ್ನೊಬ್ಬರಿಗೆ ಕೊಡಬೇಕಾದ ಹಣ ಕೊಡುವಂತೆ ದೇವರು ಸಹಾಯ ಮಾಡಲಿ" ಎಂದು ಬೀಜ {Seed} ದೊಂದಿಗೆ ಬರೆದು ಹಾಕಿದ್ದೆ.
ದೇವರು ಒಂದೇ ತಿಂಗಳಲ್ಲಿ ನಮ್ಮ ತಂದೆಯವರಿಗೆ ಬರಬೇಕಾದ ಹಣ ಮತ್ತು ಒಂದು ವರ್ಷದಿಂದ ಬರಬೇಕಾದ ಸಂಬಳ ಬರುವಂತೆ ಮಾಡಿ, ನಾವು ಕೊಡಬೇಕಾದ ಹಣ ಕೊಡುವಂತೆ ಸಹಾಯ ಮಾಡಿದ್ದಾರೆ. Amen 🙏🏻
ಫಾಲೋ ಮಾಡಿ, ಲೈಕ್ ಮಾಡಿ, ಕಾಮೆಂಟ್ ಮಾಡಿ ಮತ್ತು ಶೇರ್ ಮಾಡಿ!
.png)
TO JOIN MORNING PRAYER @6 AM from MONDAY TO FRIDAY
Glory to god Praise the lord for the promise word of god for this Nineth month all GLORY to be lord Jesus Christ alone. God bless and fulfilled all there heart desires one who read my beloved Brothers and sisters in Christ i pray in the mighty Jesus Christ name Amen Amen Amen thank you PASTOR for the Powerful Promise verse of this month 🙏🔥👏❤️💯❤️🔥
ReplyDeleteMuch Blessings to you brother!
DeletePraise the lord Father 🙏 ದೇವರನಾಮಕ್ಕೆ ಸ್ತೋತ್ರ ವಾಗಲಿ ಈ ತಿಂಗಳ ವಾಗ್ದಾನದ ಪ್ರಕಾರ ನಮ್ಮ ಜೀವಿತದಲ್ಲಿ ಈ ವರ್ಷದ ಎಂಟು ತಿಂಗಳುಗಳು ಸಹ ಈಗ ನಾವು ಕೇಳ್ತಿರುವ ಸತ್ಯದ ಆತ್ಮ ನಮ್ಮನ್ನು ನಡೆಸುತ್ತಿರುವುದಕ್ತಾಗಿ ಸ್ತೋತ್ರ ಯಾವುದು ಇದುವರೆಗೆ ನಡೆಯದೇ ಇರತಕ್ಕಂತಹ ಕಾರ್ಯಗಳು ಸಹ ಈ ತಿಂಗಳಲ್ಲಿ ನಮ್ಮ ಜೀವಿತದಲ್ಲಿ ನಡದಿದ್ದಾಕ್ಕಾಗಿ ಸ್ತೋತ್ರ ಆತ್ಮದಿಂದಮಂಡಲದಲ್ಲಿ ಅದು ನೆರವೇ ಇರುವುದರಿಂದ ಅದು ಕಣ್ಣಿಗೆ ಕಾಣುವ ರೂಪದಲ್ಲಿ ಪ್ರಕಟವಾಗಿದ್ದಕ್ಕಾಗಿ ಸ್ತೋತ್ರ ಆಮೆನ್ 🙏
ReplyDeleteBlessing to you brother!
DeleteGlory to God 🙏 Thank you Jesus 🙏
ReplyDelete